Advertisement
18 ಸಾವಿರ ಕಾಯುವಿಕೆ: ಜಿಲ್ಲಾದ್ಯಂತ 22 ಸಾವಿರ ಮಂದಿಗೆಮೊದಲ ಲಸಿಕೆ ಕೋವ್ಯಾಕ್ಸಿನ್ ಲಸಿಕೆ ಹಾಕಲಾಗಿದೆ. ಇದರಲ್ಲಿಈಗಾಗಲೇ 2 ಸಾವಿರ ಮಂದಿಗೆ 2ನೇ ಲಸಿಕೆ ನೀಡಲಾಗಿದೆ.ಉಳಿದಂತೆ ಬುಧವಾರ ಸಂಜೆ ಬರುವ 2 ಸಾವಿರ ಲಸಿಕೆಯನ್ನುಗುರುವಾರ ನೀಡಲಾಗುತ್ತಿದೆ. ಇನ್ನುಳಿದ 18 ಸಾವಿರ ಮಂದಿಗೆಲಸಿಕೆ ಇಲ್ಲದಂತಾಗಿದೆ.
Related Articles
Advertisement
ಜಿಲ್ಲೆಗೆ ಕಳೆದ 10 ದಿನಗಳಿಂದ ಕೊವ್ಯಾ ಕ್ಸಿನ್ ಲಸಿಕೆ ಪೂರೈಕೆಸ್ಥಗಿತಗೊಂಡಿತ್ತು. ಈಗ, 3700 ಡೋಸ್ ಲಸಿಕೆ ಹಾಸನ ಜಿಲ್ಲೆಗೆಬಿಡುಗಡೆಯಾಗಿದೆ.ಜಿಲ್ಲೆಗೆ ಒಟ್ಟು 38 ಸಾವಿರ ಕೊವ್ಯಾಕ್ಸಿನ್ ಚುಚ್ಚು ಮದ್ದುಸರಬರಾಜಾಗಿತ್ತು. ಒಂದನೇ ಡೋಸ್ ಪಡೆದು 28 ದಿನಪೂರೈಸಿದವರಿಗೆ 2ನೇ ಡೋಸ್ ಪಡೆಯಲು 15,600ಮಂದಿ ಕಾಯುತ್ತಿದ್ದಾರೆ. 3700 ಕೊವ್ಯಾಕ್ಸಿನ್ ಚುಚ್ಚುಮದ್ದು ಬುಧವಾರ ಹಾಸನಜಿಲ್ಲೆಗೆ ಬಿಡುಗಡೆಯಾ ಗಿದ್ದು ಗುರುವಾರ ದಿಂದ 2ನೇಡೋಸ್‌ಗೆ ಅರ್ಹರಿದ್ದವರು ಲಸಿಕೆಯನ್ನು ಸರ್ಕಾರಿಆಸ್ಪತ್ರೆ ಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪಡೆದುಕೊಳ್ಳಬಹುದು.
ಆತಂಕ ಪಡುವ ಅಗತ್ಯವಿಲ್ಲ: ಕೊವ್ಯಾಕ್ಸಿನ್ ಲಸಿಕೆಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಬುಧವಾರ ಹಾಸನಜಿಲ್ಲೆಗೆ 3700 ಡೋಸ್ ಹಂಚಿಕೆಯಾಗಿದ್ದು,ಗುರುವಾರದಿಂದ 2ನೇ ಡೋಸ್ ಪಡೆಯಲುಅರ್ಹರಾಗಿರುವವರು ಅಂದರೆ ಮೊದಲ ಲಸಿಕೆ ಪಡೆದು 28ದಿನ ಪೂರೈಸಿದವರು ಲಸಿಕೆ ಪಡೆದುಕೊಳ್ಳಬಹುದಾಗಿದೆ. 28ದಿನ ಮುಗಿದ ತಕ್ಷಣವೇ 2ನೇ ಡೋಸ್ ಪಡೆಯಬೇಕೆಂದೇನಿಲ್ಲ. 4 ರಿಂದ 6ವಾರಗಳ ನಡುವೆ 2ನೇ ಡೋಸ್ ಪಡೆದರೆ ಸಾಕು. ಕೆಲ ದಿನಗಳು ಹೆಚ್ಚುಕಡಿಮೆಯಾದರೂ ಆತಂಕಪಡದೆ 2ನೇ ಡೋಸ್ ಲಸಿಕೆ ಪಡೆಯಬೇಕು.ಮೊದಲ ಲಸಿಕೆ ಪಡೆದು 6 ವಾರ ಸಮೀಪಿಸುತ್ತಿರುವವರು ಆದ್ಯತೆ ಮೇಲೆಲಸಿಕೆ ಪಡೆಯಬೇಕು. ಮುಂದಿನ ದಿನಗಳಲ್ಲಿ ಹಂತ, ಹಂತವಾಗಿಲಸಿಕೆ ಪೂರೈಕೆಯಾಗಲಿದೆ. ನೂಕು ನುಗ್ಗಲಿನಲ್ಲಿ ಲಸಿಕೆಪಡೆಯುವ ಧಾವಂತ ಬೇಡ ಎಂದು ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ಕುಮಾರ್‌ತಿಳಿಸಿದ್ದಾರೆ.
ಆತಂಕ ಎದುರಾಗಿದೆ: ನಾನು ಕೊವ್ಯಾಕ್ಸಿನ್ ಲಸಿಕೆಪಡೆದು 39 ದಿನವಾಗಿದೆ. ಮೊದಲ ಡೋಸ್ ಪಡೆದ 28 ದಿನದನಂತರ 2ನೇ ಡೋಸ್ ಪಡೆಯಬೇಕೆಂದು ಸೂಚಿಸಲಾಗಿತ್ತು. ಆದರೆ,ಇದುವರೆಗೂ ಲಸಿಕೆ ಪೂರೈಕೆಯಿಲ್ಲ ಎಂದು ಆಸ್ಪತ್ರೆಯಲ್ಲಿ ಹೇಳುತ್ತಿದ್ದಾರೆ. ನಿರ್ದಿಷ್ಟ ಅವಧಿಯಲ್ಲಿ 2ನೇ ಡೋಸ್ ಪಡೆಯದಿದ್ದರೆಮೊದಲ ಡೋಸ್ ಪಡೆದದ್ದೂ ವ್ಯರ್ಥವಾದೀತೆ ಎಂಬ ಆತಂಕಎದುರಾಗಿದೆ. ಸರ್ಕಾರ ಕೊವ್ಯಾಕ್ಸಿನ್ ಲಸಿಕೆ ಪೂರೈಕೆ ಮಾಡಿ 2ನೇಡೋಸ್‌ಗೆ ಅರ್ಹರಿರುವ ಹಿರಿಯ ನಾಗರೀಕರು ಮತ್ತು 45 ವರ್ಷಮೇಲ್ಪಟ್ಟವರಿಗೆ ಆದ್ಯತೆ ಮೇಲೆ ನೀಡಲಿ. ಆನಂತರ 18 ವರ್ಷಮೇಲ್ಪಟ್ಟವರಿಗೆ ನೀಡಲಿ ಎಂದು ಮೊದಲ ಡೋಸ್ ಕೊವ್ಯಾಕ್ಸಿನ್‌ಲಸಿಕೆ ಪಡೆದ ಹಾಸನದ ವಿವೇಕ ನಗರದ ಅನ್ನಪೂರ್ಣ ಮನವಿಮಾಡಿದ್ದಾರೆ.