ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬೆಡ್, ಆಮ್ಲಜನಕದ ಕೊರತೆಯಿಲ್ಲ ಎಂದು ಜಿಲ್ಲಾ ಧಿಕಾರಿ ಸ್ಪಷ್ಟಪಡಿಸಿದರೂ ಸೋಂಕಿತನೊಬ್ಬನಿಗೆ ಮೊದಲು ಚಿಕಿತ್ಸೆಗೆ ನಿರಾಕರಿಸಿ ನಂತರದಾಖಲಿಸಿಕೊಂಡ ಘಟನೆ ಜಿಲ್ಲಾ ಕೋವಿಡ್ ಆಸ್ಪತ್ರೆಮುಂದೆ ನಡೆದಿದೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೋನಪಲ್ಲಿ ಗ್ರಾಮದ ವ್ಯಕ್ತಿಯೊಬ್ಬ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲುಬಂದಿದ್ದು, ಉಸಿರಾಟದ ತೊಂದರೆ ಆಗಿದ್ದರಿಂದ ಖಾಸಗಿ ಆಸ್ಪತ್ರೆಯವರು ಜಿಲ್ಲಾಸ್ಪತ್ರೆಗೆ ತೆರಳಲು ಸೂಚನೆ ನೀಡಿದ್ದಾರೆ.
ಜಿಲ್ಲಾಸ್ಪತ್ರೆಗೆ ಬಂದಿದ್ದ ರೋಗಿಯನ್ನು ಸರ್ಕಾರದನಿಯಮಗಳನ್ವಯ ಆರ್‌ಟಿಪಿಸಿಆರ್ ಆಗಿದ್ದರೆ ಮಾತ್ರ ಚಿಕಿತ್ಸೆ ನೀಡಲು ಸಾಧ್ಯ ಎಂದು ಹೇಳಿ ಚಿಕಿತ್ಸೆ ನೀಡಲು ವೈದ್ಯರುನಿರಾಕರಿಸಿದ್ದಾರೆ ಎನ್ನಲಾಗಿದೆ. ಇದರಿಂದ ದಿಕ್ಕುತೋಚದಕುಟುಂಬ ಸದಸ್ಯರು ಆಸ್ಪತ್ರೆಯ ಮುಂಭಾಗವೇ ಗೋಳಾಡಿದ್ದಾರೆ.
ಕೊರೊನಾ ಸೋಂಕಿತ ಚಿಕಿತ್ಸೆ ನರಳುತ್ತಿದ್ದನ್ನುನೋಡಿದ ಸ್ಥಳೀಯರು, ಕೂಡಲೇ ಚಿಕಿತ್ಸೆ ನೀಡಲುಒತ್ತಾಯಿಸಿದ್ದಾರೆ. ಮತ್ತೂಂದಡೆ ಇದೇ ಮಾರ್ಗದಲ್ಲಿತೆರಳುತ್ತಿದ್ದ ಎಸ್ಪಿ ಮಿಥುನ್‌ಕುಮಾರ್ ಬಂದು ಸೋಂಕಿತನಿಗೆಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿ ಸಮಸ್ಯೆಯನ್ನುಇತ್ಯರ್ಥಗೊಳಿಸಿದ್ದಾರೆ.
ನಿಯಮಗಳಿಂದ ವೈದ್ಯರಿಗೆ ಗೊಂದಲ: ಕೊರೊನಾಸೋಂಕಿತರಿಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಯಿಂದಕೆಲವೊಂದು ನಿಯಮಗಳನ್ನು ಜಾರಿಗೊಳಿಸಿದ್ದು,ಅದರನ್ವಯ ಚಿಕಿತ್ಸೆ ನೀಡಬೇಕಾಗುತ್ತದೆ. ಆದರೆ, ಜನರಿಗೆಗೊತ್ತಾಗದೆ ಚಿಕಿತ್ಸೆ ನೀಡಲು ಒತ್ತಾಯಿಸುವುದರಿಂದ ಅತ್ತಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಸರ್ಕಾರದನಿಯಮಗಳನ್ನು ಪಾಲಿಸಬೇಕಾ? ಅಥವಾಮಾನವೀಯತೆಯಿಂದ ಚಿಕಿತ್ಸೆ ನೀಡಬೇಕಾ? ಎಂಬಗೊಂದಲದಲ್ಲಿ ಸಿಲುಕುವಂತಹ ಪರಿಸ್ಥಿತಿನಿರ್ಮಾಣವಾಗಿದೆ. ಆರ್.ಟಿ.ಪಿ.ಸಿ.ಆರ್ ಆಗಿದ್ದರೆ ಮಾತ್ರಚಿಕಿತ್ಸೆ ನೀಡಲು ಅವಕಾಶಗಳಿದ್ದು, ಹೀಗಾಗಿ ಗೊಂದಲದ ವಾತಾವರಣ ನಿರ್ಮಾಣಗೊಂಡಿದೆ.