Advertisement

ತಾಪಂ ಅನುದಾನಕ್ಕೂ ಕೋವಿಡ್ ಎಫೆಕ್ಟ್

07:59 PM Sep 04, 2020 | Suhan S |

ಹೊಸನಗರ: ಪ್ರತಿ ವರ್ಷ 2 ಕೋಟಿ ಅನುದಾನ ಬರುತ್ತಿದ್ದ ತಾಪಂಗಳಿಗೆ ಈ ಬಾರಿ 50 ಲಕ್ಷ ಕಡಿತ ಮಾಡಲಾಗಿದೆ. ರಾಜ್ಯದಲ್ಲಿ ವ್ಯಾಪಿಸುತ್ತಿರುವ ಕೋವಿಡ್ ಸೋಂಕು ಎಫೆಕ್ಟ್ ಇದಾಗಿದೆ.

Advertisement

ಸುತ್ತೋಲೆ ಏನು?: ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ 2019-20 ಸಾಲಿನಲ್ಲಿ ತಾಪಂ ಅನಿರ್ಬಂಧಿತ ಅನುದಾನವನ್ನು 2020-21 ಸಾಲಿನಲ್ಲಿ ಬಿಡುಗಡೆಗೊಳಿಸಲು ಸಾಧ್ಯವಿಲ್ಲ. 2020-21 ಸಾಲಿನ ಆಯವ್ಯಯದಲ್ಲಿ ತಾಪಂ ಅನುದಾನದ ಲೆಕ್ಕ ಶೀರ್ಷಿಕೆಯಡಿ ಹಂಚಿಕೆ ಮಾಡಿರುವ ರೂ. 150 ಲಕ್ಷ ಅನುದಾನದ ಕ್ರಿಯಾಯೋಜನೆ ಮಾಡುವ ಸಂದರ್ಭದಲ್ಲಿ ಬಾಕಿ ಉಳಿದ ಬಿಲ್‌ ಪಾವತಿಯನ್ನು ಅಳವಡಿಸಿಕೊಳ್ಳಬೇಕು. ಉಳಿದ ಅನುದಾನಕ್ಕೆ ಮಾತ್ರ ಹೊಸ ಕಾಮಗಾರಿಗಳನ್ನು ತೆಗೆದುಕೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸೂಚಿಸಿದೆ.

ರೂ.1.5 ಕೋಟಿಗೆ ಇಳಿಕೆ: ಕೋವಿಡ್‌-19 ಸೋಂಕಿನ ನೆಪ ಹೇಳಿ ಬಾಕಿ ಉಳಿದ ಬಿಲ್‌ಗ‌ಳಿಗೆ ತಿಲಾಂಜಲಿ ಇಟ್ಟ ಸರ್ಕಾರ, ವರ್ಷಂ ಪ್ರತಿ ನೀಡುವ 2 ಕೋಟಿ ಅನುದಾನದಲ್ಲೂ ರೂ.50 ಲಕ್ಷ ಕಡಿತಗೊಳಿಸಿರುವುದು ಗಾಯದ ಮೇಲೆ ತುಪ್ಪ ಸವರಿದಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಈಗಾಗಲೇ ಒಂದು ಮೂಲದ ಪ್ರಕಾರ ರಾಜ್ಯದ 122 ತಾಪಂಗಳು 2019-20 ಅನುದಾನದಲ್ಲಿ ಕಾಮಗಾರಿಯನ್ನು ನಿರ್ವಹಿಸಿದ್ದರು. ಅನುದಾನ ಪಡೆಯುವಲ್ಲಿ ವಿಫಲವಾಗಿವೆ. 2020-21 ಅನುದಾನ ಹಳೇ ಕಾಮಗಾರಿಗಳಿಗೆ ಬಳಸಿದಲ್ಲಿ ಹೊಸ ಕಾಮಗಾರಿಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಬಹುತೇಕ ತಾಪಂಗಳ ತಲೆನೋವಿಗೆ ಕಾರಣವಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ನೀಡಿರುವ ಸುತ್ತೋಲೆಯಲ್ಲಿ ಸಾಗರ ತಾಪಂ ಅಧ್ಯಕ್ಷರ ಪತ್ರವನ್ನು ಉಲ್ಲೇಖೀಸಿ, ಈ ಆದೇಶ ಹೊರಡಿಸಿದೆ. 2019-20ರ ಅನುದಾನದಲ್ಲಿ ರೂ.142 ಲಕ್ಷ ಹಣ ಲ್ಯಾಪ್ಸ್‌ ಆಗಿದ್ದು, ಬಿಡುಗಡೆಗೆ ಅವಕಾಶ ಕೋರಿ ಪತ್ರ ಬರೆಯಲಾಗಿತ್ತು. ಆದರೆ ಕೋವಿಡ್ ಸೋಂಕು ಹರಡುವಿಕೆ ಹಿನ್ನೆಲೆ ಕಾರಣ ನೀಡಿ. ಹಳೇ ಅನುದಾನ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂಬ ಸುತ್ತೋಲೆಯನ್ನು ರಾಜ್ಯದ ತಾಪಂಗಳಿಗೆ ಸರ್ಕಾರ ಹೊರಡಿಸಿದೆ.

Advertisement

ಅವಧಿಗಿಂತ ಮುಂಚೆ ಟ್ರಸರಿ ಲಾಕ್‌ ತಂದ ಸಮಸ್ಯೆ: ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಸರ್ಕಾರ ಮಾ.23ರಂದೇ ಟ್ರಸರಿ ಲಾಕ್‌ ಮಾಡಿದ ಹಿನ್ನೆಲೆಯಲ್ಲಿ ಅನುದಾನ ಲ್ಯಾಪ್ಸ್‌ ಆಗುವುದಕ್ಕೆ ಪ್ರಮುಖ ಕಾರಣ. ಮಾ.31 ರವರೆಗೆ ಅವಕಾಶ ನೀಡಿದ್ದರೆ ಕ್ರಿಯಾಯೋಜನೆಯಲ್ಲಿ ತಂದ ಎಲ್ಲಾ ಕಾಮಗಾರಿಗಳಿಗೂ ಅನುದಾನ ಬಳಕೆಯಾಗುತ್ತಿತ್ತು. ಆದರೆ ಅವ ಗಿಂತ ಮುಂಚಿತವಾಗಿ ಟ್ರಸರಿ ಲಾಕ್‌ ಆದ ಪರಿಣಾಮ ಈ ಸಮಸ್ಯೆ ಉದ್ಬವವಾಗಿದೆ ಎನ್ನಲಾಗಿದೆ.

ಅನುದಾನ ನೀಡಲಿ: ಈಗಾಗಲೇ ಕೊ ಕೋವಿಡ್ ದಿಂದ ಅಭಿವೃದ್ಧಿಗೆ ಕೊಡಲಿಯೇಟು ಬಿದ್ದಿದೆ. ಅನುದಾನ ರಿಲೀಸ್‌ ಆಗದಿದ್ದರು ಕೂಡ ಅದು ವಾಪಸ್‌ ಸರ್ಕಾರಕ್ಕೆ ಹೋಗಿದೆ. ಇನ್ನು ಕೂಡ ಬಿಡುಗಡೆಗೆ ಅವಕಾಶವಿದೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಇಚ್ಚಶಕ್ತಿಯನ್ನು ಪ್ರದರ್ಶಿಸಿದರೆ ತಾಪಂಗಳ ಹಿತರಕ್ಷಣೆ ಮಾಡಬಹುದು ಎಂಬ ಮಾತುಗಳು ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next