ಚಿಕ್ಕಮಗಳೂರು : ಎಲ್ಲೆಡೆ ಕೋವಿಡ್ ತನ್ನ ಅಟ್ಟಹಾಸ ಬೀರುತ್ತಿದ್ದು ಹಳ್ಳಿಗಳಲ್ಲಿಯೂ ಕೂಡಾ ಕೋವಿಡ್ ಆರ್ಭಟ ಹೆಚ್ಚಾಗಿದೆ. ಹೀಗಿರುವಾಗ ಸರ್ಕಾರದ ಆದೇಶವಿದ್ದರೂ ನಿಯಮ ಮೀರಿ ಅಂತ್ಯಸಂಸ್ಕಾರಕ್ಕೆ ತೆರಳುವ ಮೂಲಕ ಎಡವಟ್ಟು ಮಾಡಿಕೊಂಡ ಜನರಲ್ಲಿ ಕೋವಿಡ್ ದೃಢಪಟ್ಟ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೋಡಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಸಾವಿನ ಮನೆಗೆ ಹೋದವರಲ್ಲಿ ಕೋವಿಡ್ ದೃಢ ವಾಗಿದೆ. ಅಂತ್ಯಸಂಸ್ಕಾರಕ್ಕೆ ತೆರಳಿದ್ದ 30 ಜನರಲ್ಲಿ ಮೊನ್ನೆ 22 ಜನರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಇದೀಗ 22 ಜನರ ಪ್ರಾರ್ಥಮಿಕ ಸಂಪರ್ಕದಲ್ಲಿದ್ದ 29 ಮಂದಿಗೂ ಕೋವಿಡ್ ಪಾಸಿಟಿವ್ ಕಂಡುಬಂದಿದೆ.
ಇದನ್ನೂ ಓದಿ:ಫೇಸ್ ಬುಕ್ ಸ್ನೇಹಿತನಿಂದ ಹೀನ ಕೃತ್ಯ : ಮಹಿಳೆ ಮೇಲೆ 25 ಕಾಮುಕರಿಂದ ಅತ್ಯಾಚಾರ
ಒಂದೇ ಗ್ರಾಮದ 51 ಜನರಲ್ಲಿ ಕೋವಿಡ್ ಕಂಡುಬಂದಿದ್ದು, ಕೋವಿಡ್ ರೂಲ್ಸ್ ಬ್ರೇಕ್ ಮಾಡಿದ್ದರಿಂದಲೇ ಸೋಂಕು ದೃಢ ಪಟ್ಟಿದೆ ಎನ್ನಲಾಗಿದೆ.
ನಾಲ್ಕು ದಿನದ ಹಿಂದೆ ಗ್ರಾಮದ ಓರ್ವ ವ್ಯಕ್ತಿ ಸಾನವಪ್ಪಿದ್ದು ಅಂತ್ಯಸಂಸ್ಕಾರದಲ್ಲಿ 30 ಜನರು ಭಾಗಿಯಾಗಿದ್ದರು. ಸಾವನಪ್ಪಿದ್ದ ವ್ಯಕ್ತಿ ಕೋವಿಡ್ ವರದಿ ಬಂದಿರಲಿಲ್ಲ. ಆದರೆ ಅಂತ್ಯಸಂಸ್ಕಾರದ ಬಳಿಕ ಸಾವನಪ್ಪಿದ್ದ ವ್ಯಕ್ತಿಯ ಕೋವಿಡ್ ವರದಿಯಲ್ಲಿ ಸೋಂಕು ಇರುವುದು ದೃಢವಾಗಿದೆ.