Advertisement

ಗ್ರಾಮಗಳಲ್ಲಿ ಸೋಂಕಿತರ ಸಂಸ್ಕಾರ: ಆತಂಕ, ವಿರೋಧ

07:04 PM May 20, 2021 | Team Udayavani |

ನೆಲಮಂಗಲ: ತಾಲೂಕಿನ ಗ್ರಾಮೀಣಪ್ರದೇಶಗಳಲ್ಲಿ ಸೋಂಕಿತ ಮೃತದೇಹಗಳನ್ನು ಅಂತ್ಯ ಸಂಸ್ಕಾರಕ್ಕೆಮುಂದಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಗ್ರಾಮೀಣ ಜನರಲ್ಲಿ ಆತಂಕಮನೆ ಮನೆಮಾಡಿದೆ.

Advertisement

ಬೆಂಗಳೂರು ಅಂಚಿನಲ್ಲಿರುವ ನೆಲಮಂಗಲ ತಾಲೂಕು ಮತ್ತು ಪಟ್ಟಣ ಪ್ರದೇಶದ ಆಸುಪಾಸಿನಲ್ಲಿ ಸಾಕಷ್ಟುಮಂದಿ ಬೆಂಗಳೂರಿಗರು ಒಂದೆಡೆ ಫಾರ್ಮ್ ಹೌಸ್‌ಗಳನ್ನು ಮಾಡಿಕೊಂಡಿದ್ದರೆ ಮತ್ತೂಂದೆಡೆ ಟ್ರಸ್ಟ್‌ ಮತ್ತಿತರ ಸಂಸ್ಥೆಗಳನ್ನುಕಟ್ಟಿಕೊಂಡು ಅನಾಥಾಶ್ರಮ, ಧಾರ್ಮಿಕ ಕೇಂದ್ರ ಮತ್ತಿತರ ಚಟುವಟಿಕೆಗಳನ್ನು ಪ್ರಾರಂಭಿಸಿ ನೆಮ್ಮದಿಗೆ ನಗರ ಸಮೀಪದ ಹಳ್ಳಿಗಳನ್ನು ಸೇರಿದ್ದಾರೆ.

ಪ್ರಸ್ತುತ ಕೋರೊನಾ ಆತಂಕದಿಂದ ನಗರವಾಸಿಗಳು ಹಳ್ಳಿಗಳತ್ತ ಮುಖಮಾಡಿರುವುದಲ್ಲದೆ ಕೋವಿಡ್‌ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೂ ಗ್ರಾಮೀಣ ಪ್ರದೇಶದತ್ತ ಧಾವಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಹಳ್ಳಿಗಾಡಿನ ಜನರಲ್ಲಿ ಭಯದವಾತಾರಣ ಸೃಷ್ಟಿಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಗ್ರಾಮೀಣ ಪ್ರದೇಶದ ಜನರಲ್ಲಿಆತಂಕವನ್ನು ಹೋಗಲಾಡಿಬೇಕೆಂಬುದು ಗ್ರಾಮೀಣ ಜನರ ಒತ್ತಾಯವಾಗಿದೆ.

ಬೆಂಗಳೂರು ನಗರ ಸೇರಿದಂತೆಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕಾಗಿ ಸರಕಾರದಿಂದ ಸೌದೆ ಮತ್ತಿತರ ಸೌಲಭ್ಯಗಳನ್ನೊಳಗೊಂಡ ತಾತ್ಕಾಲಿಕ ಚಿತಾಗಾರಗಳನ್ನು ಮಾಡಲಾಗಿದೆ. ಸೋಂಕಿನಿಂದ ಮೃತಪಟ್ಟ ನಗರವಾಸಿಗಳು ಗ್ರಾಮೀಣ ಪ್ರದೇಶಗಳಿಗೆ ಮೃತದೇಹವನ್ನು ತಂದು ಅಂತ್ಯಕ್ರಿಯೆಯನ್ನು ಮಾಡುವುದರಿಂದ ಹಳ್ಳಿಗಾಡಿನ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಇದರಿಂದಾಗಿ ಸೋಂಕು ಹೆಚ್ಚಾಗುವ ಲಕ್ಷಣಗಳನ್ನು ತಳ್ಳಿ ಹಾಕುವಂತಿಲ್ಲ,ಈಗಾಗಲೆ ಲಾಕ್‌ಡೌನ್‌ನಿಂದ ಹಳ್ಳಿಗೆಬಂದಿರುವವರಿಂದ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಳವಾಗಿರುವುದು ಬೇಸರದ ಸಂಗತಿ ಎಂದು ಎಪಿಎಂಸಿನಿರ್ದೇಶಕ ಬೂದಿಹಾಳ್‌ ಗೋವಿಂದರಾಜು ತಿಳಿಸಿದರು.

Advertisement

ಸೋಂಕಿಗೆ ಕಡಿವಾಣ ಹಾಕುವಸಲುವಾಗಿ ಸರಕಾರ ಗ್ರಾಪಂವ್ಯಾಪ್ತಿಯಲ್ಲಿ ತಂಡಗಳನ್ನು ರಚಿಸಿಕಾರ್ಯೋನ್ಮುಖರಾಗದಿದ್ದರೆ ಮತ್ತೂಂದೆಡೆಚಿಕಿತ್ಸೆಮತ್ತುಔಷಧೋಪಚಾರಕ್ಕಾಗಿಮೊಬೈಲ್‌ ಕ್ಲಿನಿಕ್‌ಗಳನ್ನು ಪ್ರಾರಂಭಿಸಿದೆ.ಸಾಲದು ಎಂಬಂತೆ ರಾಜಸ್ವನಿರೀಕ್ಷಕರು.ಗ್ರಾಮಲೆಕ್ಕಾಧಿಕಾರಿಗಳು ಬೀಟ್‌ಪೊಲೀಸ್‌ನವರು ಹೆಚ್ಚುಜಾಗೃತರಾಗಬೇಕಿದ್ದು ಇಂತಹಪ್ರಕರಣಗಳು ಕಂಡುಬಂದಲ್ಲಿ ಸೂಕ್ತರೀತಿಯಕ್ರಮವಹಿಸಿ ಜಾಗೃತಿ ಮೂಡಿಸಿಆತಂಕವನ್ನು ದೂರಮಾಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next