ದೇವನಹಳ್ಳಿ: ದೇವನಹಳ್ಳಿ ಸರಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸುಮಾರು 10-15 ಬೆಡ್‌ಗಳು ಖಾಲಿ ಇದ್ದರೂ ಸಹ ಬೆಡ್‌ಗಳು ಖಾಲಿ ಇಲ್ಲ. ವೆಂಟಿಲೇಟರ್ ಇಲ್ಲ ಎಂದು ಅಲ್ಲಿನ ಸಿಬ್ಬಂದಿಗಳು ಹೇಳಿ ಸೋಂಕಿತರನ್ನು ವಾಪಾಸ್ ಕಳುಹಿಸುತ್ತಿದ್ದಾರೆ.
ಇದಕ್ಕೆಲ್ಲಾ ನೇರ ಕಾರಣತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್‌ಆಗಿದ್ದಾರೆ ಎಂದು ಸೋಂಕಿತರ ಸಂಬಂಧಿಯೊಬ್ಬರು ಆರೋಪಿಸಿದ್ದಾರೆ.ಕಳೆದ ವಾರದಿಂದ ಆಸ್ಪತ್ರೆಯಲ್ಲಿ ಬೆಡ್‌ಗಳು ಲಭ್ಯವಿದ್ದರೂ ಸಹ ಲಭ್ಯವಿಲ್ಲ ಎಂದು ಹೇಳುತ್ತಿದ್ದಾರೆ.
ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್ ಅವರನ್ನು ಸಂಪರ್ಕಿಸಲುಮೊಬೈಲ್ ಕರೆ ಮಾಡಿದರೂ ಸಹ ಸ್ವೀಕರಿಸುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ಇವರಬೇಜವಾಬ್ದಾರಿತನದಿಂದ ಸೋಂಕಿತರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ ಎಂದುಅಳಲನ್ನು ತೋಡಿಕೊಂಡರು.
ಮೊಬೈಲ್ ಕರೆ ಯಾವುದೋ ಒಂದುಸಂದರ್ಭದಲ್ಲಿ ಎತ್ತಿದ ಡಾ.ಸಂಜಯ್ ಬೆಡ್‌ಗಳ ಬಗ್ಗೆ ವಿಚಾರಿಸಿದರೆ, ಬೆಡ್ ಖಾಲಿ ಇಲ್ಲ, ನಿಮಗೆ ಒಂದು ಬಾರಿ ಹೇಳಿದರೆ ಸಾಲದೆ. ಬೆಡ್ ಖಾಲಿ ಇಲ್ಲವೆಂದರೆ ನಾವೇನುಮಾಡೋದು ಎಂದು ಉಡಾಫೆ ಉತ್ತರನೀಡುತ್ತಿದ್ದಾರೆ ಎಂದು ಸೋಂಕಿತರಸಂಬಂಧಿಕರು ಹೇಳುತ್ತಾರೆ. ಇನ್ನಾದರೂ ಜಿಲ್ಲಾಡಳಿತ ಇಂತಹ ತಾಲೂಕುಆರೋಗ್ಯಾಧಿಕಾರಿಗಳನ್ನು ಸರಿ ಯಾದ ಪಾಠಕಲಿಸುವುದರ ಮೂಲಕ ಆಸ್ಪತ್ರೆ ಗಳಲ್ಲಿರುವಸಿಬ್ಬಂದಿಗಳಿಗೆ ಸರಿಯಾದ ಮಾರ್ಗ ದರ್ಶನಮತ್ತು ಕೊರೊನಾ ನಿಯಂ ತ್ರಣಕ್ಕೆ ಪ್ರಾಮಾಣಿಕಸೇವೆ ನೀಡುವಂತೆ ಸೂಚಿಸಬೇಕು.
ಇದರ ಬಗ್ಗೆಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು.ಸೋಂಕಿತರ ಸಾವಿನ ಸಂಖ್ಯೆಯನ್ನು ಕಡಿವಾಣಹಾಕಲು ಜಿಲ್ಲಾಡಳಿತ ತಮ್ಮ ಕಾರ್ಯವೈಖರಿಯನ್ನು ಚುರುಕುಗೊಳಿಸಬೇಕು ಎಂದು ಒತ್ತಾಯಿಸಿದರು.