ನೆಲಮಂಗಲ: ಕೊರೊನಾ ವಿಶೇಷ ಕರ್ತವ್ಯಕ್ಕೆನೇಮಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಸಭೆಗಳಿಗೆ ಹಾಜರಾಗಿ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಬೂಬು ಹೇಳ ಬಾರದುಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೋಡಲ್‌ಅಧಿಕಾರಿ ಪೂರ್ಣಿಮಾ ತಾಲೂಕು ವಿವಿಧಇಲಾಖೆಗಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಲೂಕಿನಲ್ಲಿ ಕೋವಿಡ್ ಕೊರೊನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ತಾಲೂಕು ಕಚೇರಿಯಲ್ಲಿಅಧಿಕಾರಿಗಳ ಸಭೆಯನ್ನು ನಡೆಸಿ ಮಾತನಾಡಿದರು.ಕೊರೊನಾ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಆತಂಕಗೊಂಡಿದ್ದಾರೆ. ಸೋಂಕಿತರಿಗೆ ಅಗತ್ಯಕ್ಕೆ ತಕ್ಕಂತೆಅವರುಗಳಿಗೆ ಚಿಕಿತ್ಸೆ ಮತ್ತು ಬೆಡ್‌ಗಳ ವ್ಯವಸ್ಥೆಯನ್ನುಕಲ್ಪಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿ.
ತಾಲೂಕಾದ್ಯಂತ ಖಾಸಗಿ ಆಸ್ಪತ್ರೆಗಳು ಮತ್ತುಸರಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆಯನ್ನುನೀಡಲು ಸರಕಾರದ ನೀತಿನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪಟ್ಟಣದ ಬಿಸಿಎಂ ಹಾಸ್ಟೆಲ್‌ನಲ್ಲಿ ಕೋವಿಡ್ ವಾರ್ ರೂಮ್ ಪ್ರಾರಂಬಿಸಲಾಗುತ್ತಿದೆ. ಅದರ ಮೂಲಕವೇ ಪ್ರತಿಯೊಬ್ಬಸೋಂಕಿತರಿಗೂ ಸರಕಾರಿ ವೆಚ್ಚದ ಬೆಡ್‌ಗಳನ್ನುಆದ್ಯತೆಯ ಮೇರೆಗೆ ಕಾಯ್ದಿರಿಸಲಾಗುತ್ತದೆ.
ಅಧಿಕಾರಿ ಗಳು ತಮಗೆ ವಹಿಸಿರುವ ಜವಾಬ್ದಾರಿಗಳನ್ನುಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದರು.ಬೆಡ್‌ಗಳು: ತಾಲೂಕಿನಲ್ಲಿರುವ ಸಾರ್ವಜನಿಕಆಸ್ಪತ್ರೆ ಗಳಲ್ಲಿ 35 ಬೆಡ್‌ಗಳು ಖಾಸಗಿ ಆಸ್ಪತ್ರೆಗಳಲ್ಲಿಹರ್ಷರಾಮಯ್ಯ ಆಸ್ಪತ್ರೆಯಲ್ಲಿ 35 ಬೆಡ್‌ಗಳು,ವಿ.ಪಿ.ಮ್ಯಾಗ್ನೆಸ್ ಆಸ್ಪತ್ರೆಯಲ್ಲಿ 19ಬೆಡ್‌ಗಳು, ಕೇರ್‌ಏಷ್ಯಾ ಆಸ್ಪತ್ರೆಯಲ್ಲಿ 19 ಬೆಡ್‌ಗಳು, ಜಯಪ್ರಸಾದ್‌ಆಸ್ಪತ್ರೆಯಲ್ಲಿ 24, ಜೆಕೆ.ಸೂಪರ್ ಸ್ಪೆಷಾಲಿಟಿಆಸ್ಪತ್ರೆಯಲ್ಲಿ 14 ಬೆಡ್‌ಗಳನ್ನು ಕೋವಿಡ್ ಚಿಕಿತ್ಸೆಗೆಸರ ಕಾರದ ವತಿಯಿಂದ ಬಳಕೆಮಾಡಿಕೊಳ್ಳಲಾಗುತ್ತಿದೆ ಎಂದರು.
ಸಭೆಗೆ ಗೈರಾಗಿದ್ದ ಮಹಿಳಾ ಮತ್ತು ಮಕ್ಕಳಾಭಿವೃದ್ದಿ ಇಲಾಖೆ ಅಧಿಕಾರಿ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಕಾರಣ ಕೇಳಿ ನೊಟೀಸ್ ನೀಡಿಸೂಕ್ತ ರೀತಿಯ ಕ್ರಮಕ್ಕೆ ಮುಂದಾಗಬೇಕಾಗುತ್ತದೆಎಂದು ನೊಡೆಲ್ ಅಧಿಕಾರಿ ಪೂರ್ಣಿಮಾತಹಶೀಲ್ದಾರ್ ಕೆ.ಮಂಜುನಾಥ್ ಅವರಿಗೆಸೂಚನೆಯನ್ನು ನೀಡಿದರು.ಡಿವೈಎಸ್‌ಪಿ ಜಗದೀಶ್, ಗ್ರೇಡ್ 2 ತಹಶೀಲ್ದಾರ್‌ಪ್ರಕಾಶ್, ವೃತ್ತನಿರೀಕ್ಷಕ ಹರೀಶ್, ಪರೀಕ್ಷಾರ್ಥಿಹಶೀಲ್ದಾರ್ ವಿಜಯ್‌ಕುಮಾರ್, ಸಬ್‌ಇನ್ಸ್‌ಪೆಕ್ಟರ್ ಸುರೇಶ್, ತಾಲೂಕು ಆರೋಗ್ಯಾಧಿಕಾರಿಡಾ.ಹರೀಶ್, ಶಿರಸ್ತೇದಾರ್ ಶ್ರೀನಿವಾಸ್, ರಾಜಸ್ವನಿರೀಕ್ಷಕ ಸುದೀಪ್, ರವಿಕುಮಾರ್,ಕುಮಾರಸ್ವಾಮಿ, ಮಹೇಶ್ ಇತರರಿದ್ದರು.