Advertisement
ಮಹಾಮಾರಿ ಕೊರೊನಾ ಸಾಂಕ್ರಾಮಿಕ ರೋಗವು ವಿಶೇಷವಾಗಿ ಹಳ್ಳಿಗಾಡಿನ ವಿದ್ಯಾವಂತ ಹುಡುಗರ ಬಾಳಿನ ಮೇಲೆ ಕ್ರೌರ್ಯ ಮೆರೆದಿರುವುದು ವಾಸ್ತವ ಸತ್ಯ. ಅಕ್ಷರ ಬೆಳಕು ಬಾಳಿಗೆ ಹರಡಲು ಬಾ ಮರಳಿ ಶಾಲೆಗೆ ಎನ್ನುತ್ತಿದ್ದ ಸರಕಾರ ಸೋಂಕಿನ ಭೀತಿಯಲ್ಲಿ ಶಾಲೆಗೆ ಬೀಗ ಜಡಿದಿದೆ. ಮಾರುಕಟ್ಟೆ, ಮಾಲ್, ಹಾಲ್ ಕಾರ್ಯಕ್ರಮಕ್ಕೆ ಹಾರ್ದಿಕ ಸ್ವಾಗತವಿದ್ದರೂ ಶಾಲೆಗಳು ಮಾತ್ರ ಮಕ್ಕಳ ಕರೆಗೆ ಓಗೊಡುತ್ತಿಲ್ಲ. ಶಾಲೆ, ಶಿಕ್ಷಣ ಮತ್ತು ಶಿಕ್ಷಕರಿಂದ ದೀರ್ಘ ಕಾಲ ದೂರ ಉಳಿದ ಮಕ್ಕಳ ಮಾನಸಿಕ ಸ್ಥಿತಿಮಿತಿ ಹದಗೆಟ್ಟಿದೆ. ಮಕ್ಕಳ ಕಾಳಜಿಯಿಂದ ಸೋಂಕಿಗೆ ಸರಕಾರ ಹೆದರಿದರೂ ಹಸಿವಿಗೆ ಹೆದರಿದ ಪೋಷಕರು ಮಕ್ಕಳನ್ನು ಹಸುಗಳ ಹಿಂದೆ ಕಳುಹಿಸುತ್ತಿದ್ದಾರೆ. ಆತಂಕವಿಲ್ಲದೆ ಮಳೆ, ಗಾಳಿ, ಬಿಸಿಲಿನಲ್ಲಿ ವಿದ್ಯಾರ್ಥಿಗಳು ದನ ಕಾಯುವ ಕಾಯಕ ಮುಂದುವರೆಸಿರುವ ಕಳವಕಾರಿ ಪ್ರಸಂಗಗಳು ಎಲ್ಲೆಡೆ ಕಂಡು ಬರುತ್ತಿವೆ.
Related Articles
Advertisement
“ಶಾಲೆ ತರೆಯದೆ ವರ್ಷ ಕಳೆಯಿತು. ಆಟದ ಅಂಗಳದಲ್ಲಿ ಸಾಕಷ್ಟು ಹುಲ್ಲು ಮುಳ್ಳುಕಂಟಿ ಬೆಳೆದಿದೆ. ಊರಿನ ಪುಂಡ ಹುಡುಗರೆಲ್ಲ ಸಂಜೆಯಾಗುತ್ತಿದ್ದಂತೆ ಶಾಲೆಗೆ ನುಗ್ಗುತ್ತಾರೆ. ಮದ್ಯ ಕುಡಿದು ಬಾಟಲು ಬೀಸಾಡುತ್ತಾರೆ. ಪರಿಣಾಮ ಇಡೀ ಶಾಲಾ ಆವರಣದಲ್ಲಿ ಗಾಜುಗಳು ಹರಡಿಕೊಂಡಿವೆ. ಕಂಪೌಂಡ್ ನಿರ್ಮಾಣ ಅರ್ಧಂಬರ್ಧ ಆಗಿದ್ದರಿಂದ ದನಕರುಗಳು ಶಾಲೆಗೆ ಬರುತ್ತವೆ. ಶಾಲೆ ವಂಚಿತ ಮಕ್ಕಳು ಅನಿವಾರ್ಯವಾಗಿ ದನ ಕಾಯಲು ಹೋಗುತ್ತಿವೆ. ಸಣ್ಣಪುಟ್ಟ ಕೆಲಸ ಮಾಡುತ್ತ ತಂದೆ ತಾಯಿಯರಿಗೆ ನೆರವಾಗುತ್ತಿದ್ದಾರೆ. ಮಕ್ಕಳ ಪಾಲಿಗೆ ಬಹಳ ಕೆಟ್ಟ ಇನಗಳು ಬಂದಿವೆ. ಶಾಲೆಗೆ ಸೂಕ್ತ ಕಂಪೌಂಡ್ ವ್ಯವಸ್ಥೆಯಾಗಬೇಕು.”
-ಭೀಮಣ್ಣ ಕೇಸಬಳ್ಳಿ. ಎಸ್‌ಡಿಎಂಸಿ ಅಧ್ಯಕ್ಷ, ಸರಕಾರಿ ಪ್ರೌಢ ಶಾಲೆ ರಾವೂರ.
– ಮಡಿವಾಳಪ್ಪ ಹೇರೂರ