Advertisement

ಕೋವಿಡ್‌ ನಿಯಂತ್ರಿಸುವಲ್ಲಿ  ವಿಫ‌ಲ: ಚಲುವ ರಾಯಸ್ವಾಮಿ

10:29 PM May 25, 2021 | Team Udayavani |

ಮದ್ದೂರು: ರಾಜ್ಯದಲ್ಲಿ ಆಡಳಿತನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರಕೋವಿಡ್‌ ನಿಯಂತ್ರಿಸುವಲ್ಲಿ ಸಂಪೂರ್ಣವಿಫ‌ಲವಾಗಿದೆ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಆರೋಪಿಸಿದರು.

Advertisement

ತಾಲೂಕಿನ ಕೊಪ್ಪ ಗ್ರಾಮದಲ್ಲಿ ಹೋಂಐಸೋಲೇಷನ್‌ ಒಳಪಟ್ಟಿರುವ ವ್ಯಕ್ತಿಗಳಿಗೆಕೋವಿಡ್‌ ಮೆಡಿಷನ್‌ ಕಿಟ್‌ ವಿತರಿಸಿಮಾತನಾಡಿದ ಅವರು, ಕಾಟಾಚಾರದಆಲೋಚನೆ ಹಾಗೂ ನಿರ್ಣಯಗಳನ್ನುಕೈಗೊಳ್ಳುವ ಮೂಲಕ ಪ್ರತಿ ಹಳ್ಳಿಹಳ್ಳಿಯಲ್ಲೂ ಕೊರೊನಾ ಹರಡಲು ಕಾರಣವಾಗಿದೆಎಂದರು. ಜಿಲ್ಲೆ ಹಾಗೂ ತಾಲೂಕುಕೇಂದ್ರಗಳಲ್ಲಿ ಜನರು ಸೋಂಕಿಗೆ ಒಳಗಾ ಗಿಮೃತಪಡಲು ಸರ್ಕಾರವೇ ಹೊಣೆಯಾಗಿದ್ದು, ಕೇಂದ್ರ ಮತ್ತು ರಾಜ್ಯಸರ್ಕಾರ ಸಮರ್ಪಕವಾಗಿ ಲಸಿಕೆ ಖರೀದಿಸದೆ ವಿದೇಶಗಳಿಗೆ ರಫ್ತು ಮಾಡಿದ ಹಿನ್ನೆಲೆಯಲ್ಲಿ ದೇಶದ ಜನರಿಗೆ ಲಸಿಕೆ ಅಭಾವ ಸೃಷ್ಟಿಯಾಗಿದೆ ಎಂದರು.

ಕೇವಲ 1,200ಕೋಟಿ ರೂ. ಘೋಷಣೆ ಮಾಡುವಮೂಲಕಕಣ್ಣೊರೆಸುವತಂತ್ರಅನುಸರಿಸಿದ್ದು,ಸೋಂಕಿತರಿಗೆ ಸಮರ್ಪಕವಾದ ಬೆಡ್‌,ಆಕ್ಸಿಜನ್‌, ವ್ಯವಸ್ಥೆ ಕಲ್ಪಿಸದೆ ಕಾಟಾಚಾರದನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದುದೂರಿದರು.ಜಿಲ್ಲಾಡಳಿತ ಹೋಂ ಐಸೋಲೇಷನ್‌ರದ್ದುಗೊಳಿಸಿ ಕೋವಿಡ್‌ ಕೇಂದ್ರಗಳಲ್ಲಿ ಚಿಕಿತ್ಸೆಪಡೆಯಲು ಅನುಕೂಲ ಕಲ್ಪಿಸುವ ಜತೆಗೆರೋಗ ಲಕ್ಷಣ ಕಂಡು ಬಂದಿರುವವ್ಯಕ್ತಿಗಳನ್ನು ‌ ಕೂಡಲೇ ತಪಾಸಣೆ ನಡೆಸಿ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ನೀಡುವಮೂಲಕ ರೋಗ ಹರvದಂ‌ ತೆ ಅಗತ್ಯಮುನ್ನೆಚ್ಚರಿಕೆ ಕ್ರಮಗಳನ್ನುಅನುಸರಿಸಬೇಕೆಂದರು.

ಈವೇಳೆ ತಾಪಂಉಪಾಧ್ಯಕ್ಷ ಬಿ.ಎಂ.ರಘು, ಸದಸ್ಯತೋಯಿಜಾಕ್ಷ, ಗ್ರಾಪಂ ಉಪಾಧ್ಯಕ್ಷಸಂತೋಷ್‌, ಸದಸ್ಯರಾದ ಕುಮಾರಕೊಪ್ಪ,ರುದ್ರೇಶ್‌, ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕಜೋಗಿಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷದಿವಾಕರ್‌, ಮುಖಂಡರಾದ ರಮೇಶ್‌ಗೌಡ, ಫ‌ರಿÌàಜ್‌,ಕೃಷ್ಣೇಗೌಡ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next