Advertisement
ನಗರದಲ್ಲಿ ವಿವಿಧ ಕಾರ್ಯನಿಮಿತ್ತ ಶನಿವಾರ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19ನಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬಂದಿಲ್ಲ. ಸಂಪನ್ಮೂಲ ಕೊರತೆ ಕಾರಣ ಕಳೆದ ಬಾರಿಗಿಂತ ಈ ಬಾರಿ ಬಜೆಟ್ ಗಾತ್ರ ತಗ್ಗಿಸುವುದು ಅನಿವಾರ್ಯ. ಹೀಗಾಗಿ ಈ ಬಾರಿಯ ಬಜೆಟ್ ಗಾತ್ರ ಸ್ವಲ್ಪ ಪ್ರಮಾಣದಲ್ಲಿ ತಗ್ಗಲಿದೆ. ಕಳೆದ ಬಾರಿ 2.37 ಲಕ್ಷ ಕೋಟಿ ಬಜೆಟ್ ಗಾತ್ರವಿತ್ತು. ಈ ಬಾರಿ ಅಷ್ಟು ಗಾತ್ರದ ಬಜೆಟ್ ಇರುವುದಿಲ್ಲ. ರಾಜ್ಯದಲ್ಲಿ ಶೇ.90ರಷ್ಟು ಕೋವಿಡ್ ನಿಯಂತ್ರಣದಲ್ಲಿದೆ. ಕೋವಿಡ್ ನಿಯಂತ್ರಿಸಲು ಬೇಕಾಗುವಷ್ಟು ಹಣಕಾಸಿನ ನೆರವನ್ನು ರಾಜ್ಯ ಸರ್ಕಾರ ಒದಗಿಸುತ್ತಿದೆ ಎಂದರು.
Advertisement
ಕೋವಿಡ್ ಹಿನ್ನೆಲೆ: ಬಜೆಟ್ ಗಾತ್ರ ತಗ್ಗಿಸುವುದು ಅನಿವಾರ್ಯ: ಸಿಎಂ
08:53 PM Jan 23, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.