ಮಾಗಡಿ: ಜಿಲ್ಲೆಯಲ್ಲಿ ಸೋಂಕು ನಿಯಂತ್ರಿಸಲುಪ್ರತಿಯೊಂದು ಗ್ರಾಮಪಂಚಾಯಿತಿಯಲ್ಲಿಕಾರ್ಯಪಡೆ ರಚಿಸಲಾಗಿದೆ ಎಂದು ಜಿಪಂ ಸಿಇಒ ಕ್ರಮ್ ತಿಳಿಸಿದರು.
ಅಗಲಕೋಟೆ ಗ್ರಾಪಂನಲ್ಲಿ ಇತ್ತೀಚೆಗೆ ನಡೆದ ಕೋವಿಡ್‌ಸೋಂಕುನಿಯಂತ್ರಣ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಕೊರೊನಾ ಸೋಂಕು ತೊಲಗಿಸಲು ಪ್ರತಿಯೊಂದು ಗ್ರಾಮದಲ್ಲೂಗ್ರಾಮಕಾರ್ಯಪಡೆ ರಚಿಸಲಾಗಿದೆ. ಗ್ರಾಪಂನಿಂದಗ್ರಾಮಗಳ ಪ್ರತಿಯೊಂದು ಮನೆಗೂ ಸೋಂಕುನಿವಾರಕ ದ್ರಾವಣಸಿಂಪಡಿಸಲೇಬೇಕು. ಆಶಾ ಮತ್ತುಅಂಗನವಾಡಿಕಾರ್ಯಕರ್ತೆಯರು, ಗ್ರಾಪಂಅಧ್ಯಕ್ಷ,ಉಪಾಧ್ಯಕ್ಷ, ಸದಸ್ಯರು, ಪಿಡಿಒ, ಕಾರ್ಯದರ್ಶಿಹಾಗೂ ಯುವಕರ ಸಂಘದ ಪದಾಧಿಕಾರಿಗಳಸಹಕಾರದಲ್ಲಿ ಸರ್ವರೂ ಸಮರೋಪಾದಿಯಲ್ಲಿಸೋಂಕು ಹರಡದಂತೆ ತಡೆಗಟ್ಟಲು ಪ್ರಾಮಾಣಿಕವಾಗಿ ದುಡಿಯಬೇಕು.
ಎಲ್ಲಾ ಗ್ರಾಮಗಳಿಗೂ ಮುಖ್ಯಮಂತ್ರಿಗಳೆ ಬಂದು ಕೋವಿಡ್ ಸೋಂಕು ನಿಯಂತ್ರಿಸಲು ಸಾಧ್ಯವಿಲ್ಲ. ಗ್ರಾಮಸ್ಥರೆಲ್ಲರೂ ಸಂಘಟಿತರಾಗಿ ಸೋಂಕು ನಿವಾರಣೆಗೆ ಶ್ರಮಿಸಬೇಕು. 15ನೆಹಣಕಾಸು ಯೋಜನೆಯ ಅನುದಾನ ಬಳಸಿಕೊಂಡು ಆಶಾ,ಅಂಗನವಾಡಿ ಕಾರ್ಯಕರ್ತೆಯರಿಗೆ ಎನ್.95 ಮಾಸ್ಕ್, ಸ್ಯಾನಿಟೈಸರ್ ಕೊಡಿಸಬೇಕು.
ಹೋಮ್ ಕ್ವಾರಂಟೈನ್: ನಗರದಿಂದ ಹಳ್ಳಿಗಳಿಗೆಬಂದಿರುವವರನ್ನು ಕಡ್ಡಾಯವಾಗಿ ಹೋಮ್‌ಕ್ವಾರಂಟೈನ್ ಮಾಡಬೇಕು. ಸೋಂಕಿತರ ಪ್ರಥಮಮತ್ತು ದ್ವಿತೀಯ ಸಂಪರ್ಕಿತರನ್ನು ಗುರುತಿಸಿ,ಕೋವಿಡ್ ಟೆಸ್ಟ್ ಮಾಡಿಸಿ. ಆರ್‌ಟಿಪಿಸಿಆರ್‌ಲ್ಯಾಬ್‌ನಲ್ಲಿ 24 ಗಂಟೆಯ ಒಳಗೆ ಕೊರೊನಾ ಟೆಸ್ಟ್‌ನ ಫಲಿತಾಂಶ ಪಡೆದು ಕ್ರಮಕೈಗೊಳ್ಳಬೇಕು.ಜನಸಾಮಾನ್ಯರ ಆರೋಗ್ಯ ಸುರಕ್ಷತೆಯದೃಷ್ಟಿಯಿಂದ ಕೋವಿಡ್ ಸೋಂಕು ಹರಡದಂತೆತಡೆಗಟ್ಟಲುಕಠಿಣಕ್ರಮಕೈಗೊಳ್ಳಬೇಕಿದೆ. ತಾಲೂಕುಆಡಳಿತದ ಜೊತೆಗೆ ಜಿಪಂನ ಸಂಪೂರ್ಣ ಸಹಕಾರವಿದೆ.
ನಗರದಿಂದ ಬಂದ ಸೋಂಕಿತರುಹಳ್ಳಿಗಳಲ್ಲಿ ಕೊರೊನಾ ಸೋಂಕು ಬಿತ್ತಿದರು.ಗ್ರಾಮೀಣ ಭಾಗದಲ್ಲಿ ಶೇ. 80 ಸೋಂಕಿತರುಕೋವಿಡ್‌ಟೆಸ್ಟ್‌ಮಾಡಿಸಲುಹಿಂಜರಿಯುತ್ತಿದ್ದಾರೆ.ಪ್ರತಿಯೊಂದು ಮನೆ ಮನೆಗೂ ತೆರಳಿ ಕೋವಿಡ್‌ಟೆಸ್ಟ್ ಮಾಡಿಸಿ, ಪಿಡಿಒಗಳು ವರದಿ ಕೊಡಬೇಕುಎಂದು ಜಿಪಂ ಸಿಇಒ ಇಕ್ರಮ್ ಅಧಿಕಾರಿಗಳಿಗೆತಾಕೀತು ಮಾಡಿದರು.ಜಿಪಂಉಪಕಾರ್ಯದರ್ಶಿಉಮೇಶ್,ಮುಖ್ಯಯೋಜನಾಧಿಕಾರಿ ಚಿಕ್ಕಸುಬ್ಬಯ್ಯ, ಜಿಲ್ಲಾಯೋಜನಾ ನಿರ್ದೇಶಕ ಶಿವಕುಮಾರ್, ತಾಪಂಇಒ ಟಿ.ಪ್ರದೀಪ್ ಇದ್ದರು. ತಾಲೂಕಿನ ಹಂಚಿಕುಪ್ಪೆ, ಮತ್ತಿಕೆರೆ, ಸಾತನೂರು,ಅಗಲಕೋಟೆ ಗ್ರಾಪಂಗಳಲ್ಲಿ ಸೋಂಕು ನಿಯಂತ್ರಿಸಲು ಜಾಗೃತಿ ಸಭೆ ನಡೆಸಲಾಯಿತು.ಗ್ರಾಪಂಗಳ ಅಧ್ಯಕ್ಷರು,ಉಪಾಧ್ಯಕ್ಷರು, ಪಿಡಿಒಗಳು,ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿದ್ದರು.