ದೊಡ್ಡಬಳ್ಳಾಪುರ: “ಕೊರೊನಾ ಲಾಕ್‌ಡೌನ್‌ಹಿನ್ನೆಲೆಯಲ್ಲಿ ದಿನೇ ದಿನೆ ದ್ರಾಕ್ಷಿ ಗೊಂಚಲು ಗಿಡದಲ್ಲೇಕೊಳೆಯುತ್ತಿದೆ. ಕಡಿಮೆ ದರಕ್ಕೆ ಕಿತ್ತುಕೊಂಡು ಹೋಗಿಎಂದರೂ ಯಾರೂ ಬರುತ್ತಿಲ್ಲ’.ಇದು, ದೊಡ್ಡಬಳ್ಳಾಪುರ ತಾಲೂಕಿನ ದ್ರಾಕ್ಷಿಬೆಳೆಗಾರರ ಅಳಲು. ದ್ರಾಕ್ಷಿ ಬೆಳೆಗೆ ಸೂಕ್ತ ಬೆಲೆ ಇಲ್ಲ.ಮಾರಾಟ ಮಾಡಲು ಹೊರಟರೆ ಸಾಗಾಣಿಕೆ ಕಾಸೂಸಿಗೊಲ್ಲ. ಹೀಗಾಗಿ ಫಸಲನ್ನು ಕೀಳದೇತೋಟದಲ್ಲಿಯೇ ಗೊಂಚಲುಗಳನ್ನು ಬಿಡಲಾಗಿದೆಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ತಾಲೂಕಿನ ತೂಬಗೆರೆ ಹೋಬಳಿಯತಿರುಮಗೊಂಡನಹಳ್ಳಿ, ಕಸಬಾ ಹೋಬಳಿ ವಡ್ಡರಹಳ್ಳಿ ಮೊದಲಾದ ಕಡೆ ರೈತರು ಬೆಂಗಳೂರುಬ್ಲೂ ತಳಿಯ ದ್ರಾಕ್ಷಿ ಬೆಳೆದಿದ್ದಾರೆ. ಆದರೆ, ಕೆ.ಜಿ.ಗೆ50 ರೂ.ನಂತೆ ಮಾರಾಟವಾಗಬೇಕಿದ್ದ ದ್ರಾಕ್ಷಿ, ಈಗಕೆ.ಜಿ.ಗೆ 15 ರಿಂದ 20 ರೂ.ಗೆ ಇಳಿದಿದೆ. ದ್ರಾಕ್ಷಿಗೆಸೂಕ್ತ ಬೆಲೆ ಇಲ್ಲದೇ ಗಿಡಗಳಲ್ಲಿಯೇ ಬಾಡುತ್ತಿದೆ.ಈ ಫಸಲನ್ನು ಕೀಳದೇ ಬೇರೆ ಬೆಳೆ ಹಾಕುವಂತಿಲ್ಲ.ದಿನೇ ದಿನೆ ದ್ರಾಕ್ಷಿ ಗಿಡದಲ್ಲಿಯೇ ಬಾಡುತ್ತಿದ್ದು,ತೀರಾಕಡಿಮೆ ಬೆಲೆಗೆ ಮಾರಬೇಕಾದ ಸ್ಥಿತಿ ಬಂದಿದೆ.ಗಿರಾಕಿಗಳು ಬರುತ್ತಿಲ್ಲ: ಸಾಮಾನ್ಯವಾಗಿ ಬೆಂಗಳೂರು ಬ್ಲೂ ತಳಿಯ ದ್ರಾಕ್ಷಿಗೆ ಕೇರಳ,ಆಂಧ್ರದಿಂದ ಗಿರಾಕಿಗಳು, ವೈನ್ ತಯಾರಕರು,ಜ್ಯೂಸ್ ಸೆಂಟರ್‌ಗಳು ಈ ದ್ರಾಕ್ಷಿಯನ್ನು ಬಂದುಖರೀದಿಸುತ್ತಾರೆ. ಆದರೆ, ಈ ಬಾರಿ ಲಾಕ್‌ಡೌನ್‌ಹಿನ್ನೆಲೆ ದ್ರಾಕ್ಷಿ ಖರೀದಿಸಲು ಇಲ್ಲಿಗೆ ಬರುತ್ತಿಲ್ಲ. ಬೇರೆಗಿರಾಕಿಗಳೂ ಬರುತ್ತಿಲ್ಲ ಎಂದು ತಾಲೂಕಿನ ವಡ್ಡರಹಳ್ಳಿಯ ರೈತ ಶ್ರೀನಿವಾಸರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು
ಸಾಲ ತೀರಿಸಲು ಆಗುತ್ತಿಲ್ಲ: ಬೆಂಗಳೂರು ಬ್ಲೂತಳಿಯ ದ್ರಾಕ್ಷಿಯನ್ನು ಬೆಳೆದಿರುವ ಸುತ್ತಮುತ್ತಲಗ್ರಾಮಗಳ ರೈತರ ಪರಿಸ್ಥಿತಿಯೂ ಇದೇ ಆಗಿದೆ.ಕೊಳವೆ ಬಾವಿಯಲ್ಲಿ ನೀರಿಲ್ಲದಿದ್ದರೂ ಬದಲಿವ್ಯವಸ್ಥೆ ಮಾಡಿ ಕಷ್ಟಪಟ್ಟು ದ್ರಾಕ್ಷಿ ಬೆಳೆದಿದ್ದಾರೆ.ಆದರೆ, ಮಾರಾಟ ಮಾಡಲು ಆಗುತ್ತಿಲ್ಲ. ಬ್ಯಾಂಕ್‌ನಲ್ಲಿ ಲಕ್ಷಾಂತರ ರೂ. ಸಾಲ ಇದೆ. ಸಾಲ ತೀರಿಸುವಬಗೆ ತಿಳಿಯುತ್ತಿಲ್ಲ ಎನ್ನುತ್ತಾರೆ ರೈತರು.ನೆರವು ನೀಡಿ: ರಾಜ್ಯಾದ್ಯಂತ ಲಾಕ್‌ಡೌನ್‌ಘೋಷಿಸಿರುವ ಹಿನ್ನೆಲೆಯಲ್ಲಿ ಫಸಲಿಗೆ ಬಂದಿರುವಮಾವು ಬೆಳೆಯನ್ನು ಬೆಳೆಗಾರರು ಹಣ್ಣುಗಳನ್ನುಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ರಫ್ತುಮಾಡಲು ಸಾಧ್ಯವಾಗುತ್ತಿಲ್ಲ.
ಈ ಹಿನ್ನೆಲೆಯಲ್ಲಿಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಬೆಳೆದಮಾವಿನ ಹಣ್ಣನ್ನು ನೇರವಾಗಿ ಬೆಂಗಳೂರಿನಗ್ರಾಹಕರಿಗೆ ತಲುಪಿಸಲು ಆನ್‌ಲೈನ್ ಮುಖಾಂತರಮಾರಾಟ ಮಾಡಲು ಜಿಲ್ಲಾ ತೋಟಗಾರಿಕೆಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ.ಇದರಂತೆಯೇ ದ್ರಾಕ್ಷಿ ಬೆಳೆಗಾರರಿಗೂ ಅನುಕೂಲಮಾಡಿಕೊಡಬೇಕಿದೆ. ಸರ್ಕಾರ ಸೂಕ್ತ ಮಾರುಕಟ್ಟೆವ್ಯವಸ್ಥೆ ಕಲ್ಪಿಸಿ ರೈತರಿಗೆ ನೆರವು ನೀಡಬೇಕಿದೆ ಎಂದುರೈತರು ಮನವಿ ಮಾಡಿದ್ದಾರೆ.
ಶ್ರೀಕಾಂತ. ಡಿ