Advertisement

ವಿಶೇಷ ಚೇತನರಿಗೆ ಪ್ಯಾಕೇಜ್‌ಗೆ ಆಗ್ರಹ

08:37 PM May 20, 2021 | Team Udayavani |

ಮದ್ದೂರು: ಕೊರೊನಾ ಸೋಂಕಿನಿಂದಾಗಿ ಸಂಕಷ್ಟದಲ್ಲಿರುವವಿಕಲಚೇತನರ ಶ್ರೇಯೋ ಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ಘೋಷಣೆ ಮಾಡುವಂತೆ ಒತ್ತಾಯಿಸಿ ತಾಲೂಕು ಸರ್ವೋದಯ ವಿಕಲಚೇತನರ ಕ್ಷೇಮಾ ಭಿವೃದ್ಧಿ ಸಂಘ ಮತ್ತು ಸಮುದಾಯವಿಕಲ ಚೇತನ ಪುನರ್ವಸತಿ ಯೋಜನೆ ಪದಾಧಿ ಕಾರಿಗಳುಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Advertisement

ಮದ್ದೂರು ಪಟ್ಟಣದ ವಿಕಲಚೇತನರ ಸಹಕಾರ ಸಂಘದಕಚೇರಿಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಎಸ್‌.ಸಿ.ರಮೇಶ್‌ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೊರೊನಾದಿಂದಾಗಿ ವಿಕಲಚೇತನರ ಆರ್ಥಿಕ ಸಂಕಷ್ಟ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದ್ದು,ದಿನನಿತ್ಯದ ಆಹಾರ,ಉದ್ಯೋಗಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿರುವುದಾಗಿ ಹೇಳಿದರು.

ಕಳೆದ ಮೂರು ತಿಂಗಳಿಂದಲೂ ಮಾಸಾಶನ ಹಾಗೂ ಗೌರವಧನ ಸಿಗದೆ ಔಷಧಿಗೂ ಪರದಾಡುವ ಸ್ಥಿತಿ ಬಂದೊದಗಿದೆ. ತಾವುಪ್ರಕಟಿಸಿರುವ ವಿಶೇಷ ಪ್ಯಾಕೇಜ್‌ನಲ್ಲಿ ವಿಕಲಚೇತನರನ್ನುಕಡೆಗಣಿಸಿರುವುದು ಬೇಸರ ತರಿಸಿದ್ದು, ಕೂಡಲೇ ತಮಗೂವಿಶೇಷ ಪ್ಯಾಕೇಜ್ ಘೋಷಿಸುವಂತೆ ಆಗ್ರಹಿಸಿದರು.

ಸೋಂಕಿನಿಂದ ಮೃತಪಟ್ಟ ಕುಟುಂಬಕ್ಕೆ 10 ಲಕ್ಷ ರೂ.ಪರಿಹಾರ, ಮೂರು ತಿಂಗಳ ವರೆಗೂ 10 ಸಾವಿರ ರೂ.ಮಾಸಾಶನ ನೀಡಬೇಕೆಂದು ಒತ್ತಾಯಿಸಿದರು. ಸರ್ವೋದಯವಿಕಲಚೇತನರ ಸಂಘದ ಉಪಾಧ್ಯಕ್ಷ ಎಚ್‌.ವಿ.ಮಾದೇಗೌಡ,ಸಂಯೋಜಕ ಮಹಾಂತೇಶ್‌ಹಿರೇಮಠ, ಸಿ.ಕೆ.ಕೃಷ್ಣ,ಬಿ.ಬೋರೇಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next