Advertisement

ಕೋವಿಡ್‌ನಿಂದ ಅನಾಥವಾಗುವ ಮಕ್ಕಳ ಪೋಷಣೆಗೆ ಸರ್ಕಾರ ಸಿದ್ಧ

03:17 PM May 19, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ 2ನೇ ಅಲೆಹಿನ್ನೆಲೆಯಲ್ಲಿ ಪಾಲಕರ ಪೋಷಣೆಯಿಂದ ಅನಾಥರಾದ ಮಕ್ಕಳ ಪುನರ್ವಸತಿ ಕಲ್ಪಿಸಲುಸರ್ಕಾರ ಸಿದ್ಧವಿದ್ದು, 18ವರ್ಷದೊಳಗಿನ ಮಕ್ಕಳ ಕ್ವಾರಂಟೈನ್‌ಗಾಗಿ ವಸತಿ ಶಾಲೆಯಲ್ಲಿ ಸಿದ್ಧತೆಮಾಡಿಕೊಳ್ಳಲಾಗಿದೆ. ಯಾರೂ ನೇರವಾಗಿ ಅನಾಥ ಮಕ್ಕಳನ್ನು ಖಾಸಗಿಯಾಗಿ ದತ್ತು ಪಡೆಯಲು ಅವಕಾಶವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

Advertisement

ಕೋವಿಡ್‌ ಕಾರಣದಿಂದ ಅನಾಥರಾದ ಮಕ್ಕಳಕುರಿತು ಮಹಿಳಾ ಮತ್ತು ಮಕ್ಕಳಅಭಿವೃದ್ಧಿಇಲಾಖೆಕೈಗೊಂಡ ಕ್ರಮಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಕೋವಿಡ್‌ನಿಂದ ಬಾಧಿತರಾದ ಮಕ್ಕಳನ್ನು ಗುರುತಿಸಲು ಹಾಗೂ ಪುನರ್ವಸತಿಗೆ ಸರ್ಕಾರ 1098 ಎಂಬ ಸಹಾಯವಾಣಿ ತಂದಿದ್ದು,ಹಿರಿಯ ಐಎಎಸ್‌ ಅಧಿಕಾರಿ ಮೋಹನ್‌ ರಾಜ್‌ಅವರನ್ನು ನೋಡಲ್‌ ಅಧಿಕಾರಿಯಾಗಿನೇಮಿಸಲಾಗಿದೆ ಎಂದು ಹೇಳಿದರು. 30 ಜಿಲ್ಲೆಗಳಲ್ಲಿ ಕೋವಿಡ್‌ ಕೇರ್‌ ಕೇಂದ್ರ ತೆರೆಯಲು ತೀರ್ಮಾನಿಸಲಾಗಿದೆ.

993 ಸಂಸ್ಥೆಗಳುಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.33 ಮಕ್ಕಳ ದತ್ತು ಕೇಂದ್ರಗಳಿವೆ. ಅನಾಥ ಮಕ್ಕಳಬಗ್ಗೆ 1098 ನಂಬರ್‌ಗೆ ಕಾಲ್‌ ಮಾಡಿ ಮಾಹಿತಿ ನೀಡಬೇಕು. ಈಗಾಗಲೇ 23,613 ಕರೆಗಳುಬಂದಿವೆ. ಪ್ರತಿ ತಿಂಗಳು ಕೋವಿಡ್‌ ಸಂಬಂಧಿತ 137 ಕರೆಗಳು ಬರುತ್ತಿವೆ. 30 ಜಿಲ್ಲೆಗಳಲ್ಲಿ ಮಕ್ಕಳುಹೆಚ್ಚಾದರೆ ಮಕ್ಕಳ ಆರೈಕೆಗೆ ವಿಶೇಷ ಮಕ್ಕಳಶಾಲೆಗಳನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆಎಂದು ಹೇಳಿದರು.

ನೇರವಾಗಿ ದತ್ತು ಪಡೆಯಲು ಅವಕಾಶವಿಲ್ಲ:ಯಾರೂ ನೇರವಾಗಿ ಮಕ್ಕಳನ್ನು ದತ್ತು ಪಡೆಯಲು ಅವಕಾಶವಿಲ್ಲ. ಯಾವುದೇ ಮಗುವಾಗಿದ್ದರೂ ಅದನ್ನು ಇಲಾಖೆ ವ್ಯಾಪ್ತಿಗೆ ಒಪ್ಪಿಸಿ ನಂತರ ದತ್ತು ಪಡೆಯುವ ಪ್ರಕ್ರಿಯೆ ಮಾಡಬೇಕು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸಂದೇಶಗಳನ್ನು ನೇರವಾಗಿ ನಂಬದೆ ಪರಿಶೀಲಿಸಬೇಕು. ಇಬ್ಬರುಮಕ್ಕಳು ಅನಾಥವಾಗಿದ್ದರೆ ಇಬ್ಬರನ್ನೂ ಒಟ್ಟಿಗೆ ಇಡಲು ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು.
ನೇರವಾಗಿ ದತ್ತು ಪಡೆಯುವುದು ಕಾನೂನು ಬಾಹಿರವಾಗಿದ್ದು ಅದರ ವಿರುದ್ಧ ಬಾಲನ್ಯಾಯ ಕಾಯ್ದೆ 2015 ಹಾಗೂ ಅಡಾಪ್ಸನ್‌ ರೆಗ್ಯುಲೇಷನ್‌ 2017ರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಎರಡನೆ ಅಲೆಯಲ್ಲಿ ಮಂಡ್ಯ ಹಾಗೂಚಾಮರಾಜನಗರದಲ್ಲಿ ಇಬ್ಬರು ಮಕ್ಕಳುಅನಾಥವಾಗಿವೆ. ಮಂಡ್ಯದಲ್ಲಿ ಅವರ ಅಜ್ಜ -ಅಜ್ಜಿನೋಡಿಕೊಳ್ಳುತ್ತಿದ್ದಾರೆ. ಚಾಮರಾಜನಗರದಲ್ಲಿಅವರ ಚಿಕ್ಕಮ್ಮ ನೋಡಿಕೊಳ್ಳುತ್ತಿದ್ದಾರೆ. ಅನಾಥ ಮಗುವಿಗೆ ಭಾಗ್ಯಲಕ್ಷ್ಮೀ ಮಾದರಿ ಯೋಜನೆ ಜಾರಿ ಬಗ್ಗೆ ಚಿಂತನೆ ಹಾಗೂ ದಾನಿಗಳಿಂದ ಅವರ ಶಿಕ್ಷಣವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next