Advertisement

ಕೋವಿಡ್ ನಿಯಮ ಪಾಲಿಸದ ಹಳ್ಳಿಗರು!

03:37 PM May 17, 2021 | Team Udayavani |

ತುಮಕೂರು: ಕಲ್ಪತರು ನಾಡಿನ ಜನರಲ್ಲಿ ಭಯಭೀತಿ ಹುಟ್ಟಿಸುತ್ತಿರುವ ಎರಡನೇ ಅಲೆಯ ಕಿಲ್ಲರ್‌ಕೊರೊನಾ ಈಗ ಹಳ್ಳಿಯ ಜನರಲ್ಲಿ ದಿಗಿಲು ಹುಟ್ಟಿಸುತ್ತಾ ವ್ಯಾಪಕವಾಗಿ ಹರಡುತ್ತಲೇ ಇದೆ. ಜಿಲ್ಲೆಯ 121 ಗ್ರಾಪಂ ಹಾಟ್‌ಸ್ಪಾಟ್‌ ಪ್ರದೇಶಗಳಾಗಿವೆ. ಇಲ್ಲಿ ಸೋಂಕಿ ತರು ಮನೆಯಲ್ಲಿ ಇರದೇ ಅಡ್ಡಾದಿಡ್ಡಿ ಓಡಾಡುತ್ತಿರುವುದರ ಜತೆಗೆ ಯಾವುದೇ ಕೊರೊನಾ ಮಾರ್ಗ ಸೂಚಿ ಪಾಲಿಸುತ್ತಿಲ್ಲ. ಕೊರೊನಾದಿಂದ ಮೃತ ಪಟ್ಟವರ ಅಂತ್ಯಸಂಸ್ಕಾರದಲ್ಲೂ ನಿಯಮಪಾಲಿಸದಿರು ವುದು ಹಳ್ಳಿಗಳಲ್ಲಿ ಸೋಂಕುಹೆಚ್ಚಾಗಲು ಕಾರಣವಾಗಿದೆ.

Advertisement

ಇದನ್ನು ನಿಯಂತ್ರಿಸಲುಸ್ಥಳೀಯ ಸಂಸ್ಥೆ ವಿಫ‌ಲವಾಗಿವೆ.ಸುಡು ಬಿಸಿಲಿನ ಬೇಗೆಯ ನಡುವೆ ಈಗ ಜಿಲ್ಲೆಯಲ್ಲಿ ತೌಕ್ತೇ ಚಂಡಮಾರುತದಿಂದ ಅಲ್ಲಲ್ಲಿ ಶೀತ ಗಾಳಿತುಂತುರು ಮಳೆಯ ನಡುವೆ ಕೊರಾನಾರ್ಭಟ ಹೆಚ್ಚಾಗುತ್ತಲೇ ಇದ್ದು, ಗ್ರಾಮೀಣ ಪ್ರದೇಶದ ಜನ ಕೊರೊನಾಸೋಂಕಿಗೆ ತುತ್ತಾಗಿ ನರಳುತ್ತಿದ್ದಾರೆ.

ಆಸ್ಪತ್ರೆಗಳಲ್ಲಿಹಾಸಿಗೆಗಳಿಲ್ಲ. ಆಕ್ಸಿಜನ್‌ ಇಲ್ಲ ನಮ್ಮ ಗೋಳುಕೇಳ್ಳೋರ್ಯಾರು ಎನ್ನುವ ಸ್ಥಿತಿ ಹಳ್ಳಿ ಜನರಲ್ಲಿ ಬಂದಿದ್ದು,ಕೊರೊನಾರ್ಭಟಕ್ಕೆ ಬೆಚ್ಚಿ ಹೋಗಿದ್ದಾರೆ.ಜನರ ಬದುಕು ಹಾಳು: ಜಿಲ್ಲೆಯಲ್ಲಿ 80 ಸಾವಿರ ದತ್ತಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳ ಕಾಣುತ್ತಿದೆ. ಸೋಂಕಿನಿಂದ ಮೃತರ ಸಂಖ್ಯೆಯಲ್ಲಿಯೂ ಗಣನೀಯವಾಗಿ ಏರಿಕೆ ಕಂಡಿದ್ದು, ಜನ ಕೊರೊನಾಮಹಾ ಮಾರಿ ಯಿಂದ ಕಂಗಾಲಾಗಿದ್ದಾರೆ.

ಎರಡನೇಅಲೆಯಲ್ಲಿ ರೂಪಾಂತರಗೊಂಡ ಕೊರೊನಾ ಭೀತಿಈವರೆಗೆ ನಗರದ ಜನರಲ್ಲಿ ಹೆಚ್ಚು ಕಂಡುಬರುತ್ತಿತ್ತು.ಈಗ ಹಳ್ಳಿಹಳ್ಳಿಗೂ ಸೋಂಕು ವ್ಯಾಪಿಸಿರುವುದರಿಂದಕೊರೊನಾ ಕಟ್ಟಿಹಾಕುವುದು ಕಷ್ಟವಾಗುತ್ತಿದೆ. ಕಳೆದವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೊರೊನಾ ಮಹಾಮಾರಿ ತನ್ನ ತೀವ್ರತೆ ಹೆಚ್ಚಿಸಿಕೊಂಡು ಎಲ್ಲ ಜನರಲ್ಲಿಭೀತಿ ಗೊಳಿಸಿದೆ. ಭಾನುವಾರದವರೆಗೆ 749 ಜನರನ್ನುಬಲಿಪಡೆದಿರುವ ಕೊರೊನಾ ಈಗ ತೀವ್ರವಾಗುತ್ತಲೇಇದ್ದು, ಜನರ ಬದುಕು ಹಾಳು ಮಾಡಿದೆ.ನಗರ ಪ್ರದೇಶಗಳಲ್ಲಿ ವಿವಿಧ ಕೆಲಸದಲ್ಲಿ ಇದ್ದವಲಸಿಗರು ಹಳ್ಳಿಗಳಿಗೆ ಬಂದು ಅಲ್ಲಿಯ ಜನರಿಗೆಸೋಂಕು ಹರಡಿಸಿದ್ದಾರೆ.

ಈಗ ಎಲ್ಲ ಕಡೆ ವ್ಯಾಪಿಸುತ್ತಿರುವ ಎರಡನೇ ಅಲೆ‌ಯ ವೈರಸ್‌ನಿಂದ ಈಗ ಹೆಚ್ಚುಹಳ್ಳಿಯ ಜನರೂ ಕೊರೊನಾಗೆ ಬಲಿಯಾಗುತ್ತಿದ್ದಾರೆ.ಹಳ್ಳಿಗಳಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲೆಯ 121 ಗ್ರಾಪಂಗಳನ್ನು ಜಿಲ್ಲಾಡಳಿತ ಹಾಟ್‌ಸ್ಪಾರ್ಟ್‌ಪಂಚಾ ಯತ್‌ಗಳೆಂದು ಗುರುತಿಸಿದೆ. ಈ ಗ್ರಾಪಂಗಳವ್ಯಾಪ್ತಿ ಯಲ್ಲಿ ಹೆಚ್ಚಿರುವ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಇರದೇ ಎಲ್ಲ ಕಡೆ ಸುತ್ತುತ್ತಿರುವುದರಿಂದಸೋಂಕು ವ್ಯಾಪಕವಾಗಿ ಹರಡಲು ಕಾರಣವಾಗಿದೆ.

Advertisement

ಶವಸಂಸ್ಕಾರದಲ್ಲೂ ನಿಯಮ ಪಾಲನೆ ಇಲ್ಲ: ಒಂದುಕಡೆ ಹಳ್ಳಿಗಳಲ್ಲಿ ಕೊರೊನಾ ಸೋಂಕಿತರು ಕೋವಿಡ್‌ಕೇಂದ್ರಗಳಲ್ಲಿಯೂ ಇಲ್ಲ. ಮನೆಯಲ್ಲಿಯೂ ಐಸೋಲೇಷನ್‌ ಇಲ್ಲ ಹಾಲು ಹಾಕಲು ಬರುತ್ತಿದ್ದಾರೆ. ಅಂಗಡಿಗೆ ಬರುತ್ತಿದ್ದಾರೆ. ಎಲ್ಲ ಕಡೆ ಓಡಾಡಿಮನೆಯವರಿಗೆ ಗ್ರಾಮದ ಇತರರಿಗೆ ಹರಡುತ್ತಿದ್ದಾರೆ.ಇದರ ಜೊತೆಗೆ ಶವಸಂಸ್ಕಾರವನ್ನೂ ಕೊರೊನಾನಿಯಮ ಮೀರಿ ಮಾಡುತ್ತಿದ್ದಾರೆ.

ಕೊರೊನಾ ನಿಯಮಾವಳಿಗಳ ಪ್ರಕಾರ ಶವಸಂಸ್ಕಾರಮಾಡುವವರು ಪಿಪಿಇ ಕಿಟ್, ಹ್ಯಾಂಡ್‌ ಗ್ಲೌಸ್‌, ನಿರಂತರ ಸ್ಯಾನಿಟೈಸ್‌ ಮಾಡಿಕೊಳ್ಳಬೇಕು. ಆದರೆ, ಹಳ್ಳಿಗಳಲ್ಲಿಇದರ ಪಾಲನೆ ಮಾಡದಿರುವುದು ಸ್ಪಷ್ಟವಾಗುತ್ತಿದೆ.ಅಲ್ಲದೆ ಶವಗಳನ್ನು ಹೂಳುವ ವೇಳೆ ಗುಂಡಿಯಲ್ಲಿಯೇಜನರು ಇಳಿದು ಸಂಸ್ಕಾರದ ವಿಧಿ-ವಿಧಾನಗಳನ್ನುಪೂರೈಸುತ್ತಿದ್ದಾರೆ.ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷÂ: ಗ್ರಾಮೀಣಪ್ರದೇಶಗಳಲ್ಲಿ ಹಾಗೂ ತಾಲೂಕು ಕೇಂದ್ರಗಳಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರ ಮಾಡುತ್ತಿರುವವೇಳೆ ಕೆಲ ಮುಂಜಾಗ್ರತಾ ಕ್ರಮಗಳನ್ನುಅನು ಸರಿಸದೇ ಇರುವುದು ಸಾಕಷ್ಟು ಕಳವಳಕಾರಿಯಾಗಿ ಪರಿಣಮಿಸುತ್ತಿದೆ. ಮುಖ್ಯವಾಗಿಈಗಾಗಲೇ ಸರ್ಕಾರ ಅವಕಾಶ ನೀಡಿರುವಂತೆತಮ್ಮ ಜಮೀನುಗಳಲ್ಲಿಯೇ ಕೊರೊನಾಸೋಂಕಿ ತರ ಮೃತದೇಹಗಳನ್ನು ಅಂತ್ಯಸಂಸ್ಕಾರಮಾಡಲು ಜನರು ಮುಂದಾಗಿ¨ªಾರೆ. ಆದರೆ ಶವವನ್ನು ಅಂತ್ಯಸಂಸ್ಕಾರ ಮಾಡುವ ಸ್ಥಳಕ್ಕೆತೆಗೆದು ಕೊಂಡು ಹೋಗುವ ಸಂದರ್ಭದಲ್ಲಿಜನರು ಮಾÓR… ಧರಿಸಿಕೊಂಡಿರೋದನ್ನುಹೊರತುಪಡಿಸಿ, ಮತ್ತಾವುದೇ ಮುಂಜಾಗ್ರತಾಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಕನಿಷ್ಠ ಆರೋಗ್ಯಇಲಾಖೆ ಸಿಬ್ಬಂದಿ ಮುಂದೆ ನಿಂತು ಈ ಕುರಿತು ಗಮನಹರಿಸಬೇಕಿದೆ. ಅಲ್ಲದೆ ಶವಸಂಸ್ಕಾರ ಮಾಡುವ ಜನರಿಗೆ ಕನಿಷ್ಠ ಅರಿವು ಮತ್ತು ಮಾರ್ಗದರ್ಶನ ನೀಡುವುದರಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಈ ಬಗ್ಗೆನಿರ್ಲಕ್ಷ  ತೋರುತ್ತಿ¨ªಾರೆ.

ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next