Advertisement
ಆದರೆ, ಇದೇ ವೇಳೆ ಹೋಟೆಲ್ ಉದ್ಯಮ ಮಾತ್ರ ಕಂಡರಿಯದ ರೀತಿಯಲ್ಲಿ ನಷ್ಟಕ್ಕೆ ಸಿಲುಕಿದ್ದು, ಇಂದಿಗೂ ಮೇಲೇಳಲು ಹೆಣಗಾಡುತ್ತಿದೆ.
Related Articles
Advertisement
ಲಾಕ್ ಡೌನ್‌ನಲ್ಲಿ ಅವಲಕ್ಕಿ, ಬೆಲ್ಲ, ಕೇಸರಿ ರವಾ, ತೊಗರಿ, ಕಡಲೆ, ಹೆಸರು, ಉದ್ದು, ವಠಾಣಿ ಇನ್ನಿತರ ಪದಾರ್ಥಗಳು ಹೊರಗಿನಿಂದ ಬರುವುದು ನಿಂತು ಸ್ಥಳೀಯ ಉತ್ಪಾದನೆಗೆ ಹೆಚ್ಚು ಒತ್ತು ಸಿಕ್ಕಿತ್ತು.
ವಿವಿಧ ಬೇಳೆಗಳು, ಅವಲಕ್ಕಿ, ಕೇಸರಿ ರವಾ, ಮೈದಾ, ಪಾಲಿಷ್ ಮಿಲ್, ಎಣ್ಣೆ ಮಿಲ್ ಗಳಿಗೆ ಉತ್ಪಾದನಾ ದೃಷ್ಟಿಯಿಂದ ಹೆಚ್ಚಿನ ಸಮಸ್ಯೆ ಆಗಿಲ್ಲವಾದರೂ, ಶೇ.25-30 ವಹಿವಾಟು ಹಿನ್ನಡೆ ಆಗಿದೆ. ಸಾಲದ ಮೇಲಿನ ಬಡ್ಡಿ ರಿಯಾಯಿತಿ, ಲಾಕ್ ಡೌನ್ ಸಂಕಷ್ಟದಲ್ಲೂ ಜಿಎಸ್‌ಟಿ, ಐಟಿ ಕಡೆಯಿಂದ ಸಮಸ್ಯೆಗಳು ತಮ್ಮದೇ ರೀತಿಯಲ್ಲಿ ಉದ್ಯಮವನ್ನು ಕಾಡಿದ್ದವು. ಇತರರಿಗೆ ಸಿಕ್ಕಂತೆ ತಮಗೂ ಸರ್ಕಾರದಿಂದ ಒಂದಿಷ್ಟು ರಿಯಾಯಿತಿ ಸೌಲಭ್ಯಗಳು ದೊರೆಯಬೇಕೆಂಬುದು ಹಲವು ಉದ್ಯಮಿಗಳ ಅನಿಸಿಕೆ.
ಮೇಲೇಳದ ಹೋಟೆಲ್ ಉದ್ಯಮಕೋವಿಡ್ ಹಾಗೂ ಲಾಕ್ ಡೌನ್‌ನಲ್ಲಿ ಅತಿ ಹೆಚ್ಚು ಹಾನಿಗೆ ಈಡಾದ ಕ್ಷೇತ್ರ ವೆಂದರೆ ಹೋಟೆಲ್ ಉದ್ಯಮ. ಬಹುತೇಕ ಎಲ್ಲ ಹೋಟೆಲ್‌ಗಳು ನಷ್ಟ ಅನುಭವಿಸಿವೆ. ಲಾಕ್‌ಡೌನ್‌ನಲ್ಲಿ ಬಹುತೇಕ ಹೋಟೆಲ್‌ಗಳು ಬಂದ್ ಆಗಿದ್ದವು. ಲಾಕ್ ಡೌನ್ ತೆರವುಗೊಂಡರೂ ಕೊರೊನಾ ಭೀತಿಯಿಂದ ಹೋಟೆಲ್‌ಗಳಿಗೆ ಹೋಗುವವರ ಸಂಖ್ಯೆ ಅತ್ಯಂತ ಕಡಿಮೆ ಎನ್ನಬಹುದಾಗಿದೆ. ಹುಬ್ಬಳ್ಳಿ ಹೋಟೆಲ್ ಸಂಘದ ಅಡಿಯಲ್ಲಿ ಸುಮಾರು 450ಕ್ಕೂ ಅಧಿಕ ಹೋಟೆಲ್‌ಗಳು ನೋಂದಣಿಯಾಗಿವೆ. ಸಂಘದ ಸದಸ್ಯತ್ವ ಇಲ್ಲದ ಸಣ್ಣ-ಮಧ್ಯಮ ನೂರಾರು ಸಂಖ್ಯೆಯ ಹೋಟೆಲ್‌ಗಳು ಇವೆ. ಕೊರೊನಾ ಕಾರಣದಿಂದ ಶೇ.90-95 ನಷ್ಟ ಅನುಭವಿಸಿದ ಉದ್ಯಮ ಎಂದರೆ ಹೋಟೆಲ್ ಉದ್ಯಮವಾಗಿದೆ. ಇಂದಿಗೂ ಅನೇಕ ಹೋಟೆಲ್‌ಗಳು ನಷ್ಟದ ಹೊಡೆತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಈಗಲೂ ನಿರೀಕ್ಷಿತ ರೀತಿಯ ವಹಿವಾಟು ನಡೆಯುತ್ತಿಲ್ಲ ಎಂಬುದು ಹೋಟೆಲ್ ಉದ್ಯಮಿಗಳ ಅನಿಸಿಕೆ. – ಅಮರೇಗೌಡ ಗೋನವಾರ