Advertisement
ಮೊದಲ ಅಲೆ ಮುಗಿದೊಡನೆ ಮಾಸ್ಕ್ ಮೂಲೆಸೇರಿತು. ಇನ್ನೇನು ಲಸಿಕೆ ಬಂದೋಯ್ತು ಎಂದುಜನ ಅವರವರದೇ ತೀರ್ಮಾನ ತೆಗೆದುಕೊಂಡರು.ದ್ವಿತೀಯ ಅಲೆ ಕಾಡತೊಡಗಿದರೂ ಎಚ್ಚರಾಗಲಿಲ್ಲ.ಹೊರಗಿನಿಂದ ಬಂದವರು ತಂದರು ಎಂದರು.ಅವರು ತಂದರು, ಇವರು ಲಕ್ಷé ವಹಿಸಲಿಲ್ಲ. ಅವರುಹಂಚಿ ಕೂತರು, ಇವರು ಮದುವೆ-ಮುಂಜಿಎಂದು ಓಡಾಡಿ ಊರಿಗೆಲ್ಲಾ ಹಂಚಿದರು. ಇದರಪರಿಣಾಮವೇ ಆಸ್ಪತ್ರೆ ಹಾಸಿಗೆಗಳೆಲ್ಲಾ ಭರ್ತಿ.ಸಚಿವ ಹೆಬ್ಟಾರ್ ಹೇಳುವಂತೆ ಇತರೆಡೆ ಪರಿಸ್ಥಿತಿಭೀಕರವಾದರೂ ಜಿಲ್ಲೆಯಲ್ಲಿ ಅಂತಹ ಪರಿಸ್ಥಿತಿಬಂದಿಲ್ಲ.
Related Articles
Advertisement
ಯಾರಿಗೆಯಾವ ಚಿಕಿತ್ಸೆ ಕೊಡಬೇಕು, ಅವರಿಗೆ ಹೋಂಕ್ವಾರಂಟೈನ್ ಮಾಡುವುದೋ ಆಸ್ಪತ್ರೆಯಲ್ಲಿಉಳಿಸುವುದೋ ಆಕ್ಸಿಜನ್ ಕೊಡುವುದೋ, ರೆಮ್‌ಡೆಸಿವಿಯರ್ ಕೊಡುವುದೇ, ಎಕ್ಸರೇ ಅಥವಾಅಪಾಯಕಾರಿಯಾದ ಸಿಟಿಸ್ಕಾÂನ್ ಅಗತ್ಯವಿದೆಯೇ,ಮೂಗು ಗಂಟಲಲ್ಲಿ ಕೊಳವೆ ತೂರಿಸುವವೆಂಟಿಲೇಟರ್ ಅವಶ್ಯಕತೆ ಇದೆಯೇ ಎಂಬುದನ್ನುವೈದ್ಯರು ನಿರ್ಧರಿಸಬೇಕು.ಏನೂ ಜ್ಞಾನವಿಲ್ಲದವನಿಗೆ ತಿಳಿಸಬಹುದು,ತಿಳಿದವರಿಗೆ ಹೇಳುವ ಅವಶ್ಯಕತೆ ಬರುವುದಿಲ್ಲ.ಅರೆಜ್ಞಾನಿಗಳು ಎಲ್ಲ ಕ್ಷೇತ್ರದಲ್ಲೂ ಅಪಾಯಕಾರಿ,ಇವರದ್ದೇ ಹುಯ್ಲು ಜೋರಾಗಿದೆ. ಇನ್ನೊಂದಿಷ್ಟುಜನ ಕೋವಿಡ್ ಎಂದರೆ ಏನೂ ಅಲ್ಲ ಅದು, ನೆಗಡಿ,ಶೀತದಂತೆ ವೈರಸ್‌ನಿಂದ ಬರುವುದು ಎಂದುಸಮಾಧಾನ ಹೇಳಲು ಹೋಗಿ ಅದರ ಗಂಭೀರತೆಕಳೆಯುತ್ತಾರೆ. ಅರೆಬರೆ ತಿಳಿವಳಿಕೆಯಿಂದಮತಹಾಕಿದರೆ 5 ವರ್ಷ ಅನುಭವಿಸಿದರೆ ಸಾಲುತ್ತದೆ.ಮತ್ತೆ ಬದಲಾಯಿಸಬಹುದು.
ಆರೋಗ್ಯಕ್ಕೆಸಂಬಂಧಿಸಿದ ವಿಷಯದಲ್ಲಿ ಅರೆಬರೆ ಜ್ಞಾನಬಳಸುವುದು ಇನ್ನೊಬ್ಬರ ಜೀವಕ್ಕೆ ಅಪಾಯಕಾರಿಎಂಬುದನ್ನು ಅರಿಯಬೇಕಾಗಿದೆ.ಒಬ್ಬ ಸೋಂಕಿತ ಮದುವೆಗೆ ಹೋದರೆ20-25 ಜನರನ್ನು ಮಾತನಾಡಿಸುತ್ತಾನೆ. ಆ 25 ಜನತಲಾ 25ರಂತೆ 625ಜನರನ್ನು ಮಾತನಾಡಿಸುತ್ತಾರೆ,ಕೋವಿಡ್ ಹಂಚುತ್ತಾರೆ. ಸರ್ಕಾರ ಕಲ್ಯಾಣಮಂಟಪದ ಮದುವೆ ರದ್ದುಪಡಿಸಿತು. 50ಜನರನ್ನುಸೇರಿಸಿ ಮನೆಯಲ್ಲೇ ಮಾಡಿ ಎಂದು ಪರವಾನಿಗೆಕೊಟ್ಟಿತು.
ಚಿಕ್ಕಚಿಕ್ಕ ಮನೆಗಳಲ್ಲಿ 400-500 ಜನರನ್ನುತುಂಬಿಸಿ ಮದುವೆಯ ಊಟದ ಜೊತೆ ಕೊರೊನಾಸೋಂಕಿನ ಉಡುಗೊರೆ ಕೊಟ್ಟು ಕಳಿಸಿದ ಕಾರಣ ಈಪರಿಸ್ಥಿತಿ ಬಂದಿದೆ.ಸರ್ಕಾರ, ತಾಲೂಕಾಸ್ಪತ್ರೆಗಳು, ಜಿಲ್ಲಾಡಳಿತಮತ್ತು ತಾಲೂಕಾಡಳಿತ ತನ್ನ ಕರ್ತವ್ಯ ಮಾಡುತ್ತಿದೆ.ನಿತ್ಯ ಸಾವು ನೋವು ನೋಡುವ ವೈದ್ಯರ ಪಾಲಿಗೆಇದೆಲ್ಲಾ ಅಂಕೆಸಂಖ್ಯೆ ಮಾತ್ರ. ನಮ್ಮ ನಿರ್ಲಕ್ಷéದಿಂದನಾವು ಕಳೆದುಕೊಳ್ಳುವುದು ಅಮೂಲ್ಯ ಜೀವ,ಕುಟುಂಬದ ಆಸ್ತಿ ಎಂಬುದನ್ನು ಮರೆಯಬಾರದು.
ಜೀಯು, ಹೊನ್ನಾವರ