ಕೊಪ್ಪಳ: ಕೊರೊನಾ ಮಹಾಮಾರಿ ಎಲ್ಲ ಕ್ಷೇತ್ರಗಳಮೇಲೆ ತನ್ನ ಕರಿನೆರಳು ಚಾಚಿದೆ. ಇದರಿಂದಉದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು, ಯಾವಉದ್ಯಮಿಗಳು ವಹಿವಾಟಿಗೆ ಮನಸ್ಸು ಮಾಡುತ್ತಿಲ್ಲ.ಬಟ್ಟೆ, ಆಭರಣ, ರಿಯಲ್ ಎಸ್ಟೇಟ್ ಸೇರಿ ಎಲ್ಲಉದ್ಯಮಗಳೂ ಸಂಪೂರ್ಣ ನೆಲ ಕಚ್ಚಿದೆ.ಕೊಪ್ಪಳವು ಸಣ್ಣ ಜಿಲ್ಲೆಯಾಗಿದ್ದರು ಸಹಿತ ವ್ಯಾಪಾರ,ಉದ್ಯಮದಲ್ಲಿ ಸರ್ಕಾರಕ್ಕೆ ದೊಡ್ಡ ಆದಾಯವನ್ನೇತಂದು ಕೊಡುತ್ತಿತ್ತು.
ಆದರೆ ಮಹಾಮಾರಿಕೊರೊನಾ ಎಲ್ಲದಕ್ಕೂ ಕುತ್ತು ತಂದಿಟ್ಟಿದೆ. ಯಾವುದೇವಹಿವಾಟುವು ಸರಿಯಾಗಿ ನಡೆಯುತ್ತಿಲ್ಲ.ಬೇಸಿಗೆ ಸಂದರ್ಭದಲ್ಲಿ ಮದುವೆ ಸಮಾರಂಭಗಳುಹೆಚ್ಚಾಗಿರುತ್ತವೆ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರವುಕೇವಲ 50 ಜನರಿಗೆ ಮಾತ್ರ ಮಿತಿ ಹೇರಿದ್ದು,ಮದುವೆಗಳು ಸರಳವಾಗಿ ನಡೆಯುವಂತ ಪರಿಸ್ಥಿತಿಬಂದಿದೆ.ವಧು-ವರರ ಆಭರಣ ಖರೀದಿಗೂಕುಟುಂಬಸ್ಥರು ಹಿಂದೇಟು ಹಾಕುವಂತಾಗಿದೆ. ನಗರಒಂದರಲ್ಲೇ ಅಕ್ಷಯ ತೃತೀಯ, ಬಸವ ಜಯಂತಿಸಂದರ್ಭದಲ್ಲಿ ನಿತ್ಯ 4-5 ಕೋಟಿ ರೂ. ವಹಿವಾಟುನಡೆಯುತ್ತಿತ್ತು.
ಜಿಲ್ಲಾದ್ಯಂತ ಆಭರಣಗಳಖರೀದಿ, ಮಾರಾಟದ ವಹಿವಾಟಿನಲ್ಲಿಅಂದಾಜು 40-50 ಕೋಟಿವ್ಯವಹಾರ ನಿತ್ಯ ನಡೆಯುತ್ತಿತ್ತು.ಆದರೆ ಜನರೇ ಮನೆಯಿಂದಹೊರ ಬಂದು ಆಭರಣ ಖರೀದಿಮಾಡಲು ಮನಸ್ಸು ಮಾಡುತ್ತಿಲ್ಲ.ಇನ್ನು ಸರ್ಕಾರವು ಅಂಗಡಿಗಳನ್ನು ಬಂದ್‌ಮಾಡಿದೆ. ವಹಿವಾಟಿಗೂ ಬ್ರೇಕ್ ಹಾಕಿದ್ದು,ಮತ್ತಷ್ಟು ಪೆಟ್ಟು ಬಿದ್ದಂತಾಗಿ, ಸ್ವರ್ಣೋದ್ಯಮಸಂಪೂರ್ಣ ನೆಲ ಕಚ್ಚಿದೆ.ರಿಯಲ್ ಎಸ್ಟೇಟ್ ಗಡಗಡ: ಮೊದಲೆಲ್ಲ ರಿಯಲ್‌ಎಸ್ಟೇಟ್ ಉದ್ಯಮಿಗಳೂ ಕೋಟ್ಯಂತರವಹಿವಾಟು ನಡೆಸಿ ಗಮನ ಸೆಳೆಯುತ್ತಿದ್ದರು.ಬ್ಯಾಂಕ್‌ಗಳಿಂದ ಸಾಲ ಪಡೆದು ಹತ್ತಾರುಎಕರೆ ಜಮೀನು ಖರೀದಿಸಿ ಎನ್‌ಎನಿವೇಶನಗಳನ್ನು ಸಿದ್ಧಪಡಿಸಿ ಮಾರಾಟಮಾಡಿ ಕೋಟ್ಯಂತರ ಗಳಿಸುತ್ತಿದ್ದರು.
ಆದರೆಈ ಹಿಂದೆ ಸಿದ್ಧಪಡಿಸಿದ ಎನ್‌ಎ ಪ್ಲಾಟ್‌ಗಳನ್ನೇ ಇಂದು ಕೇಳುವವರು ಇಲ್ಲದಂತಾಗಿದೆ. ಕೆಳಹಾಗೂ ಮಧ್ಯಮ ವರ್ಗದ ಜನರೇ ಹೆಚ್ಚು ನಿವೇಶನಖರೀದಿಸುತ್ತಿದ್ದರು. ಆದರೆ ಎಲ್ಲ ಉದ್ಯಮವೂಸ್ತಬ್ಧವಾಗಿದ್ದರಿಂದ ದುಡಿಯುವ ವರ್ಗಕ್ಕೂ ಕೆಲಸಇಲ್ಲದಂತಾಗಿದೆ. ಜೀವನ ನಡೆಸುವುದೇ ಕಷ್ಟವಾಗಿದೆ.ಹಾಗಾಗಿ ರಿಯಲ್ ಎಸ್ಟೇಟ್ ಉದ್ಯಮವೂ ವಹಿವಾಟುಇಲ್ಲದೇ ಸ್ತಬ್ಧಗೊಂಡಿದೆ.ಸಂಭ್ರಮಕ್ಕೆ ಅಡ್ಡಿ: ಜಿಲ್ಲೆಯಲ್ಲಿ ಆಟೋ ಮೊಬೈಲ್‌ಉದ್ಯಮಕ್ಕೆ ಅಷ್ಟೊಂದು ತೊಂದರೆಯಿಲ್ಲ. ಇಲ್ಲಿನಕೆಲವೊಂದು ಕೈಗಾರಿಕೆಗಳು ವಾಹನಗಳ ಬಿಡಿಭಾಗಗಳ ತಯಾರಿಕಾ ಕಾರ್ಯಕ್ಕೆ ಸರ್ಕಾರ ಕೆಲವಿನಾಯಿತಿ ನೀಡಿದ್ದು, ಕೋವಿಡ್ ಮಧ್ಯೆಯೂಕೈಗಾರಿಕೆ ಮುನ್ನಡೆಯುತ್ತಿವೆ.
ಆದರೆ ಬಟ್ಟೆ ಉದ್ಯಮಕ್ಕೆದೊಡ್ಡ ಪೆಟ್ಟು ಬಿದ್ದಿದೆ. ಬಸವ ಜಯಂತಿ, ಅಕ್ಷಯತೃತೀಯ ಹಾಗೂ ರಂಜಾನ್ ಸಂದರ್ಭದಲ್ಲಿ ಜಿಲ್ಲೆಯಜನರು ಹೊಸ ಬಟ್ಟೆಗಳನ್ನು ಖರೀದಿ ಮಾಡುತ್ತಿದ್ದರು.ಅದರಲ್ಲೂ ರಂಜಾನ್ ಹಬ್ಬದಲ್ಲಿ ಪ್ರತಿಯೊಬ್ಬ ಮುಸ್ಲಿಂಬಾಂಧವರು ಬಟ್ಟೆ ಖರೀದಿ ಮಾಡುವುದು ವಾಡಿಕೆ.ಆದರೆ ಲಾಕ್‌ಡೌನ್ ಎಫೆಕ್ಟ್ನಿಂದಾಗಿ ಎಲ್ಲವೂ ಬಂದ್‌ಆಗಿದೆ. ಇತ್ತ ಜನರೂ ಖರೀದಿಸುವಂತಿಲ್ಲ. ಅತ್ತಅಂಗಡಿ ಮುಂಗಟ್ಟುಗಳೂ ತೆರೆಯುವಂತಿಲ್ಲ ಹೀಗಾಗಿಇಲ್ಲಿಯೂ 30-40 ಕೋಟಿ ರೂ. ವಹಿವಾಟುಸ್ಥಗಿತವಾಗಿದೆ.
ದತ್ತು ಕಮ್ಮಾರ