Advertisement

ಕರ್ಫ್ಯೂ: ಕೆಲಸವಿಲ್ಲದೆ ಜೋಪಡಿ ಕಾರ್ಮಿಕರು ಕಂಗಾಲು

09:41 PM May 01, 2021 | Team Udayavani |

ಕುಂದಾಪುರ: ಇಲ್ಲಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ರಾಷ್ಟಿÅàಯ ಹೆದ್ದಾರಿ 66ರ ಪಕ್ಕದಲ್ಲಿ ಜೋಪಡಿಗಳಲ್ಲಿ ವಾಸ ಮಾಡುವ ವಲಸಿಗ ಕುಟುಂಬದವರು ಜನತಾ ಕರ್ಫ್ಯೂನಿಂದಾಗಿ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ.
ಉ.ಕ. ಜಿಲ್ಲೆಯ ಮುಂಡಗೋಡ ತಾಲೂಕಿನಿಂದ ವಲಸೆ ಬಂದು ಹಲವು ವರ್ಷಗಳಿಂದ ಮುಳ್ಳಿಕಟ್ಟೆಯಲ್ಲಿ ಜೋಪಡಿ ಹಾಕಿಕೊಂಡು ನೆಲೆಸಿದ್ದಾರೆ. ಹೊಳೆಗಳಲ್ಲಿ ಮೀನು ಹಿಡಿದು ಮಾರಾಟ ಮಾಡಿ ಜೀವನ ಸಾಗಿಸುವ ಇವರ ಮಕ್ಕಳು ಇಲ್ಲಿನ ಶಾಲೆಗಳಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 18 ಗುಡಿಸಲುಗಳಲ್ಲಿ 25 ಮಕ್ಕಳು ಸೇರಿ ದಂತೆ ಒಟ್ಟು 75ಕ್ಕೂ ಅಧಿಕ ಮಂದಿ ಇಲ್ಲಿದ್ದಾರೆ.

Advertisement

ಅಕ್ಕಿ- ಬೆಡ್‌ ಶೀಟ್‌ ವಿತರಣೆ
ವಲಸೆ ಕಾರ್ಮಿಕರು ನೆಲೆಸಿರುವ ಮುಳ್ಳಿಕಟ್ಟೆಯ ಜೋಪಡಿಗೆ ಶನಿವಾರ ಕುಂದಾಪುರದ ಎಸಿ ಕೆ. ರಾಜು ಹಾಗೂ ತಹಶೀಲ್ದಾರ ಕೆ.ಬಿ. ಆನಂದಪ್ಪ ನಾಯ್ಕ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಊರುಗಳಿಗೆ ತೆರಳಲು ಇಚ್ಚಿಸಿದ್ದರೆ ಬಸ್‌ ವ್ಯವಸ್ಥೆ ಮಾಡಲಾಗುವುದು. ದಾನಿಗಳ ಸಹಾಯದಿಂದ ಇತರ ಸಾಮಗ್ರಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ವಲಸೆ ಕಾರ್ಮಿಕ ಕುಟುಂಬಗಳು ಊರಿನ ಹೆಸರಲ್ಲಿ ಪಡಿತರ ಚೀಟಿ ಹೊಂದಿದ್ದರೂ ಸ್ಥಳೀಯ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಕುಂದಾಪುರ ಉಪ ವಿಭಾಗಾಧಿಕಾರಿ ಕೆ. ರಾಜು ಸೂಚಿಸಿದರು.

ಇದೇ ವೇಳೆ ಕುಟುಂಬಗಳಿಗೆ ತಲಾ 10 ಕೆ.ಜಿ. ಅಕ್ಕಿ ಮತ್ತು ಬೆಡ್‌ಶೀಟ್‌ಗಳನ್ನು ವಿತರಿಸಲಾಯಿತು. ಕುಂದಾಪುರ ತಹಶೀಲ್ದಾರ್‌ ಆನಂದಪ್ಪ ನಾಯ್ಕ, ವಂಡ್ಸೆ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಹೊಸಾಡು ಗ್ರಾಮ ಸಹಾಯಕ ಕುಶಾಲ್‌ ಪೂಜಾರಿ, ಗಂಗೊಳ್ಳಿ ಗ್ರಾಮ ಸಹಾಯಕ ನಾಗೇಂದ್ರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next