ಚಳ್ಳಕೆರೆ: ಕಳೆದ ಮಾರ್ಚ್ ತಿಂಗಳಲ್ಲಿ ಪ್ರಾರಂಭವಾದಕೊರೋನಾ ಕಂಟಕ ಮತ್ತೆ ಮುಂದುವರಿದಿದ್ದು,ಎರಡನೇ ಅವಧಿ ಯಲ್ಲಿ ಇದು ಹೆಚ್ಚುಅಪಾಯವನ್ನುಂಟು ಮಾಡುವ ಎಲ್ಲಾ ಲಕ್ಷ್ಮಣಗಳು ಪ್ರಾರಂಭದಲ್ಲೇ ಗೋಚರಿಸಿದೆ.
ಈ ಕೊರೋನಾವೈರಾಣುವನ್ನು ಸಂಪೂರ್ಣವಾಗಿ ನಿಯಂತ್ರಿಸಲುಆರೋಗ್ಯ ಇಲಾಖೆಯೊಂದಿಗೆ ಎಲ್ಲಾ ಇಲಾಖೆಗಳು ಶ್ರಮಿಸುವಂತೆ ಶಾಸಕ ಟಿ.ರಘುಮೂರ್ತಿ ಅಧಿ ಕಾರಿವರ್ಗಕ್ಕೆ ಸೂಚನೆ ನೀಡಿದರು.ಬುಧವಾರ ಇಲ್ಲಿನ ತಾಪಂ ಕಾರ್ಯಾಲಯದಲ್ಲಿಕೊರೊನಾ ನಿಯಂತ್ರಣ ಕುರಿತು ತುರ್ತಾಗಿಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿಮಾತನಾಡಿದರು. ಸರ್ಕಾರ ಈಗಾಗಲೇ ಸೂಚನೆನೀಡಿದ್ದು, ಇದರ ನಿಯಂತ್ರಣದ ಪೂರ್ಣಜವಾಬ್ದಾರಿ ಆರೋಗ್ಯ ಇಲಾಖೆಯದಾಗಿದ್ದರೂ ಆರೋಗ್ಯ ಇಲಾಖೆಗೆ ಕಂದಾಯ, ಗೃಹ,ಗ್ರಾಮೀಣಾಭಿವೃದ್ಧಿ ಇಲಾಖೆ ಅ ಧಿಕಾರಿಗಳುಸದಾ ಜತೆಯಲ್ಲಿದ್ದು ಕಾರ್ಯನಿರ್ವಹಿಸಬೇಕಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರು ತಮ್ಮವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಯಾರಾದರೂಬೆಂಗಳೂರು ಸೇರಿದಂತೆ ವಿವಿದೆಡೆಯಿಂದಆಗಮಿಸಿ ಗ್ರಾಮ ಸೇರಿದ್ದರೆ ಅಂಥವರ ಬಗ್ಗೆಆರೋಗ್ಯ, ಪೊಲೀಸ್ ಇಲಾಖೆಗೆ ಮಾಹಿತಿನೀಡಬೇಕು. ನಗರ ಪ್ರದೇಶದ 31 ವಾಡ್ìಗಳಲ್ಲೂ ಸ್ವತ್ಛತಾ ಕಾರ್ಯಕೈಗೊಳ್ಳುವುದಲ್ಲದೆ,ಕೊರೊನಾ ನಿಯಂತ್ರಣಕ್ಕೆ ವ್ಯಾಪಕ ಪ್ರಚಾರಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.
ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಕಾಪಾಡದೇಇರುವವರ ವಿರುದ್ಧ ಪೊಲೀಸ್ ಸಹಕಾರಪಡೆದು ನಿಯಂತ್ರಿಸುವಂತೆ ಪೌರಾಯುಕ್ತಪಿ.ಪಾಲಯ್ಯನವರಿಗೆ ಸೂಚನೆ ನೀಡಿದರು.ಡಿವೈಎಸ್ಪಿ ಕೆ.ವಿ. ಶ್ರೀಧರ್, ಠಾಣಾ ಇನ್ಸಪೆಕ್ಟರ್‌ಜೆ.ಎಸ್.ತಿಪ್ಪೇಸ್ವಾಮಿ ಸೂಚನೆ ನೀಡಿ ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪಾತ್ರಮಹತ್ವವುಳ್ಳದ್ದಾಗಿದ್ದು, ಹೆಚ್ಚು ಜನರು ಸೇರದಂತೆ,ವಾಹನಗಳು ಸಂಚರಿಸದಂತೆ ನಿಯಂತ್ರಣಮಾಡಿ, ಅಗತ್ಯ ವಸ್ತುಗಳ ಖರೀದಿಸುವವರಬಗ್ಗೆ ವಿಚಾರಣೆ ನಡೆಸಿ ವಿನಾಯಿತಿ ನೀಡಬೇಕು ಎಂದರು.
ತಾಪಂ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ, ನಗರಸಭೆಅಧ್ಯಕ್ಷ ಸಿ.ಬಿ.ಜಯಲಕ್ಷ್ಮೀ, ತಾಪಂ ಇಒ ಪ್ರಕಾಶ್,ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್, ಉಪಾಧ್ಯಕ್ಷೆಜೈತುಂಬಿ, ಬಿಇಒ ಕೆ.ಎಸ್.ಸುರೇಶ್, ಅಕ್ಷರದಾಸೋಹ ಅಧಿ ಕಾರಿ ತಿಪ್ಪೇಸ್ವಾಮಿ, ಎಇಇ ಕಾವ್ಯ,ವಿರೂಪಾಕ್ಷಪ್ಪ, ಮೋಹನ್‌ಕುಮಾರ್, ತಿಮ್ಮರಾಜು,ಸಿಡಿಪಿಒ ಮೋಹನ್‌ಕುಮಾರಿ, ಕುಸುಮ,ಡಿ.ಟಿ.ಜಗನ್ನಾಥ, ಜಿ.ಆರ್.ಮಂಜಪ್ಪ, ಮಾಲತಿಮುಂತಾದವರು ಉಪಸ್ಥಿತರಿದ್ದರು