Advertisement
ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ಕೂಲಿಗಾಗಿಬಂದು ತಮ್ಮ ಬದುಕು ಕಟ್ಟಿ ಕೊಂಡವರ ಬದುಕನ್ನುಕೊರೊನಾ ಹಾಳು ಮಾಡುತ್ತಿದೆ. ಹೇಗೊ ಕೊರೊನಾಕಡಿಮೆ ಯಾಗಿತ್ತು. ನಮ್ಮ ಬದುಕು ಕಟ್ಟಿಕೊಳ್ಳೋಣಎಂದು ನಗರ ಪ್ರದೇಶಗಳಿಗೆ ಬಂದಿದ್ದಕೂಲಿ ಕಾರ್ಮಿಕರು ಕೊರೊನಾಎರಡನೇ ಆರ್ಭಟಕ್ಕೆ ನಲುಗಿಮತ್ತೆ ತಮ್ಮ ತಮ್ಮಊರುಗಳತ್ತ ಬಂಡಿಊಡಿದ್ದಾರೆ.
Related Articles
Advertisement
ಆದರೆ, ಈಗ ಮತ್ತೆ ಕೊರೊನಾ ಎರಡನೇ ಅಲೆ ತನ್ನರುದ್ರನರ್ತನವನ್ನು ತೋರಲಾರಂಭಿಸಿದ್ದು, ಪ್ರತಿದಿನಸಾವಿರಾರು ಜನರಿಗೆ ಸೋಂಕು ಇರುವುದುಕಂಡುಬರುತ್ತಿದ್ದು, ಇದರಿಂದ ಆತಂಕಗೊಂಡಿರುವಕೂಲಿ ಕಾರ್ಮಿಕರು ಈಗ ಸರ್ಕಾರ ಕೊರೊನಾನಿಯಂತ್ರಿಸಲು 14 ದಿನ ಕರ್ನಾಟಕ ಲಾಕ್‌ಡೌನ್‌ಘೋಷಣೆ ಮಾಡಿದೆ. ಇದರಿಂದ ಎಲ್ಲ ಕೆಲಸಕಾರ್ಯಗಳು ಸ್ಥಗಿತಗೊಳ್ಳುತ್ತವೆ. ಇಲ್ಲಿ ಇದ್ದು ಏನುಮಾಡುವುದು ನಮ್ಮ ಹಳ್ಳಿಗಾದರೂ ಹೋದರೆಸಂಬಂಧಿಕರ ಜೊತೆ ಇರಬಹುದು ಎಂದುತುಮಕೂರು ನಗರವನ್ನು ಖಾಲಿ ಮಾಡುತ್ತಿದ್ದಾರೆಕಾರ್ಮಿಕರು.
ವಾಹನಸಂಚಾರ ಅಧಿಕಮಂಗಳವಾರ ಸಂಜೆಯಿಂದ ರಾಜ್ಯ ಸರ್ಕಾರಕಟ್ಟುನಿಟ್ಟಿನ ಲಾಕ್‌ಡೌನ್ ಘೋಷಣೆ ಮಾಡಿರುವಹಿನ್ನೆಲೆ ಬೆಂಗಳೂರಿನಿಂದ ಸಾವಿರಾರು ಕಾರ್ಮಿಕರುತುಮಕೂರಿನತ್ತ ಹೆಜ್ಜೆ ಹಾಕಿದರು. ರೈಲು, ಬಸ್,ಲಾರಿ, ಟ್ಯಾಕ್ಸಿ, ಕಾರು, ಬೈಕ್ ಸೇರಿದಂತೆ ವಿವಿಧವಾಹನಗಳಲ್ಲಿ ಕಾರ್ಮಿಕರು ಬರುತ್ತಿದ್ದ ಹಿನ್ನೆಲೆನಗರದ ರಿಂಗ್ ರಸ್ತೆಯಲ್ಲಿ ವಾಹನಸಂಚಾರ ಅಧಿಕವಾಗಿತ್ತು.1.50 ಲಕ್ಷ ಕಾರ್ಮಿಕರ ಬದುಕು ಅತಂತ್ರಪ್ರತಿದಿನ ಜಿಲ್ಲೆಯಲ್ಲಿ 1.50 ಲಕ್ಷ ಕೂಲಿ ಕಾರ್ಮಿಕರು ವಿವಿಧ ಹಂತಗಳಲ್ಲಿ ಕೆಲಸ ಮಾಡಿ ತಮ್ಮ ಬದುಕುಕಟ್ಟಿಕೊಂಡಿದ್ದರು. ಆದರೆ, ಕೊರೊನಾ ಮಹಾಮಾರಿಯ ಆರ್ಭಟದಿಂದ ಬುಧವಾರದಿಂದ ಆಗಲಿರುವ 14ದಿನಗಳ ಲಾಕ್‌ಡೌನ್‌ಗೆ ಹೆದರಿ ತುಮಕೂರು ತೊರೆಯುತ್ತಿದ್ದಾರೆ.
ತುಮಕೂರು ಜಿಲ್ಲೆಯಲ್ಲಿನ 86,500 ಕಟ್ಟಡಕಾರ್ಮಿಕರು ಇದ್ದು, 11 ಸಾವಿರ ಗಾರ್ಮೆಂಟ್ಸ್ ಕಾರ್ಮಿಕರು, 9,000 ಅಸಂಘಟಿತ ಕಾರ್ಮಿಕರು ಇದ್ದಾರೆ.ಇನ್ನೂ ವಿವಿಧ ಬಗೆಯ ಕಾರ್ಮಿಕರು ಸೇರಿ 1.50 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಇದ್ದು, ಇನ್ನೂ ಹಲವುಕಾರ್ಮಿಕರ ನೋಂದಣಿ ಕಾರ್ಮಿಕ ಇಲಾಖೆಯಲ್ಲಿ ಆಗಿಲ್ಲ. ಇವರ ಜೊತೆಗೆ ಪೈಪ್‌ಲೈನ್ ಕಾರ್ಮಿಕರು ರಸ್ತೆಕಾರ್ಮಿಕರು ಸೇರಿದಂತೆ ವಿವಿಧ ಕೆಲಸ ಮಾಡುವವರು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸೇರಿಲಕ್ಷಾಂತರ ಕಾರ್ಮಿಕರು ಇದ್ದು, ಲಾಕ್‌ಡೌನ್‌ನಿಂದ ಕಾರ್ಮಿಕರ ಬದುಕು ಮತ್ತೆ ಅತಂತ್ರವಾಗಿ ಬಿಟ್ಟಿದೆ.
ಚಿ.ನಿ.ಪುರುಷೋತ್ತಮ್