Advertisement

ತಮ್ಮವರನ್ನು ಕ‌ಳೆದುಕೊಂಡ ಕುಟುಂಬಸ್ಥರ ಆಕ್ರಂದನ

04:28 PM Apr 26, 2021 | Team Udayavani |

ಮಂಡ್ಯ: ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣಏರಿಕೆಯಾಗುತ್ತಿದ್ದು, ನಿಯಂತ್ರಣಕ್ಕೆ ಸಿಗದಂತಾಗಿದೆ.ಸಾವಿನ ಪ್ರಮಾಣವೂ ಹೆಚ್ಚಾಗಿದೆ. ತಮ್ಮವರನ್ನುಕಳೆದುಕೊಂಡವರ ಕುಟುಂಬಸ್ಥರ ಆಕ್ರಂದನ ಹೇಳತೀರದಾಗಿದೆ.ಕಳೆದ ನಾಲ್ಕೈದು ದಿನಗಳಿಂದ ಪ್ರತಿದಿನ ಜಿಲ್ಲೆಯವಿವಿಧ ಆಸ್ಪತ್ರೆಗಳಲ್ಲಿ ಕೊರೊನಾದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಆತಂಕತಂದೊಡ್ಡಿದೆ. ಕಳೆದ ವರ್ಷದ ಕೊರೊನಾದ ಪ್ರಮಾಣಕಡಿಮೆ ಇತ್ತು. ಆದರೆ ಪ್ರಸ್ತುತ ವರ್ಷದ ಎರಡನೇಅಲೆಯ ಸೋಂಕಿನ ಪ್ರಮಾಣ ಹೆಚ್ಚಾಗಿದೆ.

Advertisement

ಸಂಬಂಧಿಕರ ಆಕ್ರಂದನ: ಕೊರೊನಾದಿಂದಮೃತಪಟ್ಟವರ ಸಂಬಂ ಧಿಕರು ಹಾಗೂ ಪೋಷಕರಆಕ್ರಂದನ ಮುಗಿಲು ಮುಟ್ಟಿದೆ. ತೀವ್ರ ಉಸಿರಾಟದತೊಂದರೆ (ಸಾರಿ)ಯಿಂದ ಬಳಲುತ್ತಿರುವಪ್ರಕರಣಗಳು ಏರಿಕೆಯಾಗುತ್ತಿದ್ದು, ಸಾವಿನಸಂಖ್ಯೆಯೂ ಏರುತ್ತಿದೆ.

ನಾಲ್ಕೇ ದಿನಕ್ಕೆ 16 ಮಂದಿ ಸಾವು: ಕಳೆದ ನಾಲ್ಕುದಿನಗಳಿಂದ ಒಟ್ಟು 16 ಮಂದಿ ಮೃತಪಟ್ಟಿದ್ದಾರೆ.ಗುರುವಾರ ಕೊರೊನಾ ಸೋಂಕಿನಿಂದಉಸಿರಾಟದ ತೊಂದರೆಯಿಂದ ನಾಲ್ಕು ಮಂದಿಮೃತಪಟ್ಟರೆ, ಶುಕ್ರವಾರವೂ ಸಹ ನಾಲ್ಕು, ಶನಿವಾರಮೂರು, ಭಾನುವಾರು ಐದು ಮಂದಿಕೊರೊನಾಗೆ ಬಲಿಯಾಗಿದ್ದಾರೆ. ಎಲ್ಲವೂ ಸೋಂಕಿನಜತೆಗೆ ಉಸಿರಾಟದ ತೊಂದರೆ, ಕೆಮ್ಮು, ಜ್ವರದಿಂದಮೃತಪಟ್ಟವರಾಗಿದ್ದಾರೆ.

ಸಾರಿ ಪ್ರಕರಣಗಳಿಂದಲೇ ಸಾವು: ಇದುವರೆಗೂಸಾವನ್ನಪ್ಪುವವರ ಸಂಖ್ಯೆಯಲ್ಲಿ ತೀವ್ರ ಉಸಿರಾಟದತೊಂದರೆಯಿಂದ ಮೃತಪಟ್ಟವರು ಹೆಚ್ಚಿದ್ದಾರೆ.ಕಳೆದ ಒಂದು ತಿಂಗಳ ವರದಿಯ ಪ್ರಕಾರ ಸಾರಿಪ್ರಕರಣದಿಂದ ಮೃತಪಡುತ್ತಿದ್ದು, ಶನಿವಾರಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆದಾಖಲಾದವರು ಒಂದೇ ದಿನದಲ್ಲಿ ಸಾವನ್ನಪ್ಪುವಹಾಗೂ ಇನ್ನೂ ಕೆಲವರು ಆಸ್ಪತ್ರೆಗೆ ದಾಖಲಾಗಿನಾಲ್ಕು ದಿನಗಳ ಅಂತರದಲ್ಲಿ ಮೃತಪಟ್ಟಿರುವಪ್ರಕರಣ ನಡೆದಿದೆ.

ಎಚ್‌.ಶಿವರಾಜು

Advertisement
Advertisement

Udayavani is now on Telegram. Click here to join our channel and stay updated with the latest news.

Next