ರಾಮನಗರ: ಕೋವಿಡ್ ಸೋಂಕು ರಾಜ್ಯದಲ್ಲಿ ಉಲ್ಬಣವಾಗುತ್ತಿದೆ. ರಾಜ್ಯ ಯಮಲೋಕವಾಗುತ್ತಿದೆ. ಕೋವಿಡ್ ನಿಯಂತ್ರಿಸುವನಿಟ್ಟಿನಲ್ಲಿ ಸರ್ಕಾರದಿಂದ ವ್ಯವಸ್ಥಿತವಾದಕ್ರಮಗಳು ಜಾರಿಯಾಗುತ್ತಿಲ್ಲ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಕನ್ನಡ ಪರ ವಿವಿಧ ಸಂಘ ಟ ನೆಗಳ ಕಾರ್ಯ ಕ ರ್ತರೊಂದಿಗೆ ಪ್ರತಿ ಭ ಟನೆನಡೆ ಸಿ ಮಾತನಾಡಿದರು.ಸರ್ಕಾರ ಕಡೆಗಣಿಸಿದೆ:ರಾಜ್ಯ ದಲ್ಲಿ ಕೋವಿಡ್‌ಸೋಂಕು ತಡೆ ಗ ಟ್ಟು ವಲ್ಲಿ ರಾಜ್ಯ ಸರ್ಕಾರಸಂಪೂರ್ಣ ವಿಫಲವಾಗಿದೆ.
ರಾಜ್ಯದಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್‌ಗಳಿಲ್ಲ.ಹೆಣಗಳನ್ನು ಸುಡಲು, ಹೂಳುವುದಕ್ಕೂವಿಳಂಬ ವಾ ಗು ತ್ತಿದೆ. ಬಡ ಜನರ ಪರಿಸ್ಥಿತಿಹೀನಾಯವಾಗಿದೆ. ಸಮರೋಪಾದಿಯಲ್ಲಿಆಸ್ಪತ್ರೆಗಳು ಸಜ್ಜಾ ಗ ಬೇ ಕು. ಯಥೇತ್ಛವಾಗಿಹಾಸಿಗೆಗಳು ದೊರಕಬೇಕು. ಆಮ್ಲಜನಕದಾಸ್ತಾನು ಮಾಡಬೇಕು. ರಾಜ್ಯ ಸರ್ಕಾರದಲ್ಲಿಹೊಂದಾಣಿಕೆ ಇಲ್ಲ. ಕೇಂದ್ರ ಸರ್ಕಾರವೂರಾಜ್ಯ ಸರ್ಕಾರವನ್ನು ಕಡೆಗಣಿಸಿದೆ ಎಂದು ದೂರಿದರು.
ಕೂಡಲೇ ಮುಖ್ಯಮಂತ್ರಿಗಳಅಧ್ಯಕ್ಷತೆಯಲ್ಲಿ ರಾಜ್ಯಸಭಾ ಸದಸ್ಯರು,ಸಂಸದರು, ಶಾಸಕರು ಹಾಗೂ ವಿಪಕ್ಷಸೇರಿದಂತೆ ರಾಜ್ಯಮಟ್ಟದ ಉನ್ನತ ಮಟ್ಟದಸಮಿತಿ ರಚನೆ ಮಾಡಿಕೊಂಡು ಕೊರೊನಾತಡೆಗೆ ಪರಿಣಾಮಕಾರಿಯಾಗಿ ಕೆಲಸಮಾಡಬೇಕು ಎಂದು ಒತ್ತಾಯಿಸಿದರು.ಖಾಸಗಿ ಆಸ್ಪತ್ರೆಗಳು ಲೂಟಿಗಿಳಿದಿವೆ.ಆಸ್ಪತ್ರೆಗಳು ಕೇವಲ ರಾಜಕಾರಣಿಗಳು ಮತ್ತುಶ್ರೀಮಂತರಿಗೆ ಮಾತ್ರ ಎನ್ನುವಂತಾಗಿದೆ.ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ರೋಗಿಗಳುರಸ್ತೆಗಳಲ್ಲಿ ಅಲೆದಾಡುತ್ತಿದ್ದಾರೆ.
ಜನಸಾಮಾನ್ಯರನ್ನು ಕೇಳುವವರೇ ಗತಿಇಲ್ಲದಂತಾಗಿದೆ. ರೋಗಿಗಳಿಗೆ ಆಸ್ಪತ್ರೆಗಳಲ್ಲಿಚಿಕಿತ್ಸೆ ದೊರಕುವಂತಾ ಗ ಬೇಕು ಎಂದು ಆಗ್ರಹಿ ಸಿ ದರು.ವೀಕೆಂಡ್ ಮತ್ತು ನೈಟ್ ಕರ್ಫ್ಯೂವಿರುದ್ಧವೂ ಅಸ ಮಾ ಧಾನ ವ್ಯಕ್ತಪಡಿ ಸಿದವಾಟಾಳ್ ನಾಗ ರಾಜ್, ಅರ್ಧಂಬರ್ಧಲಾಕ್‌ಡೌನ್ ಸರಿಯಲ್ಲ. ಸರ್ಕಾರ ಕೂಡಲೇಮಾರ್ಗಸೂಚಿಗಳಲ್ಲಿ ಬದಲಾವಣೆ ತರಬೇಕುಎಂದು ಒತ್ತಾಯಿಸಿದರು.ರಾಜ್ಯಪಾಲರು ಸರ್ವಪಕ್ಷ ಸಭೆನಡೆಸಿರುವುದನ್ನು ನೋಡಿದರೆ ರಾಜ್ಯದಲ್ಲಿಸರ್ಕಾರ ಇಲ್ಲದಂತೆ ಕಾಣುತ್ತಿದೆ.ಮುಖ್ಯಮಂತ್ರಿಗಳು ಇರುವಾಗರಾಜ್ಯಪಾಲರು ಸರ್ವಪಕ್ಷಗಳ ಸಭೆ ಕರೆದಿದ್ದುಸರಿಯಲ್ಲ. ಅನುಚಿತವಾಗಿ ನಡೆದಿರುವ ಈಸಭೆಯನ್ನು ವಿಪಕ್ಷಗಳು ಬಹಿಷ್ಕರಿಸಬೇಕಾಗಿತ್ತು.ವಿಪಕ್ಷ ನಾಯಕ ಸಿದ್ದರಾಮಯ್ಯ ಅವರುಗೈರಾಗುವ ಮೂಲಕವಾದರೂ ಪ್ರತಿರೋಧತೋರಿಸಬಹುದಾಗಿತ್ತು ಎಂದರು.