Advertisement

ಚಿತಾಗಾರ ಸಿಬ್ಬಂದಿ ಕಣ್ಣಲ್ಲೂ ನೀರು ತರಿಸುತ್ತಿದೆ ಕೋವಿಡ್

01:19 PM Apr 21, 2021 | Team Udayavani |

ಬೆಂಗಳೂರು: ರಾಜಧಾನಿಯ ಬಹುತೇಕ ಚಿತಾಗಾರದ ಮುಂದೆ ಸಾಲು ನಿಂತಿದ್ದ ಆ್ಯಂಬುಲೆನ್ಸ್‌ ಗಳು.ಅದರೊಳಗೆ ಕೊರೊನಾ ಸೋಂಕಿನಿಂದ ಜೀವ ಕಳೆದುಕೊಂಡ ಮೃತ ದೇಹಗಳು. ಶವವೊಂದರ ಅಂತ್ಯಸಂಸ್ಕಾರಕ್ಕೆ ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದ ಸಿಬ್ಬಂದಿ.

Advertisement

ಅಲ್ಲಿಯವರೆಗೂ ಸಂಬಂಧಿಕರ ಆಕ್ರಂದನ…ಇನ್ನೊಂದೆಡೆ ಚಿತಾಗಾರಗಳಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೆ ದಿನ ಕಳೆಯುವುದರೊಳಗೆ ಎಲ್ಲಾ ಶವಗಳ ಅಂತ್ಯಸಂಸ್ಕಾರ ಸಾಧ್ಯವೇ? ಎಂಬ ಚಿಂತೆಯಲ್ಲಿಯೇಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಕ ಸಿಬ್ಬಂದಿ ಮತ್ತು ಚಿತಾಗಾರದ ನೌಕರರು…’ ಇದುನಗರದ ಬಹುತೇಕ ಚಿತಾಗಾರಗಳ ಬಳಿ ಕಂಡುಬಂದ ದೃಶ್ಯ. ಸ್ಮಶಾನದಲ್ಲಿ ಕೆಲಸ ಮಾಡುವವರು ನಿತ್ಯಶವಗಳನ್ನು ನೋಡುತ್ತಿರುತ್ತಾರೆ.

ಅವರಿಗೆ ಭಾವನೆಗಳೇ ಇಲ್ಲ ಎನ್ನು ತ್ತಾರೆ ಹಲವರು. ಯಾರೋ ಶವವನ್ನು ಇವರು ಅಂತ್ಯಸಂಸ್ಕಾರ ನೆರವೇರಿಸುವುದನ್ನು ಕೇವಲ ಒಂದು ಕರ್ತವ್ಯ ಎಂಬಂತೆ ಮಾಡುತ್ತಿರುತ್ತಾರೆ. ಆದರೆ,ಅವರ ಕಣ್ಣಲ್ಲೂ ನೀರು ಬರುತ್ತಿದೆ ಎಂಬುದು ಗೊತ್ತಿದೆಯೇ? ಹೌದು, ನಗರದ ವಿವಿಧಚಿತಾಗಾರ ದಲ್ಲಿ ಕೋವಿಡ್‌ ಸೋಂಕಿನಿಂದ ಸಾವನ್ನಪ್ಪಿದ ಮೃತದೇಹಗಳ ಶವಸಂಸ್ಕಾರ ಮಾಡುವ ನೌಕರರ ಕಣ್ಣಂಚಲ್ಲೂ ನೀರು ತರಿಸುತ್ತಿರುವ ದೃಶ್ಯ ಮನಕಲಕುತ್ತಿದೆ.

“ಸದ್ಯ ಪರಿಸ್ಥಿತಿ ತುಂಬಾ ಕಷ್ಟ ಇದೆ ಸರ್‌…ನಗರದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ನಿತ್ಯ ಹೆಚ್ಚುತ್ತಿದೆ. ಚಿತಾಗಾರಕ್ಕೆ ಆ್ಯಂಬುಲೆನ್ಸ್‌ನಲ್ಲಿ ಸಾಲು ಮೃತದೇಹ ಬರುತ್ತಿವೆ. ಮೃತರ ಸಂಬಂಧಿಕರು ಯಾರೂ ಇಲ್ಲ. ನಾವೇ ಅಂತಿಮ ವಿಧಿ-ವಿಧಾನಗಳನ್ನು ಪೂರೈಸಿ, ಶವ ಸಂಸ್ಕಾರ ಮಾಡುತ್ತಿದ್ದೇವೆ. ನಾವು ಶವವನ್ನು ಚಿತಾಗಾರದ ಒಳಗಡೆ ಕೊಂಡೊಯ್ಯುವಾಗ ಸಂಬಂಧಿಕರು ಗೇಟ್‌ ಹೊರಗಿನಿಂದಲೇ ಶವಕ್ಕೆ ನಮಿಸಿ ಕಣ್ಣೀರಿಡುತ್ತಾರೆ. ಆ ದೃಶ್ಯ ಕಂಡಾಗ ಕಣ್ಣಂಚಲ್ಲಿ ನೀರು ಬರುತ್ತದೆ ಸರ್‌..

‘ಹೀಗೆ.. ಚಿತಾಗಾರದಲ್ಲಿ ಸೋಂಕಿತರ ಮೃತದೇಹಗಳಿಗೆ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿ, ಶವಸಂಸ್ಕಾರ ಮಾಡುವ ಪುಣ್ಯ ಕಾರ್ಯ ನಿರ್ವಹಿಸುತ್ತಿರುವ ಚಿತಾಗಾರದ ನೌಕರರು, ತಮ್ಮ ಮನದಾಳದ ಮಾತನ್ನುಹೊರ ಹಾಕಿದ ಪರಿ ಇದು.ಶವ ಸಂಸ್ಕಾರಕ್ಕೆ 8 ಗಂಟೆ ಕಾಯಬೇಕು: “ಕೊರೊನಾಸೋಂಕಿತರ ಸಾವಿನ ಸಂಖ್ಯೆ ನಿತ್ಯ ಹೆಚ್ಚಾಗುತ್ತಿದ್ದು,ಸೋಮವಾರ ಒಂದೇ ದಿನ ನಗರದಲ್ಲಿ 97 ಜನ ಸಾವನ್ನಪ್ಪಿದ್ದಾರೆ.

Advertisement

ಒಂದು ಶವ ಸಂಸ್ಕಾರಕ್ಕೆ ಸಂಬಂಧಿಕರು 7ರಿಂದ 8 ಗಂಟೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.ಇಲ್ಲಿ ಒಂದು ಮಷಿನ್‌ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಎಲ್ಲಾ ಸೌಲಭ್ಯಗಳನ್ನುಕೊಟ್ಟಿದ್ದೇವೆ ಎನ್ನುತ್ತಾರೆ. ಆದರೆ, ಇಲ್ಲಿನ ಪರಿಸ್ಥಿತಿಬೇರೆಯೇ ಇದೆ. ಮೃತಪಟ್ಟವರ ಸಂಬಂಧಿಕರುಯಾರೂ ಇಲ್ಲ. ಹೀಗಾಗಿ, ನಾವೇ ಅಂತ್ಯ ಸಂಸ್ಕಾರಮಾಡು ತ್ತಿದ್ದೇವೆ. ಎಲ್ಲರೂ ಕೊರೊನಾ ಬಗ್ಗೆ ಎಚ್ಚರವಹಿಸಬೇಕು’ ಎಂದು ಸುಮನಹಳ್ಳಿ ಚಿತಾಗಾರದಸ್ವಯಂ ಸೇವಕ ಸಿಬ್ಬಂದಿ ಶಿವನಗೌಡ ಬಿರಾದರ್‌ ವಾಸ್ತವ ಸ್ಥಿತಿ ಬಿಚ್ಚಿಟ್ಟಿದ್ದಾರೆ.

ಅಂತ್ಯ ಸಂಸ್ಕಾರಕ್ಕೆ ಟೋಕನ್‌: “ನಿತ್ಯ ಚಿತಾಗಾರಕ್ಕೆಒಮ್ಮೆಲೆ, ಆರಕ್ಕೂ ಹೆಚ್ಚು ಮೃತದೇಹ ಬರುತ್ತಿವೆ. ಹೀಗಾಗಿ, ಮೃತರ ಸಂಬಂಧಿಕರು ಹೆಚ್ಚು ಸಮಯ ಕಾಯಬೇಕಾಗಿದೆ. ಒಮ್ಮೆ ಎರಡು ಶವಗಳನ್ನು ಮಾತ್ರಬರ್ನ್ ಮಾಡಬಹುದು. ಇನ್ನೂ ನಾಲ್ಕು ಶವಗಳನ್ನುತಂದವರು ಕಾಯಬೇಕಿರುವುದು ಅನಿವಾರ್ಯ. ಒಂದು ಬಾಡಿ ಬರ್ನ್ಗೆ 1ರಿಂದ 2 ಗಂಟೆ ಸಮಯವಾಗುತ್ತದೆ. ಹಿಂದುಳಿದು ಬಂದವರು ನಮ್ಮ ಶವವನ್ನುಮೊದಲು ಬರ್ನ್ ಮಾಡಿ ಎಂದು ಒತ್ತಡ ಹಾಕುತ್ತಾರೆ.ಹೀಗಾಗಿ, ಟೋಕನ್‌ ನೀಡಲಾಗುತ್ತಿದೆ’ ಎಂದುಸುಮನ ಹಳ್ಳಿ ಚಿತಾಗಾರದ ಸಿಬ್ಬಂದಿ ರವಿ ತಿಳಿಸಿದ್ದಾರೆ.

ಶವ ಸಂಸ್ಕಾರಕ್ಕೆ ಬರುವ ಸಂಬಂಧಿಕರಿಗೂ ಭಯ:ನಗರದ ಸುಮನಹಳ್ಳಿ ಚಿತಾಗಾರದ ಆವರಣದಲ್ಲಿಎಲ್ಲೆಂ ದರಲ್ಲೆ, ಪಿಪಿಇ ಕಿಟ್‌, ಕೈಗವಸು ಬಿದ್ದಿವೆ. ಇದರಿಂದ ಶವ ಸಂಸ್ಕಾರಕ್ಕೆಂದು ಚಿತಾಗಾರಕ್ಕೆ ಬರುವಸಂಬಂಧಿಕರಿಗೂ ಸೋಂಕು ತಗಲುವ ಭೀತಿ ಉಂಟಾಗಿದೆ. ಕೊರೊನಾ ಆ್ಯಂಬುಲೆನ್ಸ್‌ ಸಿಬ್ಬಂದಿ ಸಹ ಪಿಪಿಇಕಿಟ್‌, ಕೈಗವಸು ಮತ್ತು ಸರಿಯಾಗಿ ಮಾಸ್ಕ್ ಧರಿಸುತ್ತಿಲ್ಲ. ಚಿತಾಗಾರದ ಸಿಬ್ಬಂದಿಗೆ ಕೋವಿಡ್‌, ದೇಹದಉಷ್ಣಾಂಶ ಪರೀಕ್ಷೆ ನಡೆಸುತ್ತಿಲ್ಲ. ಹೀಗಾಗಿ, ಸಂಬಂಧಿಕರು ಗೇಟ್‌ನಿಂದ ಹೊರಗೆ ನಿಂತು ಶವ ಸಂಸ್ಕಾರಮುಗಿಸಿ ಹಿಂದಿರುಗುತ್ತಿದ್ದಾರೆ ಎಂದು ಮೃತರಸಂಬಂಧಿ ಕರೊಬ್ಬರು ತಿಳಿಸಿದ್ದಾರೆ.

ವಿಕಾಸ್‌ ಆರ್‌. ಪಿಟ್ಲಾಲಿ

Advertisement

Udayavani is now on Telegram. Click here to join our channel and stay updated with the latest news.

Next