ದೊಡ್ಡಬಳ್ಳಾಪುರ: ತಾಲೂಕು ಸೇರಿದಂತೆಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದಿನೇ ದಿನೆಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಒಟ್ಟುಪ್ರಕರಣಗಳು ಸಾವಿರ ದಾಟಿವೆ. 250ಕ್ಕೂ ಹೆಚ್ಚುಮಂದಿ ಸೋಂಕಿನಿಂದ ಮೃತರಾಗಿದ್ದಾರೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಾಲು. ಸ್ಮಶಾನದಲ್ಲಿ ಮೃತದೇಹಗಳ ಸರದಿ ಸಾಮಾನ್ಯವಾಗಿ ಪರಿಣಮಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿಯೂ ಹೆಚ್ಚಿದ ಆತಂಕ:ಕೊವಿಡ್ ಪ್ರಕರಣಗಳು ನಗರದಷ್ಟೇ ಅಲ್ಲದೇಗ್ರಾಮೀಣ ಭಾಗಗಳಲ್ಲಿಯೂ ಹೆಚ್ಚಾಗುತ್ತಿವೆ.ಜಿಲ್ಲೆಯಲ್ಲಿ 5 ಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದ ಹಿನ್ನಲೆಯಲ್ಲಿ, ತೀವ್ರತೆಗಳನ್ನು ಆಧರಿಸಿ,ಕೋವಿಡ್ ಪ್ರಕರಣಗಳಿರುವ 80 ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದೆ.
12 ಕಡೆಗಳಲ್ಲಿ ಸೆಮಿಕಂಟೆ, ನ್ಮೆಂಟ್ ಹಾಗೂ 2 ಕಡೆಗಳಲ್ಲಿ ಕಂಟೆ„ನ್ಮೆಂಟ್‌ವಲಯವನ್ನಾಗಿ ಮಾಡಲಾಗಿದೆ. ರೈತರು ತಮ್ಮ ಕೃಷಿಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಅಥವಾಇತ್ತಿತರೆ ಕೆಲಸಗಳಿಗೆ ನಗರ ಪ್ರದೇಶಗಳಿಗೆ ಬರಲುಸಾರಿಗೆ ವ್ಯವಸ್ಥೆ ಇಲ್ಲದೇ ಆಟೋ ಹಾಗೂ ಇತರವಾಹನಗಳನ್ನು ಬಳಸುವ ಅನಿವಾರ್ಯತೆ ಇದ್ದು,ವ್ಯಕ್ತಿಗತ ಅಂತರ ಕಾಪಾಡಿಕೊಳ್ಳದೇ ಸೋಂಕುಹರಡುವ ಸಂಭವ ಹೆಚ್ಚಾಗುತ್ತಿದೆ.
ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ: ತಾಲೂಕಿನಲ್ಲಿಹೆಚ್ಚುವರಿ ಆಕ್ಸಿಜನ್ ಬೆಡ್‌ಗಳ ಸ್ಥಾಪನೆಗೆ ಕಾರ್ಯಪ್ರವೃತ್ತವಾಗಿದ್ದು ಒಂದು ತಿಂಗಳ ಒಳಗೆ ಆಕ್ಸಿಜನ್‌ಕೊರತೆ ಇರದಂತೆ ಮಾಡಲು ಸರ್ವ ಪ್ರಯತ್ನನಡೆಸಲಾಗುತ್ತಿದ್ದು, ಈ ಒಂದು ತಿಂಗಳು ಸಾಧ್ಯವಾದಷ್ಟು ಸಮಸ್ಯೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ.ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 100 ಬೆಡ್‌ಗಳಕಂಟೈನರ್‌ಗಳ ತಾತ್ಕಾಲಿಕ ಕೊವಿಡ್ ಸೆಂಟರ್‌ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ.
ಕೋವಿಡ್‌ಸೋಂಕಿತರ ಚಿಕಿತ್ಸೆಗೆ ಶೀಘ್ರದಲ್ಲಿಯೇ ಜಿಲ್ಲಾಡಳಿತದಿಂದ100 ಆಕ್ಸಿಜನ್ ಕಾನ್ಸಂಟ್ರೇಟರ್ ಲಭ್ಯವಾಗಲಿದೆ ಎಂದುತಹಶೀಲ್ದಾರ್ ಟಿ.ಎಸ್.ಶಿವರಾಜ್ ತಿಳಿಸಿದ್ದಾರೆ.ಶಾಸಕರ ಮನವಿ: ತಾಲೂಕಿನಲ್ಲಿ ಆಮ್ಲಜನಕ,ವೆಂಟಿಲೇಟರ್, ಐಸಿಯು ಬೆಡ್‌ಗಳ ಕೊರತೆಯಿದೆ.ತಾಲೂಕಿನ ಸುತ್ತಮುತ್ತಲ ಇರುವ ವಿವಿಧಆಸ್ಪತ್ರೆಗಳಲ್ಲಿ ಪಡೆದಿರುವ ಮಾಹಿತಿ ಪ್ರಕಾರಕೊವಿಡ್ ಸೋಂಕಿತರಿಗೆ ಬೆಡ್‌ಗಳ ಕೊರತೆಹೆಚ್ಚಾಗುತ್ತಿದೆ.
ಈ ಬಗ್ಗೆ ತಾಲೂಕು ಹಾಗೂಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದ್ದು, ಸದ್ಯದಲ್ಲಿಯೇ ಹೆಚ್ಚವರಿ ಬೆಡ್‌ಗಳ ವ್ಯವಸ್ಥೆಯಾಗಲಿದೆ.ಆದರೆ ಸಾರ್ವಜನಿಕರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಅನಾವಶ್ಯಕವಾಗಿ ತಿರುಗಾಡದೇಮಾರ್ಗಸೂಚಿ ಪಾಲಿಸಬೇಕಿದೆ. ಗ್ರಾಮೀಣಭಾಗದ ಜನರು ನಗರ ಪ್ರದೇಶಗಳಿಗೆ ಬರುವುದು ನಿಲ್ಲಿಸಬೇಕಿದೆ. ಮನೆಯಲ್ಲಿಯೇ ಸುರಕ್ಷಿತವಾಗಿದ್ದು, ಕೊವಿಡ್ ತಡೆಗಟ್ಟಲು ಸಹಕರಿಸಬೇಕಿದೆಎಂದು ಶಾಸಕ ಟಿ.ವೆಂಕಟರಮಣಯ್ಯ ಮನವಿ ಮಾಡಿದ್ದಾರೆ.