Advertisement

ಕೊವ್ಯಾಕ್ಸಿನ್‌ ಪಡೆಯಲು ಬಂದವರಿಗೆ ನಾಳೆ ಬನ್ನಿ ಎಂದರು

05:19 PM May 07, 2021 | Team Udayavani |

ಹಾಸನ: ಜಿಲ್ಲೆಗೆ ಬುಧವಾರಪೂರೈಕೆಯಾಗಿದ್ದ ಕೊವ್ಯಾ ಕ್ಸಿನ್‌ ಲಸಿಕೆಗುರುವಾರ ವಿತರಣೆ ಆಗದಿದ್ದರಿಂದ ಲಸಿಕೆ ಪಡೆಯಬೇಕಿದ್ದ ವರು ಪರದಾಡಿದರು.

Advertisement

ದೌಡಾಯಿಸಿದ್ದರು: ಬುಧವಾರ ಜಿಲ್ಲೆಗೆ3700 ಲಸಿಕೆ ಪೂರೈಕೆಯಾಗಿತ್ತು. ಆದರೆ,ಗುರುವಾರ ಬೆಳಗ್ಗೆ ವರೆಗೂ ಆಸ್ಪತ್ರೆಗಳಿಗೆ ಲಸಿಕೆ ಹಂಚಿಕೆಯಾಗಿರಲಿಲ್ಲ. ಹೀಗಾಗಿಗುರು ವಾರ ಕೊವ್ಯಾಕ್ಸಿನ್‌ ಲಸಿಕೆ ವಿತರಣೆ ಆಗಲಿಲ್ಲ. ಲಸಿಕೆ ಪೂರೈಕೆಯಾಗಿರುವ ವಿಷಯ ತಿಳಿದಈಗಾಗಲೇ ಒಂದನೇ ಡೋಸ್‌ ಪಡೆದು 2ನೇ ಡೋಸ್‌ಪಡೆಯುವ ಅವಧಿ ಮೀರುತ್ತಿರುವವರು ಲಸಿಕಾಕೇಂದ್ರಗಳಿಗೆ ದೌಡಾಯಿಸಿದ್ದರು.

ಆದರೆ, ಲಸಿಕೆವಿತರಣೆಯಾಗಿಲ್ಲ ಎಂಬ ಸಿಬ್ಬಂದಿ ವಿವರಣೆಯಿಂದಬೇಸತ್ತು ವಾಪಸ್‌ ತೆರಳಿದರು. ಹಾಸನದ ವೈದ್ಯಕೀಯ ಕಾಲೇಜು ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯಲು ಆಗಮಿಸಿದವರ ದೂರವಾಣಿ ಸಂಖ್ಯೆ ಪಡೆದು ಲಸಿಕೆ ಬಂದ ನಂತರ ಕರೆ ಮಾಡಲಾಗುವುದು ಎಂದು ಸಮಾಧಾನ ಮಾಡಿ ಕಳುಹಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಾಳೆ ಬನ್ನಿ ಎಂದು ಲಸಿಕೆ ಪಡೆಯಬೇಕಿದ್ದವರನ್ನುಸಾಗ ಹಾಕಿದರು. ಗುರುವಾರ ಕೊವ್ಯಾಕ್ಸಿನ್‌ ಲಸಿಕೆ ಜಿಲ್ಲೆಗೆ ಪೂರೈಕೆಯಾಗಿಲ್ಲ. ಹೀಗಾಗಿ ಈಗದಾಸ್ತಾನಿರುವ 3700 ಲಸಿಕೆ ಪಡೆಯಲು ಶುಕ್ರವಾರ ಲಸಿಕಾ ಕೇಂದ್ರ ಗಳಲ್ಲಿ ನೂಕು ನುಗ್ಗಲು ಉಂಟಾಗುವ ಸಾಧ್ಯತೆ ಇದೆ. ಎಲ್ಲಾ ಲಸಿಕಾ ಕೇಂದ್ರಗಳಲ್ಲಿಯೂ ಕೋವಿಶೀಲ್ಡ್‌ ಲಸಿಕೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next