Advertisement
ಇದರಿಂದ ಹೆಚ್ಚು ದುಃಖವಾಗಿರುವುದು ಹುಡುಗಿಯರಿಗಂತೆ. ಯಾಕೆ ಅಂತ ಕೇಳಿ- ದಿನಾ ಕಲರ್ ಕಲರ್ ಬಟ್ಟೆ ಹಾಕಿಕೊಂಡು, ಟ್ರೆಡಿಷನಲ್ ಡೇ, ಸ್ಯಾರಿ ಡೇ, ನವರಾತ್ರಿ ನೈನ್ ಕಲರ್ಸ್ ಅಂತೆಲ್ಲಾ ಹೇಳಿಕೊಂಡು, ಬಣ್ಣದ ಚಿಟ್ಟೆಗಳಂತೆ ಆಫೀಸ್‌ಗೆ ಹೋಗುತ್ತಿದ್ದವರಿಗೆ, ಹತ್ತಿಪ್ಪತ್ತು ಜನ ಅಂಟಿಕೊಂಡು ಒಂದೇ ಸೆಲ್ಫಿಯೊಳಗೆ ಸೆರೆಯಾಗುತ್ತಿದ್ದವರಿಗೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಮನೆಯಿಂದಲೇ ಕೆಲಸ ಮಾಡಿ ಅಂದರೆ ಹೇಗಾಗಬೇಡ? ಅದೂ ಅಲ್ಲದೆ, ಹೊರಗೆ ಹೋಗುವಾಗ ಮಾಸ್ಕ್ ಧರಿಸಬೇಕಂತೆ. ಮುಖ ಚಂದ ಕಾಣಿಸಲಿ ಅಂತ ದುಬಾರಿ ಲಿಪ್‌ಸ್ಟಿಕ್‌ಗಳನ್ನು, ಫೌಂಡೇಶನ್ ಕ್ರೀಮ್‌ಗಳನ್ನು ಬಳಸುತ್ತಿದ್ದವರಿಗೆ, “ಮುಖ ಮುಚ್ಚಿಕೊಂಡು ಓಡಾಡಿ’ ಅಂದ್ರೆ, ಬೇಜಾರಾಗದೇ ಇರುತ್ತಾ? ಪಿಂಕ್, ಲೈಟ್ ಪಿಂಕ್, ರೆಡ್, ಡಾರ್ಕ್ ರೆಡ್, ಪೀಚ್, ಕೋರಲ್, ನ್ಯೂಡ್, ಡಸ್ಟಿ, ರೋಸ್, ಬೆರಿ, ಚೆರಿ ರೆಡ್ ಅಂತೆಲ್ಲಾ ಹತ್ತಾರು ಬಗೆಯ ಲಿಪ್‌ಸ್ಟಿಕ್‌ಗಳನ್ನು ಬಳಸುತ್ತಿದ್ದವರಿಗೆ, ಮಾಲ್ಲಾ ಹಾಕಿಕೊಂಡೇ ಹೊರಗೆ ಬನ್ನಿ ಅನ್ನೋದು ಎಂಥ ಅನ್ಯಾಯ ಅಲ್ವಾ? ಈಗ ಹುಡುಗಿಯರೆಲ್ಲಾ ಒಟ್ಟಾಗಿ, “ಕೋವಿಡ್ ನಿನಗೆ ಕರುಣೆ ಬಾರದೆ? ಬ್ಯೂಟಿ ಪಾರ್ಲರ್‌ಗಳನ್ನು ಮುಚ್ಚಿಸಿದ, ಮಾಲ್ಲಾ ನೊಳಗೆ ನಮ್ಮ ಸೌಂದರ್ಯವನ್ನು ಮರೆಮಾಚಿದನೀನೊಬ್ಬ ಗಂಡಸೇ ಇರಬೇಕು. ನಿಂಗೆ ಒಳ್ಳೇದಾಗಲ್ಲ ನೋಡು…’ ಅಂತ ವೈರಸ್ ಮೇಲೆ ಮುನಿಸಿಕೊಂಡಿದ್ದಾರಂತೆ! ದೇವರೇ, ಈ ಹುಡುಗಿಯರ ಶಾಪ ತಟ್ಟಿ, ಕೋವಿಡ್ ಆದಷ್ಟು ಬೇಗ ದೂರವಾಗಲಪ್ಪಾ ತಂದೆ!