ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಮತ್ತೆ ಕೊರೊನಾ ಅಡ್ಡಿಪಡಿಸಿದ್ದು ಬಾಕಿ
ಇರುವ 11 ಕಂಬಳಗಳನ್ನು ಸಮಿತಿ ತಾತ್ಕಾಲಿಕವಾಗಿ ಮುಂದೂಡಿದೆ. ಅವಕಾಶ ಲಭಿಸಿದರೆ ದಿನಾಂಕಗ ಳನ್ನು ಮರುಹೊಂದಾಣಿಕೆ ಮಾಡಿಕೊಂಡು ನಡೆಸ ಲಾಗುವುದು ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ತಿಳಿಸಿದ್ದಾರೆ.
ಈ ಬಾರಿಯ ಕಂಬಳ ಋತು ಡಿ. 5ರಂದು ಆರಂಭಗೊಂಡಿದ್ದು ಒಟ್ಟು 18 ಕಂಬಳಗಳ ದಿನಾಂಕಗಳನ್ನು ಸಮಿತಿ ಪ್ರಕಟಿಸಿತ್ತು. ಹೊಕ್ಕಾಡಿಗೋಳಿ, ಮಿಯಾರು,ಮೂಡುಬಿದಿರೆ, ಕಕ್ಕೆಪದವು ಹಾಗೂ ಮೂಲ್ಕಿ ಕಂಬಳ ನಡೆದಿವೆ.
ಇದನ್ನೂ ಓದಿ:ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸಾಧ್ಯವಿಲ್ಲ: ಡಾ| ಅಶ್ವತ್ಥ ನಾರಾಯಣ
ಜಪ್ಪಿನಮೊಗರು, ಸುರತ್ಕಲ್ ಕಂಬಳಗಳು ಕಾರಣಾಂತರಗಳಿಂದ ಆಯೋಜನೆಗೊಳ್ಳುತ್ತಿಲ್ಲ. ಈ ತಿಂಗಳು ನಡೆಯಬೇಕಿಗಿದ್ದ ಅಡ್ವೆ ನಂದಿಕೂರು, ಮಂಗಳೂರು ಹಾಗೂ ಪುತ್ತೂರು ಕಂಬಳಗಳನ್ನು ಮುಂದೂಡಲಾಗಿದೆ. ಸಾಂಪ್ರಾದಾಯಿಕ ಮತ್ತು ದೇವರ ಕಂಬಳಗಳಾದ ಜ. 29ರ ಐಕಳಬಾವ, ಫೆ. 19ರ ತಿರುವೈಲು ಮತ್ತು ಮಾ. 19ರ ಕಟಪಾಡಿ ಕಂಬಳಗಳನ್ನು ಅದೇ ದಿನ ಸಂಕಲ್ಪ ಮಾಡಿದಂತೆ ಆಯೋಜಿ ಸಲು ನಿರ್ಧರಿಸಲಾಗಿದೆ.