ಬೆಂಗಳೂರು : ಕರ್ನಾಟಕದಲ್ಲಿ ಇಂದು ಹೊಸ ಕೋವಿಡ್ ಪ್ರಕರಣಗಳು ೫೦ ಸಾವಿರದ ಗಡಿಗೆ ಬಂದು ನಿಂತಿದ್ದು ದಾಟಿದ್ದು, ನೈಟ್ ಕರ್ಫ್ಯೂ ಮತ್ತು ವಾರಾಂತ್ಯದ ಲಾಕ್ ಡೌನ್ ಹಿಂಪಡೆಯುವ ಕುರಿತು ಅನುಮಾನ ಮೂಡಿಸಿದೆ.
ರಾಜ್ಯದಲ್ಲಿ ಇಂದು ಒಟ್ಟು 47,754 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಬೆಂಗಳೂರಿನಲ್ಲಿ 30,540 ಪ್ರಕರಣಗಳ ವರದಿಯಾಗಿದೆ.
ರಾಜ್ಯದ ಪಾಸಿಟಿವಿಟಿ ದರ 18.48% ಆಗಿದ್ದು, 22,143 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ2,93,231 ಸಕ್ರಿಯ ಪ್ರಕರಣಗಳಿದ್ದು,ಬೆಂಗಳೂರಿನಲ್ಲಿ ಅತೀ ಹೆಚ್ಚು 2 ಲಕ್ಷದ ಪ್ರಕರಣಗಳು ಇವೆ ರಾಜ್ಯದಲ್ಲಿ ಇಂದು 29 ಸೋಂಕಿತರು ಸಾವನ್ನಪ್ಪಿದ್ದು, ಆ ಪೈಕಿ 08 ಮಂದಿ ಬೆಂಗಳೂರಿನವರಾಗಿದ್ದಾರೆ.ಇಂದು 2,58,290 ಮಂದಿಗೆ ಪರೀಕ್ಷೆಗಳನ್ನು ನಡೆಸಲಾಗಿದೆ.
ಲಸಿಕಾಕರಣದಲ್ಲಿ ಮಹತ್ವದ ಸಾಧನೆ : 99.9% ಮತ್ತು ಎಣಿಕೆ!
100 % ಮೊದಲ ಡೋಸ್ ವ್ಯಾಪ್ತಿಯನ್ನು ಸಾಧಿಸಲು ನಾವು ದೇಶದಲ್ಲಿ ಮೊದಲ ದೊಡ್ಡ ರಾಜ್ಯ (> 4 ಕೋಟಿ ವಯಸ್ಕ ಜನಸಂಖ್ಯೆ) ಆಗುವುದರಿಂದ ನಾವು 0.1% ದೂರದಲ್ಲಿದ್ದೇವೆ! ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿದ್ದಾರೆ.