Advertisement

ಕೋವಿಡ್ ಬಿಕ್ಕಟ್ಟು : ಭಾರತದ ಪರಿಸ್ಥಿತಿ ಎಲ್ಲಿ ಬೇಕಾದರೂ ಆಗಬಹುದು :  WHO ಎಚ್ಚರಿಕೆ

07:01 PM Apr 30, 2021 | Team Udayavani |

ವಾಷಿಂಗ್ಟನ್ :  ಕೋವಿಡ್ ಸೋಂಕಿನ ಎರಡನೇ ಅಲೆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಆತಂಕ್ಕಕ್ಕೆ ಕಾರಣವಾಗಿದೆ. ಕೋವಿಡ್ ಹೊಸ ಸೋಂಕಿನ ಪ್ರಕರಣಗಳು, ಸಾವು ನೋವು ದಿನನಿತ್ಯ ಏರಿಕೆಯಾಗುತ್ತಿರುವ ಕಾರಣದಿಂದ ಒಂದು ಹಂತದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ದೇಶದಲ್ಲಿ ಉಂಟಾಗಿದೆ.

Advertisement

ಈ ಹಿನ್ನೆಲೆಯಲ್ಲಿ ಜಗತ್ತಿನ ಇತರೆ ರಾಷ್ಟ್ರಗಳಿಗೆ ಭಾರತವನ್ನು ಬೊಟ್ಟು ಮಾಡಿ ತೋರಿಸುವ ಮೂಲಕ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯೊಂದನ್ನು ನೀಡಿದೆ.

ಕೋವಿಡ್ ಮಾರ್ಗ ಸೂಚಿಗಳನ್ನು ಸಡಿಲಗೊಳಿಸುವುದರಿಂದ ಭಾರತದ ಪರಿಸ‍್ಥಿತಿಯಂತೆಯೇ ಕೋವಿಡ್ ಸಾಂಕ್ರಾಮಿಕ ಸೋಂಕಿನ ರೂಪಾಂತರಿ ಅಲೆ ನಿಮ್ಮ ದೇಶಕ್ಕೂ ಅಪ್ಪಳಿಸಬಹುದು ಎಂದು ತಿಳಿಸಿದೆ.

ಓದಿ : ಹೆಚ್ಚುವರಿ 1 ಕೋಟಿ ಡೋಸ್‌ ಲಸಿಕೆ ಖರೀದಿಗೆ ಟಾಸ್ಕ್ ಪೋರ್ಸ್ ಸಭೆಯಲ್ಲಿ ಅನುಮೋದನೆ

ಭಾರತದಲ್ಲಿ ಕೋವಿಡ್ ನಿರ್ಬಂಧಗಳ ಸಡಿಲಿಕೆಯ ಕಾರಣದಿಂದ ಇಂದು ಲಕ್ಷಾಂತರ ಮಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಅನೇಕ ಸಾವು ನೋವುಗಳಾಗುತ್ತಿವೆ. ನಿಯಮಗಳ ಸಡಿಲಿಕೆಯ ಕಾರಣದಿಂದ ಜನ ಯಾವುದೇ ಭಯವಿಲ್ಲದೇ ಗುಂಪು ಸೇರಿರುವುದೇ ಭಾರತದಲ್ಲಿ ಇಂದು ಈ ಪರಿಸ್ಥಿತಿ ಉಂಟಾಗಲು ಕಾರಣವೆಂದು ತಜ್ಞರು ಅಭಿಪ್ರಾಯ ಪಟ್ಟಿರುವುದಾಗಿ ವರದಿಯಾಗಿದೆ.

Advertisement

ಕೋವಿಡ್ ನಿರ್ಬಂಧಗಳನ್ನು ಸಡಿಲಿಸುವ ತಪ್ಪನ್ನು ದೇಶಗಳು ಮಾಡಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ಮುಖ್ಯಸ್ಥರು ಸೂಚಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಬ್ಲ್ಯು ಎಚ್‌ ಒ ಯುರೋಪಿನ ಮುಖ್ಯಸ್ಥ ಹ್ಯಾನ್ಸ್ ಕ್ಲುಗೆ,  ರಕ್ಷಣಾ ಕ್ರಮಗಳನ್ನು ಸಡಿಲಗೊಳಿಸಿದಾಗ, ಸಾಮೂಹಿಕ ಕೂಟಗಳು ಹೆಚ್ಚಾದಾಗ, ವ್ಯಾಕ್ಸಿನೇಷನ್ ವ್ಯಾಪ್ತಿ ಇನ್ನೂ ಕಡಿಮೆ ಇರುವಾಗ ಈ ಕೋವಿಡ್ ರೂಪಾಂತರಿ ಅಲೆ ಯಾವುದೇ ದೇಶದಲ್ಲಿ ಹಠಾತ್ ಏರಿಕೆಯಾಗುವ ಸಾಧ್ಯತೆ ಇದೆ. “ಭಾರತದ ಪರಿಸ್ಥಿತಿ ಎಲ್ಲಿ ಬೇಕಾದರೂ ಆಗಬಹುದು ಎಂಬುದನ್ನು ಅರಿತುಕೊಳ್ಳುವುದು ಬಹಳ ಮುಖ್ಯ.” ಎಂದಿದ್ದಾರೆ.

ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್ ರೂಪಾಂತರವು ದೇಶವನ್ನು ಈಗ ಅಡಿಮೇಲಾಗಿಸುತ್ತಿದೆ. ಆದರೇ, ಈ ರೂಪಾಂತರವು ಇತರ ಕೋವಿಡ್ ರೂಪಾಂತರಿಗಳಿಗಿಂತ ಹೆಚ್ಚು ಹರಡಬಲ್ಲದು ಅಥವಾ ಹೆಚ್ಚು ಮಾರಕವಾಗಿದೆಯೆ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಯಾವುದೇ ಅಧಿಕೃತ ವರದಿ ಇದುವರೆಗೆ ಬಂದಿಲ್ಲ.

ಓದಿ : ಕೋವಿಡ್ ಲಸಿಕೆ ಕೊರತೆ ಬಗ್ಗೆ ಕೇಳಿದ್ದಕ್ಕೆ ಮಾಧ್ಯಮದವರ ವಿರುದ್ಧ ಗರಂ ಅದ ಸಿಎಂ!

Advertisement

Udayavani is now on Telegram. Click here to join our channel and stay updated with the latest news.

Next