ಮುಂಬಯಿ, ಮೇ 18: ಕೋವಿಡ್ ಲಾಕ್‌ಡೌನ್ ಹಿನ್ನೆಲೆ ರದ್ದಾಗಿರುವ ಅನೇಕ ಸೇವೆಗಳಲ್ಲಿ ರಕ್ತದಾನ ಶಿಬಿರಗಳು ಒಂದಾಗಿದೆ. ಲಾಖ್‌ಡೌನ್ ಜಾರಿಯಾದ ಬಳಿಕ ರಕ್ತದಾನಕ್ಕೆ ಆಸ್ಪದವಿಲ್ಲದ ಕಾರಣ ಸದ್ಯ ನಗರದ ರಕ್ತ ಬ್ಯಾಂಕುಗಳು ಕೇವಲ 10 ದಿನಗಳಿಗೆ ಪೂರೈಕೆಯಾಗುವಷ್ಟು ದಾಸ್ತಾನು ಉಳಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಲಾಕ್‌ಡೌನ್ ಅನ್ನು ಮೇ 31ರ ವರೆಗೆ ವಿಸ್ತರಿಸಲಾಗಿದ್ದು, ಮಾನ್ಸೂನ್ ಹತ್ತಿರ ಬರುತ್ತಿರುವುದರಿಂದ, ರಾಜ್ಯ ರಕ್ತ ವರ್ಗಾವಣೆ ಮಂಡಳಿಯು ದೇಣಿಗೆ ಶಿಬಿರಗಳನ್ನು ನಡೆಸಲು ನಗರದ ರಕ್ತ ಬ್ಯಾಂಕ್‌ಗಳಿಗೆ ಪತ್ರ ಬರೆದಿದೆ. ಶಿಬಿರ ಆಯೋಜಿಸಲು ಪತ್ರ ರಾಜ್ಯ ರಕ್ತ ವರ್ಗಾವಣೆ ಮಂಡಳಿಯ ಮುಖ್ಯಸ್ಥರಾದ ಡಾ.ಅರುಣ್ ಥೋರಟ್ ಅವರು ಕಳೆದ ವಾರ ಎಲ್ಲ ರಕ್ತ ಬ್ಯಾಂಕ್ ಗಳಿಗೆ ಪತ್ರ ಬರೆದು ಸಣ್ಣ ಶಿಬಿರಗಳನ್ನು ಆಯೋಜಿಸುವಂತೆ ಕೋರಿದ್ದಾರೆ.
ಮುಂದಿನ 8ರಿಂದ 10 ದಿನಗಳವರೆಗೆ ಪೂರೈಕೆಯಾಗುವಷ್ಟು ರಕ್ತದ ಸಂಗ್ರಹ ನಮ್ಮಲ್ಲಿದೆ. ಮಾನ್ಸೂನ್ ಹತ್ತಿರದಲ್ಲಿರುವುದರಿಂದ ರಕ್ತದ ಕೊರತೆ ಇರಬಾರದು. ಆದ್ದರಿಂದ ನಾವು ಎಲ್ಲ ರಕ್ತ ಬ್ಯಾಂಕ್‌ಗಳಿಗೆ ದೇಣಿಗೆ ನೀಡುವಂತೆ ಪತ್ರ ಬರೆದಿದ್ದು ಅವರ ಅಗತ್ಯಕ್ಕೆ ಅನುಗುಣವಾಗಿ ಶಿಬಿರಗಳನ್ನು ನಡೆಸುವಂತೆ ಮನವಿ ಮಾಡಿರುವುದಾಗಿ ಅವರು ಹೇಳಿದರು.
ಲಾಕ್‌ಡೌನ್ ಸಮಯದಲ್ಲಿ ಕಡಿಮೆ ಅಪಘಾತಗಳು ಮತ್ತು ಶಸ್ತ್ರಚಿಕಿತ್ಸೆಗಳು ರಕ್ತದ ಬೇಡಿಕೆಯನ್ನು ಕಡಿಮೆಗೊಳಿಸಿದರೂ, ಥಲಸ್ಸೆಮಿಯಾ ಮತ್ತು ರಕ್ತ ಕ್ಯಾನ್ಸರ್ ರೋಗಿಗಳಿಗೆ ನಿಯಮಿತವಾಗಿ ರಕ್ತ ವರ್ಗಾವಣೆಯ ಅಗತ್ಯವಿರುತ್ತದೆ. ಕಳೆದ ವಾರ ಕೆಲವು ರೋಗಿಗಳು ರಕ್ತದ ಕೊರತೆಯನ್ನು ಎದುರಿಸಿದ್ದರು ಎಂದು ಟಾಟಾ ಸ್ಮಾರಕ ಆಸ್ಪತ್ರೆಯ (ಟಿಎಂಹೆಚ್) ನಿರ್ದೇಶಕ ಡಾ.ಸಿ.ಎಸ್.ಪ್ರಮೇಶ್ ಹೇಳಿದ್ದಾರೆ.
ವಸತಿ ಸಮುದಾಯಗಳಲ್ಲಿ ರಕ್ತದಾನ ಶಿಬಿರ : ಟಾಟಾ ಸ್ಮಾರಕ ಆಸ್ಪತ್ರೆಯ (ಟಿಎಂಹೆಚ್) ನಿರ್ದೇಶಕ ಡಾ.ಸಿ.ಎಸ್.ಪ್ರಮೇಶ್ ಮಾತನಾಡಿ, ಆಸ್ಪತ್ರೆಯು ಸಣ್ಣ ಪ್ರಮಾಣದಲ್ಲಿ ರಕ್ತದಾನ ಶಿಬಿರಗಳನ್ನು ನಡೆಸುತ್ತಿದೆ. ಪ್ರತಿ ವಾರ ಮೂರು ವಸತಿ ಸಮುದಾಯಗಳಲ್ಲಿ ರಕ್ತದಾನ ಶಿಬಿರಗಳನ್ನು ನಡೆಸಲಾಗುತ್ತದೆ ಮತ್ತು ಪ್ರತಿ ಸಮಾಜದಿಂದ ಸುಮಾರು 50ರಿಂದ 100 ದಾನಿಗಳು ಮುಂದೆ ಬರುತ್ತಾರೆ. ಹೆಚ್ಚುವರಿ ಪೂರೈಕೆ ಇದ್ದರೆ, ನಾವು ರಕ್ತವನ್ನು ಇತರ ಬ್ಯಾಂಕುಗಳೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಅವರು ಹೇಳಿದರು. ಟಿಎಂಹೆಚ್ ಸಿಬಂದಿ ವಿಖ್ರೋಲಿ ಮತ್ತು ಚೆಂಬೂರಿನಲ್ಲಿ ಇಂತಹ ಶಿಬಿರಗಳನ್ನು ನಡೆಸಿದ್ದಾರೆ ಎಂದು ಡಾ. ಪ್ರಮೇಶ್ ಹೇಳಿದರು. ಅಂತಹ ಒಂದು ಶಿಬಿರವನ್ನು ಮುಲುಂಡ್‌ನಲ್ಲಿ ರವಿವಾರ ಆಯೋಜಿಸಲಾಗಿದೆ. ಮುಲುಂಡ್ ಜಿಮ್ಖಾನಾದ ಅಧ್ಯಕ್ಷ ಚೇತನ್ ಸಾಲ್ವಿ, ತೊಂದರೆಗೊಳಗಾದ ಸಮಯದಲ್ಲಿ ರಕ್ತದ ಕೊರತೆಯ ವರದಿಗಳು ಬಂದಿವೆ. ನಾವು ಟಾಟಾ ಸ್ಮಾರಕ ಆಸ್ಪತ್ರೆಯೊಂದಿಗೆ ಜಂಟಿಯಾಗಿ ಭಾನುವಾರ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಡ್ರೈವ್ ಆಯೋಜಿಸಿದ್ದೇವೆ. ನಾವು ಎಲ್ಲ ಸಾಮಾಜಿಕ ಅಂತರ ನಿಯಮವನ್ನು ಅನುಸರಿಸಿದ್ದೇವೆ. ಹೆಚ್ಚಿನ ಸಂಖ್ಯೆಯ ಜನರು ಬಂದಿದ್ದು ಆರೋಗ್ಯ ತಪಾಸಣೆಯ ಅನಂತರ, ದಿನದ ಅಂತ್ಯದ ವೇಳೆಗೆ ನಾವು 170 ಬಾಟಲಿಗಳ ರಕ್ತವನ್ನು ಸಂಗ್ರಹಿಸಲು ಸಾಧ್ಯವಾಯಿತು ಎಂದಿದ್ದಾರೆ.