Advertisement
ಕೋವಿಡ್ ಮೊದಲ ಅಲೆಯ ಸಂದರ್ಭ ಬಳಸಿದ್ದ ಎನ್‌ಐಟಿಕೆ ಸೆಂಟರ್ 100 ಹಾಗೂ ಇಎಸ್‌ಐ ಆಸ್ಪತ್ರೆಯಲ್ಲಿ 75 ಹಾಸಿಗೆ ಸಾಮರ್ಥಯ ಹೊಂದಿದೆ. ಕುಡಿಯುವ
Related Articles
Advertisement
ಕಳೆದ ಬಾರಿ ಜಿಲ್ಲೆಯಲ್ಲಿ ಬಹುಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಕಡಿಮೆ ಪ್ರಮಾಣದಲ್ಲಿ ಜನರು ಹೋಂ ಐಸೊಲೇಶನ್‌ನಲ್ಲಿದ್ದರು. ಆದರೆ ಈ ಬಾರಿ ಸೋಂಕಿತರ ಪೈಕಿ ಶೇ. 80ರಷ್ಟು ಮಂದಿ ಹೋಂ ಐಸೊಲೇಶನ್‌ನಲ್ಲಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 887 ಮಂದಿ ಆಸ್ಪತ್ರೆಗಳಲ್ಲಿ ಹಾಗೂ 3,249 ಮಂದಿ ಹೋಂ ಐಸೋಲೇಶನ್‌ನಲ್ಲಿದ್ದಾರೆ.
ಸದ್ಯದ ಹಾಸಿಗೆ ಲಭ್ಯತೆ – 4, 884 :
ಎನ್‌ಐಟಿಕೆ ಕೇರ್ ಸೆಂಟರ್ – 100
ಇಎಸ್‌ಐ ಆಸ್ಪತ್ರೆ – 75
ವೆನ್ಲಾಕ್ ಆಸ್ಪತ್ರೆ – 275
ವಿವಿಧ ತಾಲೂಕು ಆಸ್ಪತ್ರೆ, ಪ್ರಾ. ಆ. ಕೇಂದ್ರ, ಸಮುದಾಯ ಆ.ಕೇಂದ್ರ- 450
ಶೇ. 50 ರಷ್ಟು ಹಾಸಿಗೆ ಲಭ್ಯತೆ :
ಖಾಸಗಿ ವೈದ್ಯಕೀಯ ಕಾಲೇಜು – 8
ಖಾಸಗಿ ಆಸ್ಪತ್ರೆಗಳು – 58
ಜಿಲ್ಲೆಯ ಆಸ್ಪತ್ರೆಗಳಲ್ಲಿ ಒಟ್ಟು 4,884 ಬೆಡ್‌ಗಳನ್ನು ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಸಿದ್ಧಪಡಿಸಲಾಗಿದೆ. ನಗರ ದಲ್ಲಿ ಮೂರು ಕಡೆ ಕೋವಿಡ್‌ಕೇರ್ ಸೆಂಟರ್ ತೆರೆಯಲು ಎಲ್ಲ ಪ್ರಕ್ರಿಯೆ ಗಳನ್ನು ಈಗಾಗಲೇ ನಡೆಸಲಾಗಿದೆ.- ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ
ಉಡುಪಿ ಜಿಲ್ಲೆಯಲ್ಲಿ 2 ಸಾವಿರ ಹಾಸಿಗೆಗಳು ಮೀಸಲು :
ಉಡುಪಿ: ಕೋವಿಡ್ ಪರಿಸ್ಥಿತಿ ನಿರ್ವಹಣೆಗೆ ಜಿಲ್ಲೆಯಲ್ಲಿ ಸುಮಾರು 2 ಸಾವಿರ ಹಾಸಿಗೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿಕೊಳ್ಳಲಾಗಿದೆ.
“ಜಿಲ್ಲೆಯಲ್ಲಿ 2,000 ಹಾಸಿಗೆಗಳಿದ್ದು, 500 ಹಾಸಿಗೆಗಳು ಬಳಕೆಯಲ್ಲಿವೆ. ಹಾಗಾಗಿ ಸದ್ಯಕ್ಕೆ ಹಾಸಿಗೆಗಳ ಕೊರತೆ ಇಲ್ಲ’ ಎನ್ನುತ್ತದೆ ಜಿಲ್ಲಾಡಳಿತ. ನಿತ್ಯವೂ ಅವಲೋಕನ ನಡೆಸಲಾಗುತ್ತಿದ್ದು, ರೆಮ್‌ಡಿಸಿವರ್ ಕೊರತೆಯನ್ನೂ ನೀಗಿಸಲಾಗಿದೆ.
ಆಕ್ಸಿಜನ್ ಪೂರೈಕೆ :
ಬೆಳಪುವಿನಲ್ಲಿ ಆಕ್ಸಿಜನ್ ಪೂರೈಕೆ ಘಟಕ ಮೂರು ದಿನಗಳ ಹಿಂದೆ ಕಾರ್ಯಾರಂಭ ಮಾಡಿದೆ. ಮಣಿಪಾಲ ಆಸ್ಪತ್ರೆ ತನ್ನದೇ ಆದ ಆಕ್ಸಿಜನ್ ಘಟಕ ಹೊಂದಿದೆ. ಡಾ| ಟಿಎಂಎ ಪೈ ಆಸ್ಪತ್ರೆಗೆ ಮಂಗಳೂರಿನಿಂದ ಪೂರೈಕೆ ಆಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ 6 ಕೆಎಲ್ ಸಾಮರ್ಥ್ಯದ ಆಕ್ಸಿಜನ್ ವ್ಯವಸ್ಥೆ ಇದೆ. ಉಳಿದ ಆಸ್ಪತ್ರೆಗಳಿಗೆ ಮಾತ್ರ ಬೆಳಪು ವಿನಿಂದ ಪೂರೈಸಲಾಗುತ್ತದೆ.
ವ್ಯಾಕ್ಸಿನ್ ಪೂರೈಕೆ ಕೋವಿಡ್ ವ್ಯಾಪಿಸುತ್ತಿದ್ದು, ಸಾರ್ವಜನಿಕರೂ ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಸೋಮವಾರ 5 ಸಾವಿರ ಲಸಿಕೆ ಪೂರೈಕೆ ಆಗಿದ್ದು, ಮಂಗಳವಾರ 12 ಸಾವಿರ ಬಂದಿದೆ. ಬುಧವಾರ 10 ಸಾವಿರ ಲಸಿಕೆ ವಿತರಿಸಲಾಗಿದೆ. ಹೀಗೆ ವ್ಯಾಕ್ಸಿನ್ ಪೂರೈಕೆ ದಿನದಿನವೂ ನಡೆಯುತ್ತಿದೆ. ಕೊವ್ಯಾಕ್ಸಿನ್ ಸದ್ಯವೇ ಬರಲಿದೆ ಎನ್ನು ತ್ತಾರೆ ಜಿಲ್ಲಾಧಿಕಾರಿ ಜಿ. ಜಗದೀಶ್. ಜಿಲ್ಲೆಯ ಆರು ಸಮುದಾಯ ಆರೋಗ್ಯ ಕೇಂದ್ರಗಳನ್ನು (ಸಿಎಚ್‌ಸಿ) ಸಿದ್ಧವಾಗಿ ರಿಸಿ ಕೊಳ್ಳುತ್ತಿದ್ದೇವೆ. ಪ್ರತಿ ಕೇಂದ್ರಗಳಲ್ಲೂ 30 ಹಾಸಿಗೆಗಳಿದ್ದು, ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳ ಲಾಗುವುದು ಎನ್ನುತ್ತಾರೆ ಜಿಲ್ಲೆಯ ಜಿಲ್ಲೆಯ ವೈದ್ಯಾಧಿಕಾರಿ ಡಾ| ಸುಧೀರ್ ಚಂದ್ರ ಸೂಡ.
ಸಹಾಯವಾಣಿ :
ಉಡುಪಿ 9663957222, 9663950222
ಕುಂದಾಪುರ 6363862122, 7483984733
ಕಾರ್ಕಳ 7676227624, 7411323408
ಜಿಲ್ಲೆಯಲ್ಲಿ 900 ಆಕ್ಸಿಜನ್ ಹಾಸಿಗೆಗಳಿವೆ. ಜತೆಗೆ ಇತರೆ ಹಾಸಿಗೆಗಳೂ ಇವೆ. ಖಾಸಗಿ ಆಸ್ಪತ್ರೆಗಳ ಶೇ. 75 ರಷ್ಟು ಹಾಸಿಗೆಗಳನ್ನು ಸರಕಾರಕ್ಕೆ ನೀಡಲಾಗಿದೆ. ಹಾಗಾಗಿ ಒಂದು ವೇಳೆ ಯಾರಾದರೂ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋದಾಗ ಅಲ್ಲಿ ಹಾಸಿಗೆಗಳಿಲ್ಲ ಎಂದಿರಬಹುದು. ಇಂಥ ಸಂದರ್ಭದಲ್ಲಿ ಸಾರ್ವಜನಿಕರು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ಅಥವಾ ನೋಡಲ್ ಅಧಿಕಾರಿ ಡಾ| ಪ್ರಶಾಂತ ಭಟ್ ಅವರನ್ನು ಸಂಪರ್ಕಿಸಬಹುದು. ತಾಲೂಕು ಮಟ್ಟದಲ್ಲಿ ಸಹಾಯವಾಣಿ ತೆರೆದಿದ್ದು, ಸಾರ್ವಜನಿಕರು ಆ ಮೂಲಕ ವೈದ್ಯಕೀಯ ವ್ಯವಸ್ಥೆಯನ್ನು ಪಡೆಯಬಹುದು. – ಜಿ. ಜಗದೀಶ್, ಜಿಲ್ಲಾಧಿಕಾರಿ, ಉಡುಪಿ