Advertisement

ಪ್ರಧಾನಿ ನಾಯಕತ್ವದಿಂದ ಕೋವಿಡ್ ನಿಯಂತ್ರಣ; ಜಗದೀಶ ಶೆಟ್ಟರ

05:59 PM Dec 17, 2022 | Team Udayavani |

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ಬಲಿಷ್ಠ ನಾಯಕತ್ವದಿಂದ ಪ್ರಸ್ತುತ ದೇಶದಲ್ಲಿ ಕೊರೊನಾ ಹಾವಳಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

Advertisement

ಬಿಜೆಪಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ ಹಾಗೂ ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರದ ಸಹಯೋಗದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ ಜನ್ಮದಿನ ನಿಮಿತ್ತ ಘಂಟಿಕೇರಿ ಓಣಿಯ ಶ್ರೀ ಬಸವಣ್ಣ ದೇವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಬೃಹತ್‌ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ-ಆರೋಗ್ಯ ಕರ್ನಾಟಕ
ಕಾರ್ಡ್‌ನ ನೋಂದಣಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಕೊರೊನಾದ ತವರೂರು ಚೀನಾದಲ್ಲಿ ಇಂದಿಗೂ ಕೊರೊನಾ ಹಾವಳಿ ಇದ್ದು, ಅನೇಕ ಕಡೆ ಲಾಕ್‌ಡೌನ್‌ ತೆರವುಗೊಳಿಸಲು ಜನರು ಪ್ರತಿಭಟನೆಗಳಾಗಿರುವುದನ್ನು ಅಲ್ಲಿ ಕಾಣಬಹುದಾಗಿದೆ. ಐರೋಪ್ಯ ರಾಷ್ಟ್ರಗಳು ಇಂದಿಗೂ ಜನ ಕೊರೊನಾದಿಂದ ತತ್ತರಿಸುತ್ತಿದ್ದು, ಭಾರತದಲ್ಲಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ.

ಕೋವಿಡ್‌ ಸಂದರ್ಭದಲ್ಲಿ ಕೈಗೊಂಡ ಅನೇಕ ಕಠಿಣ ಕ್ರಮಗಳು, ದೇಶದ ಜನತೆಗೆ ನೀಡಿದ ಉಚಿತ ಲಸಿಕೆಗಳಿಂದ ಪ್ರಸ್ತುತ ಮಾಸ್ಕ್ ಇಲ್ಲದೇ ನಿರ್ಭಯವಾಗಿ ಎಲ್ಲೆಡೆ ಸಂಚರಿಸುವಂತಾಗಿದೆ. ಇದಕ್ಕೆ ಪ್ರಧಾನಿ ಮೋದಿ ನೇತೃತ್ವದ ಬಲಿಷ್ಠ ನಾಯಕತ್ವ, ಕೈಗೊಂಡ ನಿಲುವುಗಳೇ ಕಾರಣವಾಗಿದೆ ಎಂದರು.

ಬಿಜೆಪಿ ನೇತೃತ್ವದ ಡಬಲ್‌ ಇಂಜಿನ್‌ ಸರ್ಕಾರದಿಂದ ಪ್ರಸ್ತುತ ಅವಳಿ ನಗರದ ಅಭಿವೃದ್ಧಿಗೆ ಅನುದಾನದ ಹೊಳೆಯೇ ಹರಿದು ಬರುತ್ತಿದೆ. ಪ್ರಮುಖ ರಸ್ತೆಗಳ ಕಾಂಕ್ರೀಟೀಕರಣ, ಉದ್ಯಾನಗಳ ಅಭಿವೃದ್ಧಿ, ಇನ್ನಿತರೆ ಅಗತ್ಯ ಮೂಲ ಸೌಕರ್ಯಗಳಿಂದ ಹಿಂದೆಂದೆಗಿಂತಲೂ ಅವಳಿ ನಗರ ಸುಂದರವಾಗಿ ಕಾಣುವಂತಾಗಿದೆ.ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೊಳಿಸಿದ್ದ 24/7 ನಿರಂತರ ನೀರು ಪೂರೈಕೆ ವ್ಯವಸ್ಥೆ ಮುಂದಿನ 2 ವರ್ಷಗಳಲ್ಲಿ
ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.

Advertisement

ಬಾಲಾಜಿ ಆಸ್ಪತ್ರೆಯ ಚೇರ¾ನ್‌, ರಾಜೀವಗಾಂಧಿ ಆರೋಗ್ಯ ವಿವಿಯ ಸಿಂಡಿಕೇಟ್‌ ಸದ್ಯಸ ಡಾ| ಕ್ರಾಂತಿಕಿರಣ ಪ್ರಾಸ್ತಾವಿಕ ಮಾತನಾಡಿ, ಸರಳತೆ ವ್ಯಕ್ತಿತ್ವ, ಅವಳಿ ನಗರದ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿದ ಜಗದೀಶ ಶೆಟ್ಟರ ಅವರ ಜನ್ಮದಿನ ಸಾರ್ಥಕಗೊಳಿಸುವ ನಿಮಿತ್ತ ಬೃಹತ್‌ ಆರೋಗ್ಯ ಶಿಬಿರ ಆಯೋಜಿಸಿದ್ದು, ತಪಾಸಣೆ ಜತೆಗೆ ಉಚಿತ ಔಷಧಿ ನೀಡಲಾಗುತ್ತಿದೆ. ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಕಾರ್ಡ್‌ ನೋಂದಣಿ ಮೂಲಕ ಅನೇಕ ಬಡವರಿಗೆ ನೆರವಾಗುವ ಕಾರ್ಯ ಮಾಡಲಾಗುತ್ತಿದೆ ಎಂದರು.

ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹು.ಧಾ. ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಪ್ರಭು ನವಲಗುಂದಮಠ ಮಾತನಾಡಿದರು. ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ್‌ ಕಪಟಕರ, ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ನಿರ್ದೇಶಕ
ಮಲ್ಲಿಕಾರ್ಜುನ ಸಾವಕಾರ, ಪಾಲಿಕೆ ಸದಸ್ಯರಾದ ಪೂಜಾ ಶೇಜವಾಡಕರ, ರಾಧಾಬಾಯಿ ಸಫಾರೆ, ಸುಮಿತ್ರಾ ಗುಂಜಾಳ, ಶೀಲಾ ಕಾಟಕರ, ಶಿವು ಮೆಣಸಿನಕಾಯಿ, ಮುಖಂಡರಾದ ಶಿವಾನಂದ ಮುತ್ತಣ್ಣವರ, ಸತೀಶ ಶೇಜವಾಡಕರ, ಸಂತೋಷ ಅರಕೇರಿ, ವಿನಯ ಸಜ್ಜನರ, ಜಗದೀಶ ಬುಳ್ಳಾನವರ, ಬಸವರಾಜ ಅಮ್ಮಿನಬಾವಿ, ರಂಗಾ ಬದ್ದಿ, ಬಸವರಾಜ ಜಾಬೀನ, ಮಂಜುನಾಥ ಬಿಜವಾಡ, ರಾಜು ಕೋರ್ಯಾನಮಠ, ಗೋಪಾಲ ಕಲ್ಲೂರ, ವೈದ್ಯರಾದ ಡಾ. ಆನಂದ ಕೊಪ್ಪದ, ಡಾ|ಕೃಷ್ಣಮೂರ್ತಿ,ಡಾ|ಹರಿಕೃಷ್ಣ, ಡಾ|ಎಡ್ವಿನ್‌ ಜೇ, ಡಾ|ಹನುಮಂತ ಬಿ.ವಿ, ಡಾ|ರೇಶ್ಮಾ ಮೋಹನ, ಡಾ|ವೀರೇಶ, ಡಾ|ಶಿಲ್ಪಾ, ಡಾ|ಯಾಸ್ಮಿನ ಬೇಗಂ, ಎಂ.ಎಂ. ಜೋಶಿ ಆಸ್ಪತ್ರೆ ವೈದ್ಯರು ಸೇರಿದಂತೆ 30ಕ್ಕೂ ಹೆಚ್ಚು ತಜ್ಞ ವೈದ್ಯರು ಪಾಲ್ಗೊಂಡಿದ್ದರು. 850ಕ್ಕೂ ಹೆಚ್ಚು ಜನರು ಹೆಸರು ನೋಂದಣಿ ಮಾಡಿಸಿದ್ದರು.ಎಲ್ಲರ ಆರೋಗ್ಯ ತಪಾಸಣೆ ಮಾಡಿ ಔಷಧ ವಿತರಿಸಲಾಯಿತು. 200 ಜನರಿಗೆ ಆಯುಷ್ಮಾನ್‌ ಭಾರತ್‌- ಆರೋಗ್ಯ ಕರ್ನಾಟಕ ಕಾರ್ಡುಗಳ ನೋಂದಣಿ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next