Advertisement

ಕೋವಿಡ್ ನಿಯಂತ್ರಣಕ್ಕೆ ಮನೆಮದ್ದು ಬಳಸಿ: ಮಳಲಿ

07:34 PM Apr 30, 2021 | Team Udayavani |

ನರಗುಂದ: ಕೊರೊನಾ ವೈರಸ್‌ ನಿಂದ ರಕ್ಷಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಸುತ್ತಮುತ್ತಲಿನ ಪರಿಸರದಲ್ಲೇ ಹಲವು ಮನೆ ಮದ್ದುಗಳಿವೆ. ಮನೆ ಮದ್ದು ಬಳಸಿ ಕೊರೊನಾದಿಂದ ಸುರಕ್ಷಿತವಾಗಿರಲು ಸಾಧ್ಯವಿದೆ ಎಂದು ವಾಸನ ಗ್ರಾಮದ ಪಾರಂಪರಿಕ ವೈದ್ಯ ಡಾ| ಹನಮಂತ ಮಳಲಿ ಹೇಳಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರವಿರಲಿ. ಕೊರೊನಾ ಲಸಿಕೆಗೆ ರೋಗ ನಿಯಂತ್ರಿಸುವ ಶಕ್ತಿಯಿದೆ. ಇದರೊಂದಿಗೆ ಸುತ್ತಲಿನ ಪರಿಸರದಲ್ಲಿರುವ ಮನೆ ಮದ್ದು ಬಳಕೆಯಿಂದಲೂ ಕೊರೊನಾ ತಡೆಗಟ್ಟಬಹುದು ಎಂದರು.

ಜೀರ್ಣಶಕ್ತಿ ಚೆನ್ನಾಗಿರುವ ವ್ಯಕ್ತಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಸರ್ವ ರೋಗಕ್ಕೂ ಅಜೀರ್ಣವೇ ಕಾರಣ. ಯೋಗಾಸನ ಆರೋಗ್ಯ ವೃದ್ಧಿಸುತ್ತದೆ. ಬಿಸಿನೀರಿನ ಹವೆ ತೆಗೆದುಕೊಳ್ಳುವುದು, ಬಿಸಿನೀರಿಗೆ ಉಪ್ಪು ಹಾಕಿ ಮುಕ್ಕಳಿಸುವುದು, ಮನೆಯಲ್ಲಿ ಅಗ್ನಿ ಹೋತ್ರ ಮಾಡುವುದರಿಂದ ವೈರಸ್‌ ಬರದಂತೆ ಮುನ್ನೆಚ್ಚರಿಕೆ ವಹಿಸಬಹುದು ಎಂದು ಹೇಳಿದರು.

ಅಗ್ನಿಹೋತ್ರ ಪರಿಣಾಮಕಾರಿ: ಅತಿ ಕಡಿಮೆ ವೆಚ್ಚದಲ್ಲಿ ಅಗ್ನಿಹೋತ್ರ ಮಾಡುವುದರಿಂದ ವೈರಸ್‌ಗಳು ಬರದಂತೆ ನೋಡಿಕೊಳ್ಳಬಹುದು. ಗೋವಿನ ಸಗಣೆಯಿಂದ ಮಾಡಿದ ಕುಳ್ಳುಗಳನ್ನು ತಾಮ್ರದ ಪಾತ್ರೆಯಲ್ಲಿರಿಸಿ ಪಾಲೀಶ್‌ ಮಾಡದ 1 ಚಮಚ ಅಕ್ಕಿ ಗೋವಿನ ತುಪ್ಪದಲ್ಲಿ ಅದ್ದಿ ಕುಳ್ಳಿನ ಮೇಲೆ ಹಾಕಿ ಬೆಂಕಿ ಹೊತ್ತಿಸಬೇಕು. ಇದರಿಂದ ಬರುವ ಹವೆ ಮನೆಯಲ್ಲಿ ವೈರಸ್‌ಗಳು ಬರದಂತೆ ನಿಯಂತ್ರಿಸುತ್ತದೆ. ಇದನ್ನು ಜಾಲತಾಣಗಳಲ್ಲೂ ವೀಕ್ಷಿಸಬಹುದು ಎಂದು ವಿವರಿಸಿದರು.

ರಾಷ್ಟ್ರೀಯ ಉಪಾಹಾರ ಎಂದು ಕರೆಸಿಕೊಂಡ ಪಂಚಾನ್ನ ತಯಾರಿಸಿ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಕೊರೊನಾ ನಿಯಂತ್ರಣಕ್ಕೆ ಕಷಾಯ ಬಹಳ ಪರಿಣಾಮಕಾರಿ ಆಗಿದೆ. ನೆಲ ನೆಲ್ಲಿ ಕಷಾಯ, ತುಳಸಿ ಕಷಾಯ, ಅಮೃತ ಬಳ್ಳಿ ಕಷಾಯ, ಸಂಕೀರ್ಣ ಕಷಾಯ ಕೊರೊನಾ ನಿಯಂತ್ರಣಕ್ಕೆ ಮನೆ ಮದ್ದು ಆಗಿವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next