Advertisement

ಹುಣಸೂರು: ಕೋವಿಡ್ ತಡೆಗೆ ನಾಗರೀಕರ ಸಲಹೆ ಅಗತ್ಯ : ತಹಸೀಲ್ದಾರ್ ಬಸವರಾಜ್

07:21 PM Apr 21, 2021 | Team Udayavani |

ಹುಣಸೂರು: ಕೋವಿಡ್ ಎರಡನೇ ಅಲೆ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‌ನಲ್ಲೂ  ತಲಾ 50 ಬೆಡ್ ವ್ಯವಸ್ಥೆ ಕಲ್ಪಿಸಲಾಗಿದೆ ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲವೆಂದು ಕೊವಿಡ್ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ಬಸವರಾಜ್ ತಿಳಿಸಿದರು.

Advertisement

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಕೊವಿಡ್ ಸೆಂಟರ್‌ನಲ್ಲಿನ ವೆಂಟಿಲೇಟರ್ ಸಹಿತ ಬೆಡ್ ವ್ಯವಸ್ಥೆಯನ್ನು ವೀಕ್ಷಿಸಿದ ನಂತರ ಮಾತನಾಡಿದ ಅವರು ತಾಲೂಕಿನಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ ಕೋವಿಡ್ ಎರಡನೇ ಅಲೆ ವೇಗಪಡೆಯುತ್ತಿದ್ದು, ಈಗಾಗಲೆ ತಾಲೂಕಿನ ಐದು ಮಂದಿಯನ್ನು ಆಹುತಿ ಪಡೆದಿದೆ. ಒಟ್ಟು 37 ಮಂದಿ ಸಾವನ್ನಪ್ಪಿದಂತಾಗಿದೆ.

88 ಬೆಡ್‌ಗಳ ವಾರ್ಡ್ ಸಜ್ಜು: ಜಿಲ್ಲಾಡಳಿತದ ಸೂಚನೆಯಂತೆ ಚಿಕ್ಕ ಹುಣಸೂರು ಬಳಿಯ ಆದರ್ಶ ಶಾಲೆಯ ವಸತಿ ನಿಲಯದಲ್ಲಿ  ಮತ್ತೆ 50 ಹಾಸಿಗೆಗಳ ಕೇರ್ ಸೆಂಟರ್ ತೆರೆಯಲಾಗಿದೆ, ತುರ್ತು ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ 38 ಬೆಡ್‌ಗಳ ಸುಸಜ್ಜಿತ ವಾರ್ಡ್ ಸ್ಥಾಪಿಸಲಾಗಿದ್ದು. ಸೋಂಕಿತರು ಹೋಂ ಐಸುಲೇಷನ್‌ವ್ಯವಸ್ಥೆ ಇಲ್ಲದವರಿಗೆ ಕೇರ್ ಸೆಂಟರ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ, ಆಸ್ಪತ್ರೆಯಲ್ಲಿ ಅಗತ್ಯ ಉಳ್ಳವರಿಗೆ ಮಾತ್ರ ತುರ್ತು ಚಿಕಿತ್ಸೆಗಾಗಿ ವೈದ್ಯಕೀಯ ಸಿಬ್ಬಂದಿಗಳನ್ನು ಸಜ್ಜಾಗಿಡಲಾಗಿದೆ.

ನಾಗರೀಕರ ಸಹಕಾರ ಅಗತ್ಯ: ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ನಗರದ ನಾಗರೀಕರು, ವ್ಯಾಪಾರಸ್ಥರು ಸಹಕಾರ ನೀಡಬೇಕು, ರಸ್ತೆ ಬದಿಯ ತಿಂಡಿಗಳನ್ನು ತಿನ್ನುವುದು, ವೃದ್ದರು, ಮಕ್ಕಳನ್ನು ಮಾಸ್ಕ್ ಇಲ್ಲದೆ ಅಂಗಡಿಗೆ ಕಳುಹಿಸುವುದು, ವಾಕಿಂಗ್ ನೆಪದಲ್ಲಿ ಅಡ್ದಡಾಡುವುದು ಮಾಡಬಾರದು. ಹುಣಸೂರು ನಗರದಲ್ಲಿ ಗುರುವಾರದ ಸಂತೆ ರದ್ದು ಪಡಿಸಲಾಗಿದೆ. ಬುಧುವಾರದಿಂದ ನಗರಸಭೆ ಸಿಬ್ಬಂದಿಗಳು ಮಾಸ್ಕ್ ಇಲ್ಲದೆ ವ್ಯಾಪಾರ ಮಾಡುವವರು, ತಿರುಗಾಡುವರು ಹಾಗೂ ವಾಹನಗಳ ಸವಾರರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಿದ್ದಾರೆಂದು ನಗರಸಭೆ ಪೌರಾಯುಕ್ತ ರಮೇಶ್ ಎಚ್ಚರಿಸಿದ್ದಾರೆ.

ಈವೇಳೆ ತಾ.ಪಂ.ಇ.ಓ. ಗಿರೀಶ್, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸರ್ವೇಶ್ ರಾಜೇಅರಸ್ ಇದ್ದರು.

Advertisement

ನೂರು ಜನ ಮೀರಿದರೆ ಕಠಿಣಕ್ರಮ,ಸಾಮಗ್ರಿ ಮುಟ್ಟುಗೋಲು :

ನೂರು ಮಂದಿಗೆ ಮೀರಬಾರದು: ಸಾರ್ವಜನಿಕರು ಅನಾವಶ್ಯಕವಾಗಿ ತಿರುಗಾಡಬೇಡಿ, ಅವಶ್ಯವಿದ್ದವರು ಮಾತ್ರ ಮನೆಯಿಂದ ಹೊರಬನ್ನಿ, 45 ವರ್ಷಕ್ಕೆ ಮೇಲ್ಪಟ್ಟವರು ಕಡ್ಡಾಯವಾಗಿ ವ್ಯಾಕ್ಸಿನ್ ಪಡೆದುಕೊಳ್ಳಬೇಕು.  ಮದುವೆ, ಆರತಕ್ಷತೆ, ಸಭೆ ಸಮಾರಂಭಗಳಲ್ಲಿ ನೂರು ಮಂದಿಗೆ ಮೀರಬಾರದು. ನಾಟಕ, ಜಾತ್ರೆ, ಪ್ರತಿಭಟನೆ, ಕ್ರಿಕೇಟ್ ಸೇರಿದಂತೆ ಯಾವುದೇ ಕ್ರೀಡಾಚಟುವಟಿಕೆ, ಧಾರ್ಮಿಕ ಉತ್ಸವಗಳನ್ನು ನಿಷೇಧಿಸಲಾಗಿದೆ. ಮದುವೆ ಸಮಾರಂಭಕ್ಕೆ ಅನುಮತಿ ಕಡ್ಡಾಯ, ಅನುಮತಿಸಿದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದಲ್ಲಿ ಕಲ್ಯಾಣ ಮಂಟಪವನ್ನು  ಮುಂದಿನ ಅವಧಿವರೆಗೆ ಬೀಗ ಮುದ್ರೆ ಹಾಕಿ ಅನುಮತಿ ರದ್ದು ಪಡಿಸಿವ ಜೊತೆಗೆ ಶಾಮಿಯಾನ ಮೈಕ್ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಆಯೋಜಕರ ವಿರುದ್ದವೂ ಕ್ರಮವಾಗಲಿದೆ. ಯಾರಾದರೂ ನಿಯಮ ಮೀರಿ ಆಚರಿಸಿದ್ದೇ ಆದಲ್ಲಿ ಮೊಕದಮ್ಮೆ ಹೂಡಲಾಗುವುದೆಂದು ಪತ್ರಿಕಾ ಹೇಳಿಕೆಯಲ್ಲಿ ತಹಸೀಲ್ದಾರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next