Advertisement

11 ಆಟಗಾರರಿಗೆ ಕೋವಿಡ್ ಸೋಂಕು ದೃಢ: ಬಿಗ್ ಬ್ಯಾಶ್ ಲೀಗ್ ಪಂದ್ಯ ಮುಂದೂಡಿಕೆ

11:23 AM Dec 31, 2021 | Team Udayavani |

ಅಡಿಲೇಡ್: ಆಸ್ಟ್ರೇಲಿಯಾದ ಟಿ20 ಲೀಗ್ ಬಿಗ್ ಬ್ಯಾಶ್ ಗೆ ಕೋವಿಡ್ ಕಾಟ ಎದುರಾಗಿದೆ. ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಸಿಡ್ನಿ ಥಂಡರ್ಸ್ ತಂಡಗಳ ಒಟ್ಟು 11 ಮಂದಿ ಆಟಗಾರರಿಗೆ ಕೋವಿಡ್ 19 ಸೋಂಕು ದೃಢವಾಗಿದೆ. ಹೀಗಾಗಿ ನಿನ್ನೆಯ ಪರ್ತ್ ಸ್ಕಾಚರ್ಸ್ ಮತ್ತು ಮೆಲ್ಬೋರ್ನ್ ಸ್ಟಾರ್ಸ್ ನಡುವಿನ ಪಂದ್ಯವನ್ನು ಮುಂದೂಡಲಾಗಿದೆ.

Advertisement

ಮೆಲ್ಬೋರ್ನ್ ಸ್ಟಾರ್ಸ್ ತಂಡದ ಏಳು ಮಂದಿ ಆಟಗಾರರು ಮತ್ತು 8 ಮಂದಿ ಸಹಾಯಕ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢವಾಗಿದೆ. ಹೀಗಾಗಿ ಅವರು ಇನ್ನು ಏಳು ದಿನಗಳ ಕಾಲ ಪ್ರತ್ಯೇಕವಾಗಿರಬೇಕಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ನಿನ್ನೆ ನೆಗೆಟಿವ್ ವರದಿಯಾದ ಉಳಿದೆಲ್ಲಾ ಆಟಗಾರರಿಗೆ ಇಂದು ಮತ್ತೊಮ್ಮೆ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ತಂಡವು ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ಮಾತುಕತೆ ನಡೆಸುತ್ತಿದ್ದು, ತಂಡದ ಮುಂದಿನ ಪಂದ್ಯಗಳ ಬಗ್ಗೆ ಸೂಕ್ತ ನಿರ್ಧಾರ ಮಾಡಲಾಗುತ್ತದೆ ಎಂದು ಮೆಲ್ಬೋರ್ನ್ ಸ್ಟಾರ್ಸ್ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ:ಟೆಸ್ಟ್ ಕ್ರಿಕೆಟ್ ಗೆ ದಿಢೀರ್ ವಿದಾಯ ಘೋಷಿಸಿದ ಕ್ವಿಂಟನ್ ಡಿ ಕಾಕ್

ಬಿಬಿಎಲ್ ಮಾತ್ರವಲ್ಲದೆ ಆ್ಯಶಸ್ ಗೂ ಕೋವಿಡ್ ಭೀತಿ ಎದುರಾಗಿದೆ. ಆಸ್ಟ್ರೇಲಿಯಾ ತಂಡದ ಆಟಗಾರ ಟ್ರಾವಿಸ್ ಹೆಡ್ ಗೆ ಕೋವಿಡ್ ಪಾಸಿಟಿವ್ ಆಗಿದ್ದು, ಅವರು ಮುಂದಿನ ಪಂದ್ಯ ತಪ್ಪಿಸಿಕೊಳ್ಳಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next