Advertisement
ಮೊದಲನೇ ಅಲೆ ಸಂದರ್ಭದಲ್ಲಿ ಜಿಲ್ಲೆಯಲ್ಲಿಕಡಿಮೆ ಪ್ರಕರಣಗಳಿದ್ದಾಗಲೂ ನಗರದ ಸರ್ಕಾರಿಎಂಜಿನಿಯರಿಂಗ್ ಕಾಲೇಜು, ಸರ್ಕಾರಿ ಮೆಡಿಕಲ್‌ಕಾಲೇಜುಗಳಲ್ಲಿ ಕೋವಿಡ್ ಕೇರ್ ಸೆಂಟರ್‌ಗಳನ್ನುತೆರೆಯಲಾಗಿತ್ತು. ಸೋಂಕಿತರಲ್ಲಿ ಕಡಿಮೆ ರೋಗಲಕ್ಷಣಗಳಿರುವವರನ್ನು ಕೋವಿಡ್ ಕೇರ್ ಕೇಂದ್ರಗಳಲ್ಲಿಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
Related Articles
Advertisement
ಆದರೆ, ಇದಕ್ಕೆವ್ಯತಿರಿಕ್ತವಾಗಿ, ಜಿಲ್ಲೆಯ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ರೋಗಿಗಳಿಗೆ ಅಗತ್ಯವಾದ ಮಾತ್ರೆಗಳನ್ನೇನೀಡುತ್ತಿಲ್ಲ ಎಂದು ಸೋಂಕಿತರು ಆರೋಪಿಸಿದ್ದಾರೆ.ನಗರದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭಿಸಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿರುವಕಾಡಂಚಿನ ಗ್ರಾಮ ತಾಲೂಕಿನ ಮೂಕನಪಾಳ್ಯದಸೋಂಕಿತೆಯೊಬ್ಬರು ಉದಯವಾಣಿಯೊಂದಿಗೆಮಾತನಾಡಿ, “ಕಳೆದ 3 ದಿನಗಳಿಂದ ನಮಗೆಮಾತ್ರೆಗಳನ್ನು ನೀಡುತ್ತಿಲ್ಲ.
ಕೇಳಿದರೆ ಸ್ಟಾಕಿಲ್ಲ, ನಾಳೆಬರುತ್ತೆ ಎಂದು ಹೇಳುತ್ತಾರೆ. ನಾವು ಚಿಕಿತ್ಸೆಗೆಂದುಬಂದಿದ್ದೇವೆ. ಕನಿಷ್ಠ ಮಾತ್ರೆಯನ್ನೂ ನೀಡುತ್ತಿಲ್ಲಎಂದರೆ ಹೇಗೆ’ ಎಂದು ಪ್ರಶ್ನಿಸಿದರು.ನಾನು ಮತ್ತು ನನ್ನ ಇಬ್ಬರು ಮಕ್ಕಳು ಇಲ್ಲಿದಾಖಲಾಗಿದ್ದೇವೆ. ವಿಟಮಿನ್ ಮಾತ್ರೆ ತಗೊಂಡರೆಬೇಗ ವಾಸಿಯಾಗುತ್ತದೆ ಎಂದು ಗೊತ್ತಿದ್ದರಿಂದ ನಮ್ಮಬಂಧುಗಳಿಗೆ ಹೇಳಿ ಹೊರಗೆ ಔಷಧಿ ಅಂಗಡಿಯಿಂದ ವಿಟಮಿನ್ ಮಾತ್ರೆ ತರಿಸಿ, ಬೇರೆಯವರಿಗೂ ಕೊಟ್ಟೆಎಂದು ಅವರು ಹೇಳಿದರು. ನಾನು ಮನೆಯಿಂದತಂದ ಬಟ್ಟೆ ಮಾಸ್ಕನ್ನೇ ಬಳಸುತ್ತಿದ್ದೇನೆ.
ಇಲ್ಲಿ ನಮಗೆಮಾಸ್ಕ್ ಅನ್ನೂ ಸಹ ನೀಡುತ್ತಿಲ್ಲ. ಸ್ಯಾನಿಟೈಸರ್ ಕೂಡ ಇಲ್ಲ ಎಂದು ಅವರು ಅಲವತ್ತು ಕೊಂಡರು.ಇನ್ನೋರ್ವ ಸೋಂಕಿತರು ಮಾತನಾಡಿ,ಸೋಂಕಿತರಾದ ನಮಗೆ ಸರಿಯಾಗಿ ಆಹಾರ ನೀಡಬೇಕು. ನಿನ್ನೆ ಬೆಳಗ್ಗೆ ತಿಂಡಿ ಕೊರತೆ ಉಂಟಾಗಿತ್ತುಎಂದರು.ಮೆಡಿಕಲ್ ಕಾಲೇಜು ಕೋವಿಡ್ ಕೇಂದ್ರದಲ್ಲಿ 6 ಶೌಚಾಲಯಗಳಿವೆ. ಒಟ್ಟು 140 ಜನಸೋಂಕಿತರಿದ್ದೇವೆ. ಇಷ್ಟು ಜನ ಬಳಸಿದರೆ ಶೌಚಾಲಯಗಬ್ಬೆದ್ದು ಹೋಗುತ್ತಿದೆ. ಇದನ್ನು ಸರಿಯಾಗಿಸ್ವತ್ಛಗೊಳಿಸುತ್ತಿಲ್ಲ ಎಂದು ರೋಗಿಯೊಬ್ಬರು ಅಳಲುತೋಡಿಕೊಂಡಿದ್ದಾರೆ. ಸಂತೆಮರಹಳ್ಳಿಯಲ್ಲಿರುವಕೋವಿಡ್ ಆಸ್ಪತ್ರೆಯಲ್ಲಿ ಕಳಪೆ ಆಹಾರನೀಡಲಾಗುತ್ತಿದೆ ಎಂದು ರೋಗಿಗಳು ಸ್ವಲ್ಪ ದಿನಗಳಹಿಂದೆ ಆಸ್ಪತ್ರೆ ಆವರಣದಲ್ಲೇ ಪ್ರತಿಭಟನೆ ನಡೆಸಿದ್ದರು.
ಕೆ.ಎಸ್. ಬನಶಂಕರ ಆರಾಧ್ಯ