ಬೆಂಗಳೂರು : ಸತತ 4ನೇ ದಿನವೂ ಬೆಂಗಳೂರಿನಲ್ಲಿ ಸೋಂಕು ಮತ್ತು ಸೋಂಕು ಪೀಡಿತರ ಸಾವು ಇಳಿಮುಖವಾಗಿದ್ದು, ಜಿಲ್ಲೆಗಳಲ್ಲಿ ತೀವ್ರತೆ ಮುಂದುವರಿದಿದೆ. ಇನ್ನೊಂದೆಡೆ ರಾಜ್ಯದಲ್ಲಿ ಹಿಂದೆಗಿಂತಲೂ ಅತೀ ಹೆಚ್ಚು ಪಾಸಿಟಿವಿಟಿ ದರ
ಶೇ. 35ರಷ್ಟು ದಾಖಲಾಗಿದೆ.
ಶನಿವಾರ ಹೊಸದಾಗಿ 41,664 ಮಂದಿಗೆ ಸೋಂಕು ತಗುಲಿದ್ದು, 349 ಮಂದಿ ಮೃತಪಟ್ಟಿದ್ದಾರೆ. 34,425 ಮಂದಿ ಗುಣಮುಖರಾಗಿದ್ದಾರೆ.
ಸತತ ನಾಲ್ಕನೇ ದಿನ ಬೆಂಗಳೂರಿನಲ್ಲಿ ಸೋಂಕಿನ ತೀವ್ರತೆ ಇಳಿಕೆಯಾಗುತ್ತ ಸಾಗಿದೆ. ಹೊಸ ಪ್ರಕರಣಗಳು 18 ಸಾವಿರ ಆಸುಪಾಸಿನಿಂದ 13,402ಕ್ಕೆ, ಸಾವು 160 ಆಸುಪಾಸಿನಿಂದ 94ಕ್ಕೆ ತಗ್ಗಿದೆ. ಹೊಸ ಪ್ರಕರಣಗಳು ಒಂದು ತಿಂಗಳ ಅನಂತರ (ಎ. 15) 13 ಸಾವಿರಕ್ಕೆ ಇಳಿಕೆಯಾಗಿವೆ. ಈ ಬೆಳವಣಿಗೆಯೂ ಬೆಂಗಳೂರಿನ ಜನರಿಗೆ ತುಸು ಸಮಾಧಾನವೆನಿಸಿದೆ. ಆದರೆ ಜಿಲ್ಲೆಗಳಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣ ಹೆಚ್ಚಾಗಿದೆ.