Advertisement
ಆ್ಯಂಬುಲೆನ್ಸ್‌ನಲ್ಲಿ ಮಗುವಿಗೆ ಜನ್ಮಹೆರಿಗೆ ಸಂಬಂಧ ಮಂಗಲ್ಪಾಡಿ ಯಿಂದ ಕಾಸರಗೋಡು ಜನರಲ್ ಆಸ್ಪತ್ರೆಗೆ ತೆರಳುತ್ತಿದ್ದ ಗರ್ಭಿಣಿ 108 ಆ್ಯಂಬುಲೆನ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಈ ಮಹಿಳೆಗೆ ಪ್ರಾಥಮಿಕ ತಪಾಸಣೆಯಲ್ಲಿ ಕೋವಿಡ್ ಖಾತರಿಯಾದ ಹಿನ್ನೆಲೆಯಲ್ಲಿ ಪರಿಯಾರಂ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. 1,569 ಮಂದಿಗೆ ಸೋಂಕು ಕೇರಳದಲ್ಲಿ 1,569 ಮಂದಿಗೆ ಸೋಂಕು ದೃಢೀಕರಿಸಲಾಗಿದೆ. 1,304 ಮಂದಿ ಗುಣಮುಖರಾಗಿದ್ದಾರೆ. 1,354 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ.
ಮಾಸ್ಕ್ ಧರಿಸದೇ ಇದ್ದದ್ದಕ್ಕೆ ಜಿಲ್ಲೆಯಲ್ಲಿ 402 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಕೊಡಗು: ಓರ್ವ ಸಾವು
ಮಡಿಕೇರಿ: ಜಿಲ್ಲೆಯ ಭಗವತಿ ನಗರದ 58 ವರ್ಷದ ಪುರುಷರೊಬ್ಬರು ಶುಕ್ರವಾರ ಸೋಂಕಿನಿಂದ ಮೃತಪಟ್ಟಿದ್ದಾರೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಅವರಿಗೆ ಆ. 9ರಂದು ಜ್ವರವಿತ್ತು. ಎರಡು ದಿನ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿತ್ತು. ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಿ ಐಸಿಯನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ.
Related Articles
ಜಿಲ್ಲೆಯಲ್ಲಿ 43 ಹೊಸ ಪಾಸಿಟಿವ್ ಪ್ರಕರಣ ದಾಖಲಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 922ಕ್ಕೆ ಏರಿಕೆಯಾಗಿದೆ. ಈ ಪೈಕಿ 579 ಮಂದಿ ಗುಣಮುಖರಾಗಿದ್ದಾರೆ.
Advertisement