Advertisement
ಜನದಟ್ಟಣೆ ಇರುವ ಸ್ಥಳಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ನಾಗರಿಕರನ್ನು ಪರೀಕ್ಷಿಸಲಾಗುತ್ತಿದೆ. ಕೊರೊನಾ ಪ್ರಕರಣ ಹೆಚ್ಚಳದಿಂದ ಸಾಂಸ್ಥಿಕ ಪ್ರತ್ಯೇಕ ಕೇಂದ್ರದಲ್ಲಿ ಶಂಕಿತ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ.
Related Articles
Advertisement
ಕೆಲವು ದಿನಗಳ ಹಿಂದೆ ದಾದರ್‌ನ ವನಿತಾ ಸಮಾಜ ಸಂಸ್ಥೆಯ ಪ್ರತ್ಯೇಕ ಕೇಂದ್ರದಲ್ಲಿ ಮೂರರಿಂದ ನಾಲ್ಕು ರೋಗಿಗಳು ಮಾತ್ರ ಇದ್ದರು. ಆದರೆ ಈಗ ಈ ಸಂಖ್ಯೆ 70ಕ್ಕೆ ತಲುಪಿದೆ. ಸೋಂಕಿತ ರೋಗಿಗಳೊಂದಿಗೆ ಸಂಪರ್ಕಕ್ಕೆ ಬಂದ ಹೆಚ್ಚಿನ ಅಪಾಯದ ಗುಂಪಿನಲ್ಲಿರುವ ಶಂಕಿತ ರೋಗಿ
ಗಳನ್ನು ಪ್ರತ್ಯೇಕವಾಗಿರಿಸಲಾಗುತ್ತಿದೆ. ಸೋಂಕಿತ, ಶಂಕಿತ ರೋಗಿಗಳನ್ನು ಪರೀಕ್ಷೆಯ ಮೂಲಕ ಪ್ರತ್ಯೇಕಿಸಲಾಗುತ್ತಿದೆ. ಇದರಿಂದ ಸೋಂಕನ್ನು ನಿಯಂತ್ರಿಸುವ ಪ್ರಯತ್ನಗಳು ನಡೆಯುತ್ತಿವೆ.
ಮುಂಬಯಿ ಮಹಾನಗರ ಪಾಲಿಕೆಯು ರೋಗಲಕ್ಷಣ ಹೊಂದಿರುವವರಿಗೆ ಹೆಚ್ಚಿನ ಸಂಖ್ಯೆಯ ತಪಾಸಣೆ ಮತ್ತು ಪರೀಕ್ಷೆಗಳನ್ನು ಪ್ರಾರಂಭಿಸಿದೆ. ಮುಂಬಯಿಯಲ್ಲಿ ರೋಗಿಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರಿದಿದೆ.
ಮಾಸ್ಕ್ ನಿಯಮ ಉಲ್ಲಂಘನೆ: 34.62 ಕೋ. ರೂ. ದಂಡ :
ಬಿಎಂಸಿಯು ಮಾಸ್ಕ್ ಸರಿಯಾಗಿ ಧರಿಸದ ಮತ್ತು ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದ್ದು, ಈ ವರೆಗೆ 17,13,385 ಮಂದಿಗೆ ದಂಡ ವಿಧಿಸಿದ್ದು, ಅವರಿಂದ 34,62,84,600 ರೂ.ಗಳನ್ನು ವಸೂಲು ಮಾಡಿದೆೆ. ಮಹಾನಗರ ಪಾಲಿಕೆ, ಪೊಲೀಸ್ ಮತ್ತು ರೈಲ್ವೇ ಪೊಲೀಸರು ಶುಕ್ರವಾರ 19,849 ಜನರ ವಿರುದ್ಧ ಕ್ರಮ ಕೈಗೊಂಡಿದ್ದು, 39,69,800 ರೂ. ದಂಡ ವಸೂಲಿ ಮಾಡಿದೆ. ರೈಲ್ವೇಯ ಮೂರು ಮಾರ್ಗಗಳಲ್ಲಿ ಮಾಸ್ಕ್ ಧರಿಸದೆ ಪ್ರಯಾಣಿಸುತ್ತಿದ್ದ ಒಟ್ಟು 2,263 ಪ್ರಯಾಣಿಕರಿಗೆ 4,52,600 ರೂ.ಗಳ ದಂಡ ವಿಧಿಸಲಾಗಿದೆ.