Advertisement

ವಿಜಯಪುರ : ಕೋವಿಡ್ ಸೋಂಕಿಗೆ ನಾಲ್ವರು ಬಲಿ

06:46 PM May 01, 2021 | Suhan S |

ವಿಜಯಪುರ: ಗಡಿಜಿಲ್ಲೆ ವಿಜಯಪುರ ದಲ್ಲಿ ಶನಿವಾರ ಮತ್ತೆ 332 ಸೋಂಕಿತರು ಪತ್ತೆಯಾಗಿದ್ದು, 4 ಸೋಂಕಿತರು ಬಲಿಯಾಗಿದ್ದಾರೆ.

Advertisement

ಜಿಲ್ಲೆಯಲ್ಲಿ ಶನಿವಾರ ನಾಲ್ವರ ಸಾವಿನೊಂದಿಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 242 ಕ್ಕೆ ಏರಿಕೆಯಾಗಿದೆ‌. ಒಟ್ಟು ಪತ್ತೆಯಾದ ಸೋಂಕಿತರ ಸಂಖ್ಯೆ 21,985 ಇದೆ.  ಜಿಲ್ಲೆಯಲ್ಲಿ ಇದೀಗ 3136 ಸಕ್ರೀಯ ಸೋಂಕಿತರಿದ್ದು, ಇದರಲ್ಲಿ 728 ಜನರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇತರೆ ಸಕ್ರೀಯ ಸೋಂಕಿತರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : ಕೋವಿಡ್ ಕರ್ಪ್ಯೂ ಸಂದರ್ಭದಲ್ಲಿಯೂ ಎದೆಗುಂದದೆ ವೃದ್ಧೆ ಗಂಗಮ್ಮನ ಸ್ವಾಭಿಮಾನಿ ಬದುಕು

ಶನಿವಾರ ಸೋಂಕಿನಿಂದ ಗುಣಮುಖರಾದ 564 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದರೊಂದಿಗೆ ಸೋಂಕಿನಿಂದ ಗುಣಮುಖರಾಗಿ 18,607 ಜನರು ಮನೆಗೆ ಮರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next