Advertisement
ಜಿಲ್ಲೆಯಲ್ಲಿ ಕಳೆದ ಎ.25ರಿಂದ ಮೇ 6ರ ವರೆಗಿನ 11 ದಿನದಲ್ಲಿ ಸೋಂಕಿತರ ಸಂಖ್ಯೆ 8,116ಕ್ಕೆ ಏರಿಕೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 28,776ನಿಂದ 36,892ಕ್ಕೇರಿದೆ.
Related Articles
Advertisement
ಮೇ 7ರ ಬೆಳಗ್ಗೆ ಮನೆಯಿಂದ ಹೊರ ಬರುವವರ ಸಂಖ್ಯೆ ತುಸು ಕಡಿಮೆ ಆಗಿತ್ತು. ಮಧ್ಯಾಹ್ನ 12 ಗಂಟೆಯ ಬಳಿಕ ದ್ವಿಚಕ್ರ ವಾಹನ ಹಾಗೂ ಸಾರ್ವಜನಿಕರ ಓಡಾಟ ಸಂಪೂರ್ಣವಾಗಿ ನಿಲುಗಡೆಯಾಗಿತ್ತು.
370ಕ್ಕೂ ಹೆಚ್ಚು ಪ್ರಕರಣ ದಾಖಲು :
ಕೋವಿಡ್ ಪ್ರಕರಣಗಳು ಹೆಚ್ಚಾಗು ತ್ತಿದ್ದರೂ ಸಾರ್ವಜನಿಕರು ನಗರ ಪ್ರದೇಶದಲ್ಲಿ ಕಾರಣವಿಲ್ಲದೆ ಸುತ್ತಾಟ ನಡೆಸುವುದನ್ನು ಮಾತ್ರ ಕಡಿಮೆ ಮಾಡಿಲ್ಲ. ಪೊಲೀಸರು ಅನಗತ್ಯ ಸಂಚರಿಸುವವರ ವಾಹನಗಳನ್ನು ತಪಾಸಣೆ ನಡೆಸಿ ದಂಡ ವಿಧಿಸಿದ್ದಾರೆ. ಆಯಾ ಪ್ರದೇಶದಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಿದ್ದಾರೆ.
ಜಿಲ್ಲೆಯಲ್ಲಿ ಎ. 28ರಿಂದ ಮೇ 4 ರವರೆಗೆ ಒಟ್ಟು 370 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ದ್ವಿಚಕ್ರ ವಾಹನ ಸವಾರರು ಅತ್ಯಧಿಕ ಸಂಖ್ಯೆಯಲ್ಲಿ ನಿಯಮ ಉಲ್ಲಂಘಿ ಸಿದ್ದಾರೆ.
ಶೇ. 60 ಹೋಮ್ ಐಸೋಲೇಶನ್ ಶೇ. 40 ಆಸ್ಪತ್ರೆ :
ಈಗ ಏರುತ್ತಿರುವ ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿ ದರೆ ಮೇ ಅಂತ್ಯದೊಳಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 15,000 ದಾಟುವ ಸಾಧ್ಯತೆಯಿದ್ದು, ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 50,000
ದಾಟಲಿದೆ. ಇದರಲ್ಲಿ ಶೇ. 60ರಷ್ಟು ಹೋಮ್ ಐಸೋಲೇಶನ್‌ನಲ್ಲಿ ಇರಲಿದ್ದು, ಉಳಿದ ಶೇ. 40ರಷ್ಟು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಾಧ್ಯತೆ ಇದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ 12 ದಿನಗಳಲ್ಲಿ ಆದ ಕೋವಿಡ್ ಪ್ರಕರಣಗಳು
ದಿನ ಪ್ರಕರಣ ಸಕ್ರಿಯ ಪ್ರಕರಣ
ಎ. 25 319 1,565
ಎ. 26 412 1,687
ಎ. 27 477 1,892
ಎ. 28 664 2,230
ಎ.29 568 2,359
ಎ. 30 660 2,596
ಮೇ 1 430 2,643
ಮೇ 2 319 1,565
ಮೇ 3 529 2,488
ಮೇ 4 556 2,705
ಮೇ 5 1,656 3,925
ಮೇ 6 1,526 5,066
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಜತೆಗೆ ರೋಗ ಲಕ್ಷಣವಿದ್ದವರು ತತ್‌ಕ್ಷಣ ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಗಾಗಿ.–ಡಾ| ಸುಧೀರ್‌ಚಂದ್ರ ಸೂಡ, ಡಿಎಚ್‌ಒ, ಉಡುಪಿ.