ಚಿಕ್ಕನಾಯಕನಹಳ್ಳಿ: ಕೋವಿಡ್ ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ಸರ್ಕಾರಿ ಕಚೇರಿ ಕೆಲಸಗಳು ಕೆಲದಿನಗಳಿಂದ ಆರಂಭಗೊಂಡಿದ್ದು ಸೋಮವಾರ ಪಟ್ಟಣದ ತಾಲೂಕು ಕಚೇರಿ ಸೇರಿ ಇನ್ನಿತರ ಕಚೇರಿಗಳು ಸಾರ್ವಜನಿಕರಿಂದ ತುಂಬಿ ಹೋಗುತ್ತಿವೆ. ಇನ್ನು ಪಟ್ಟಣದಲ್ಲಿ ಸಾರ್ವಜನಿಕರು ಕೊರೊನಾ ಮರೆತು ಎಂದಿನಂತೆ ತಮ್ಮ ಕೆಲಸಗಳಲ್ಲಿ ನಿರತರಾಗುತ್ತಿದ್ದಾರೆ. ಇದರಿಂದಾಗಿ ಕೋವಿಡ್ ಸೋಂಕು ಭೀತಿ ಕಾಡುತ್ತಿದೆ.
ಭಯಬಿಟ್ಟು ಓಡಾಡುತ್ತಿರುವ ಜನ: ಸೋಮವಾರದಿಂದ ಬಹುತೇಕ ಎಲ್ಲಾ ಚಟುವಟಿಕೆ ಆರಂಭಗೊಂಡಿದ್ದು 52 ದಿನಗಳ ನಂತರ ಜನ ಓಡಾಡಲು ಶುರುಮಾಡಿದ್ದಾರೆ. ತಾಲೂಕಿನಲ್ಲಿ ಕೋವಿಡ್ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಪ್ರತಿ ದಿನ ಪಾಸಿಟಿವ್ ಕೇಸ್ ದಾಖಲಾಗುತ್ತಿದ್ದು ಜನ ಕೊರೊನಾ ಭಯಬಿಟ್ಟು ಓಡಾಡುತ್ತಿರುವುದು ಆತಂಕ ಮೂಡಿಸಿದೆ.
ನಗರದಲ್ಲಿ ಸಾಮಾಜಿಕ ಅಂತರವಿಲ್ಲ: ಸೋಮವಾರ ಪಟ್ಟಣದಲ್ಲಿ ಜಾತ್ರೆಯಂತೆ ಜನ ಬಂದಿದ್ದು, ಬಟ್ಟೆ ಅಂಗಡಿ, ದಿನಸಿ ಅಂಗಡಿ , ಬಾರ್, ಹಾರ್ಡ್ ವೇರ್, ಎಲೆಕ್ಟ್ರಿಕಲ್ ಸೇರಿದಂತೆ ಬಹುತೇಕ ಅಂಗಡಿಗಳ ಮುಂದೆ ಸಾರ್ವಜನಿಕರು ಮಾಸ್ಕ್ , ಸಾಮಾಜಿಕ ಅಂತರವಿಲ್ಲದೆ ವಸ್ತು ಖರೀದಿಸುತ್ತಿರುವುದು ಸಾಮಾನ್ಯವಾಗಿತ್ತು. ತಾಲೂಕು ಕಚೇರಿ ತುಂಬ ಜನ: ಕಂದಾಯ ಇಲಾಖೆಯಲ್ಲಿನ ಕೆಲಸ ಆರಂಭಗೊಂಡಿದ್ದು ಹಳ್ಳಿಗಳಿಂದ ಜನ ತಾಲೂಕು ಕಚೇರಿಗೆ ತಮ್ಮ ತಮ್ಮ ಕೆಲಸಗಳ ನಿಮಿತ್ತ ಆಗಮಿಸಿದ್ದರು. ಫಹಣಿ ಕೇಂದ್ರ, ನಾಡಕಚೇರಿ ಮುಂಭಾಗ ಜನ ಸಾಮಾಜಿಕ ಅಂತರ ಮರೆತು ನೂಕುನುಗ್ಗಲಿನಲ್ಲಿ ನಿಂತುಕೊಂಡಿದ್ದರು.
ಕಡಿಮೆಯಾಗಿಲ್ಲ: ತಾಲೂಕಿನಲ್ಲಿ ಪ್ರತಿ ದಿನ ಕೊರೊನಾ ಪಾಸಿಟಿವ್ ಕೇಸ್ 10 ರಿಂದ 15ಕಿಂತ ಹೆಚ್ಚು ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು ಗ್ರಾಪಂ ವ್ಯಾಪ್ತಿಯಲ್ಲಿಯೇ ಹೆಚ್ಚು ಸಂಖ್ಯೆಯಲ್ಲಿ ಬರುತ್ತಿದೆ. ಸೋಮವಾರ19 ಜನರಿಗೆ ಸೋಂಕು ತಗುಲಿದೆ.
ಸೋಂಕಿತರು ಇಳಿಮುಖ: ತಾಲೂಕಿನಲ್ಲಿ ಪ್ರತಿ ದಿನ ಕೋವಿಡ್‌ಪ್ರಕರಣಗಳು ದಾಖಲಾಗುತ್ತಿವೆ. ಆದರೆ, ಕೋವಿಡ್ ಸೆಂಟರ್‌ನಲ್ಲಿ ಕೇವಲ 19 ಮಂದಿ ಸೋಂಕಿತರು ಮಾತ್ರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಡ್ಡಾಯವಾಗಿ ಸೋಂಕತರನ್ನು ಕೋವಿಡ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಕೊಡಬೇಕು ಎಂದು ಸಚಿವರು ಸೂಚನೆ ನೀಡಿದ್ದರೂ ಸೋಂಕಿತರುಕೋವಿಡ್ ಸೆಂಟರ್‌ಗೆ ಬರುತ್ತಿಲ್ಲ.
ಕೋವಿಡ್ ಸೆಂಟರ್‌ಗೆ ಬಾರದ ಸೋಂಕಿತರು : ತಾಲೂಕಿನಲ್ಲಿ ಜೂ.22 ರಂದು25, ಜೂ.23 ರಂದು11, ಜೂ.24 ರಂದು12, ಜೂ.25 ರಂದು16, ಜೂ.27 ರಂದು 19, ಜೂ.28 ರಂದು19 ಒಟ್ಟು ಸುಮಾರು102 ಜನಕ್ಕೆ ಕೋವಿಡ್ ಪಾಸಿಟಿವ್ ದಾಖಲಾಗಿದೆ. ಆದರೆ, ತಾಲೂಕು ಕೋವಿಡ್ ಸೆಂಟರ್‌ನಲ್ಲಿಕೇವಲ 19 ಮಂದಿ ಸೋಂಕಿತರು ಮಾತ್ರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಉಳಿದವರು ಸಾರ್ವಜನಿ ಕರ ಮಧ್ಯೆ ಇದ್ದುಕೊರೊನಾ ಹೆಚ್ಚಳಕ್ಕೆಕಾರಣವಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ತಾಲೂಕಿನಲ್ಲಿ ಕೋವಿಡ್ ಪ್ರಮಾಣ ಶೇ.5ಕ್ಕಿಂತ ಕಡಿಮೆ ಇದೆ. ತಾಲೂಕು ವೈದ್ಯಾಧಿಕಾರಿಗಳಿಗೆ, ತಾಪಂ ಇಒ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಸೋಂಕಿತರಿಗೆಕೋವಿಡ್‌ಕೇಂದ್ರದಲ್ಲಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಲಾಗಿದೆ.
–ತೇಜಸ್ವಿನಿ, ತಹಶೀಲ್ದಾರ್ ಚಿಕ್ಕನಾಯಕನಹಳ್ಳಿ
– ಚೇತನ್