ತುಮಕೂರು: ಕಲ್ಪತರುನಾಡಿನಲ್ಲಿ ನಿಯಂತ್ರಣ ಮೀರಿ ಕೋವಿಡ್ ಸೋಂಕು ಹರಡುತ್ತಲೇ ಇದ್ದು, ವೈದ್ಯರು, ಪೊಲೀಸರು, ಶಿಕ್ಷಕರು ಪೌರಕಾರ್ಮಿಕರು, ಪತ್ರಕರ್ತರು, ಜನ ನಾಯಕರು ನಾಗರಿಕರೂ ಸೇರಿದಂತೆ ಈವರೆಗೆ ಜಿಲ್ಲೆಯಲ್ಲಿ 352ಕ್ಕೂ ಹೆಚ್ಚು ಜನ ಕೋವಿಡ್ ಗೆ ಉಸಿರು ಚೆಲ್ಲಿದ್ದಾರೆ.
ಪ್ರಾರಂಭದಲ್ಲಿ 2-3 ಸೋಂಕಿತರು ಕಂಡು ಬರುತ್ತಿದ್ದರು. ಆದರೆ ಈಗ ನೂರಾರು ಸೋಂಕಿತರು ಹತ್ತಾರು ಸಾವು ಸಂಭವಿಸುತ್ತಿರುವುದು ಜನರನ್ನು ಬೆಚ್ಚಿ ಬೀಳಿಸುತ್ತಿದೆ.ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಏರುತ್ತಲೇ ಇದೆ.ಕೋವಿಡ್ ವೈರಸ್, ಈ ವೇಳೆಯಲ್ಲಿ ಬರುತ್ತಿದ್ದ ಎಲ್ಲಾ ಸಾಂಕ್ರಾಮಿಕ ರೋಗ ಹಿಂದಿಕ್ಕಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಈವರೆಗೆ ಈ ಸೋಂಕಿಗೆ ಜಿಲ್ಲೆಯಲ್ಲಿ 352 ಜನ ಮೃತಪಟ್ಟಿರುವುದು ಆತಂಕ ಮೂಡಿಸಿದೆ.
ನಿತ್ಯಹೆಚ್ಚಳ: ಆರೋಗ್ಯಇಲಾಖೆ ಮಾಹಿತಿ ಪ್ರಕಾರ ಒಂದು ದಿನಕ್ಕೆ ಕನಿಷ್ಠ200-300 ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಭಾನುವಾರದವರೆಗೆ ಜಿಲ್ಲೆ ಯಲ್ಲಿ ಕೋವಿಡ್ ಸೋಂಕಿತರು16750 ಇದ್ದು ಇದೇ ರೀತಿ ಜಿಲ್ಲೆಯಲ್ಲಿ ಕೋವಿಡ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದರೆ ನವೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿತರಾಗುವ ಸಾಧ್ಯತೆ ನಿಚ್ಚಳವಾಗಿದೆ.
ಉತ್ತಮ ಕಾರ್ಯನಿರ್ವಹಣೆ : ಕೋವಿಡ್‌ನಿಂದ 13,905 ಜನ ಗುಣಮುಖರಾಗಿದ್ದಾರೆ. ತುಮಕೂರು ಕೋವಿಡ್-19 ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ಒದಗಿಸುವಲ್ಲಿ ಜಿಲ್ಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈವರೆಗೆ ಒಟ್ಟು 16759 ಜನ ಆಸ್ಪತ್ರೆಗೆ ಸೇರಿರುವ ಸೋಂಕಿತರಲ್ಲಿ 13905 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎನ್ನುವುದು ಸಮಾಧಾನದ ವಿಷಯ. ಜಿಲ್ಲೆಯಲ್ಲಿ ಈವರೆಗೂ 13905 ಮಂದಿ ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ದಿನೇ ದಿನೆ ಸೋಂಕು ಹೆಚ್ಚಳ; ಆಸ್ಪತ್ರೆಗಳಲ್ಲಿ ಬೆಡ್‌ಕೊರತೆ : ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯದ ಕೊರತೆ ಎದ್ದು ಕಾಣುತ್ತಿದೆ. ಹಲವು ಸಂದರ್ಭಗಳಲ್ಲಿ ರೋಗಿಗಳು ಆಸ್ಪತ್ರೆಗಳಿಗೆಅಲೆದಾಡಿ ಮನೆಗಳಿಗೆ ವಾಪಸ್ ಆಗಿದ್ದೂ ಉಂಟು. ಇನ್ನು ಜಿಲ್ಲಾ ಕೇಂದ್ರ ತುಮಕೂರಿನಲ್ಲಿ 200 ಹಾಸಿಗೆ ಉಳಿದಂತೆ ಸಿದಾರ್ಥ ಆಸ್ಪತ್ರೆಯಲ್ಲಿ 110 ಶ್ರೀದೇವಿ ಆಸ್ಪತ್ರೆಯಲ್ಲಿ 125, ಅಶ್ವಿನಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ 150, ಸೂರ್ಯ ಆಸ್ಪತ್ರೆಯಲ್ಲಿ 30, ಪೃಥ್ವಿ ಆಸ್ಪತ್ರೆಯಲ್ಲಿ 30ಹಾಸಿಗೆ ಇದ್ದು ಇಲ್ಲಿಯೂ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆಪ್ರತಿ ತಾಲೂಕಿನಲ್ಲಿ 50 ಹಾಸಿಗೆ ಲಭ್ಯವಿದೆ. ಆದರೆ ಈಗಬರುತ್ತಿರುವ ಸೋಂಕಿತರ ಸಂಖ್ಯೆಗೆ ಈ ಹಾಸಿಗೆಗಳು ಸಾಕಾಗುತ್ತಿಲ್ಲ ಎನ್ನುವ ಮಾತುಕೇಳಿ ಬರುತ್ತಿದೆ.
3 ವೈದ್ಯರು, 3 ಶಿಕ್ಷಕರು ಸಾವು : ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿದೆ. ಅದರಲ್ಲಿ ಯೂ ಉಸಿರಾಟ ಸಮಸ್ಯೆಯಿಂದ ಬರುವವರ ಸಂಖ್ಯೆ ಯೂಹೆಚ್ಚಿದೆ. ಎಲ್ಲಾಆಸ್ಪತ್ರೆಗಳನ್ನು ಸೇರಿಸಿದರೆ70 ಮಾತ್ರಐಸಿಯು ಸೌಲಭ್ಯವಿದೆ. ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ವೈದ್ಯರು ನೂರಾರು ಸಿಬ್ಬಂದಿ ಪ್ರಾಣದ ಹಂಗು ತೊರೆದು ಕೋವಿಡ್ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ತಾಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್‌ಗಳಿವೆ. ಇಲ್ಲಿಯವರೆಗೆ 3 ಜನ ವೈದ್ಯರು,3 ಜನ ಶಿಕ್ಷಕರು ಜಿಲ್ಲೆಯಲ್ಲಿ ಬಲಿಯಾಗಿದ್ದಾರೆ.
ತುಮಕೂರು ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಕೋವಿಡ್-19 ನಿಯಂತ್ರಣವನ್ನು ಸಮರ್ಪಕವಾಗಿ ಮಾಡುತ್ತಿದೆ. ಉಸಿರಾಟದ ಸಮಸ್ಯೆ ಮತ್ತಿತರ ಗಂಭೀರಕಾಯಿಲೆಯಿಂದ ಬಳಲುತ್ತಿರುವವರು ಮಾತ್ರ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸಾರ್ವಜನಿಕರುತೀವ್ರತರ ಆರೋಗ್ಯ ಸಮಸ್ಯೆಉಂಟಾಗುವವರೆಗೂ ಕಾಯದೆ ರೋಗಿಯನ್ನು ಪ್ರಾಥಮಿಕ ಹಂತದಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಮಾತ್ರ ಸಾವಿನ ಪ್ರಮಾಣ ತಗ್ಗಿಸಬಹುದು.
-ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾಧಿಕಾರಿ