Advertisement

ಥಾಣೆ: 1,284 ಮಂದಿಗೆ ಕೋವಿಡ್ ಸೋಂಕು, 26 ಸಾವು

08:46 PM Aug 24, 2020 | Suhan S |

ಥಾಣೆ, ಆ. 23: ಮಹಾರಾಷ್ಟ್ರದ ಥಾಣೆ ಜಿಲ್ಲೆ ಯಲ್ಲಿ ಮತ್ತೆ 1,284 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,13,884ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ.

Advertisement

ಶನಿವಾರ 26 ಜನರು ಸೋಂಕಿಗೆ ಬಲಿಯಾಗಿರುವುದರಿಂದ ಜಿಲ್ಲೆ ಯಲ್ಲಿ ಸಾವಿನ ಸಂಖ್ಯೆ 3,240ಕ್ಕೆ ತಲುಪಿದೆ ಎಂದವರು ಹೇಳಿದ್ದಾರೆ. ಜಿಲ್ಲೆಯ ಕಲ್ಯಾಣ್‌ ಪಟ್ಟಣದಲ್ಲಿ ಈವರೆಗೆ ಗರಿಷ್ಠ 26,405 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಅನಂತರದ ಸ್ಥಾನಗಳಲ್ಲಿರುವ ಥಾಣೆ ನಗರದಲ್ಲಿ 24,329, ನವಿಮುಂಬಯಿಯಲ್ಲಿ 23,005 ಪ್ರಕರಣಗಳು ಮತ್ತು ಮೀರಾ ಭಾಯಾಂದರ್‌ ಪಟ್ಟಣದಲ್ಲಿ 11,519 ಪ್ರಕರಣ ದಾಖಲಾಗಿವೆ. ಉಳಿದ ಪ್ರಕರಣಗಳು ಜಿಲ್ಲೆಯ ಇತರ ಭಾಗಗಳಿಂದ ವರದಿಯಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಶನಿವಾರ ಕಲ್ಯಾಣ್‌-ಡೊಂಬಿವಲಿ 421 ಹೊಸ ಪ್ರಕರಣಗಳನ್ನು ವರದಿ ಮಾಡಿದ್ದರೆ, ನವಿಮುಂಬಯಿ 398, ಥಾಣೆ ನಗರ 134 ಮತ್ತು ಮೀರಾ ಭಾಯಂದನರ್‌ಲ್ಲಿ 124 ಪ್ರಕರಣ ದಾಖಲಾಗಿವೆ ಎಂದಿದ್ದಾರೆ. ಕಲ್ಯಾಣ್‌ ಶನಿವಾರ ಒಂದೇ ದಿನದಲ್ಲಿ ಅತಿ ಹೆಚ್ಚು 10 ಸಾವುಗಳನ್ನು ವರದಿ ಮಾಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ 12,733 ಸಕ್ರಿಯ ಪ್ರಕರಣಗಳಿದ್ದು, 97,911 ಮಂದಿ ಚೇತರಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಚೇತರಿಕೆ ಪ್ರಮಾಣ ಶೇ. 85.97 ಮತ್ತು ಮರಣ ಪ್ರಮಾಣ ಶೇ. 2.85ರಷ್ಟಿದೆ ಎಂದವರು ಹೇಳಿದ್ದಾರೆ. ಮಹಾರಾಷ್ಟ್ರದ ಒಟ್ಟು ಪ್ರಕರಣಗಳಲ್ಲಿ ಥಾಣೆ ಜಿಲ್ಲೆಯು ಶೇ. 16.94ರಷ್ಟಿದೆ ಮತ್ತು ರಾಜ್ಯದಲ್ಲಿ ಸಂಭವಿಸಿದ ಒಟ್ಟು ಸಾವುಗಳಲ್ಲಿ ಶೇ.14.73ರಷ್ಟಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ನೆರೆಯ ಪಾಲ್ಘರ್‌ ಜಿಲ್ಲೆಯಲ್ಲಿ ಶನಿವಾರ 347 ಹೊಸ ಪ್ರಕರಣಗಳ ವರದಿಯೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 21,918ಕ್ಕೆ ಏರಿದೆ ಎಂದು ಜಿಲ್ಲೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪಾಲ್ಘರ್ ನಲ್ಲಿ ಶನಿವಾರ ಸೋಂಕನಿಂದ ಇಬ್ಬರು ಸಾವನ್ನಪ್ಪಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 444 ಆಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next