Advertisement
ಮುಂಬಯಿಯಲ್ಲಿ ಸಾವಿನ ಸಂಖ್ಯೆ ಕಳೆದ ವರ್ಷದ ಮೇ ಮತ್ತು ಜೂನ್‌ಗಿಂತ ಇಳಿಕೆಯಾಗಿದ್ದು, ಕಳೆದ ತಿಂಗಳಲ್ಲಿ 351 ಸಾವುಗಳು ಸಂಭವಿಸಿದ್ದವು. ಮುಂಬಯಿಯಲ್ಲಿ ನಿಯಂತ್ರಣದಲ್ಲಿದ್ದ ಸೋಂಕು ಫೆಬ್ರವರಿಯಿಂದ ಮತ್ತೆ ಹೆಚ್ಚಲಾರಂಭಿಸಿದೆ. ಈ ವರ್ಷದ ಮಾರ್ಚ್ ನಲ್ಲಿ ಕೋವಿಡ್ ಬೆಳವಣಿಗೆಯ ದರ ಅತೀ ಹೆಚ್ಚು ದಾಖಲಾಗಿದ್ದು, ಮಾರ್ಚ್ 7ರಂದು ಮುಂಬಯಿಯಲ್ಲಿ ಕೋವಿಡ್ 3,33,564 ಸೋಂಕಿತರಿದ್ದರು. ಇದು ಎಪ್ರಿಲ್ 7ಕ್ಕೆ 4,82,760ಕ್ಕೆ ತಲುಪಿದೆ. ಸಾವಿನ ಸಂಖ್ಯೆ ಕಡಿಮೆಯಾಗಿದ್ದು, ಮಾರ್ಚ್ 7ರ ವೇಳೆಗೆ 11,500 ಸಾವುಗಳು ಸಂಭವಿಸಿದ್ದು, ಎಪ್ರಿಲ್ 7ರಂದು ಈ ಸಂಖ್ಯೆ 11,851ಕ್ಕೆ ತಲುಪಿದೆ ಎಂದು ವರದಿ ತಿಳಿಸಿದೆ.
Related Articles
Advertisement
ಮುಂಬಯಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆ 81,886ಕ್ಕೆ ತಲುಪಿದೆ. ಈ ಪೈಕಿ ಸುಮಾರು ಶೇ.80ರಷ್ಟು ಮಂದಿ ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ. ಆದ್ದರಿಂದ ಹೆಚ್ಚಿನವರು ಹೋಮ್ ಕ್ವಾರಂಟೈನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಆಸ್ಪತ್ರೆ ಮತ್ತು ಕೋವಿಡ್ ಕೇಂದ್ರಗಳ ಮೇಲಿನ ಒತ್ತಡ ಕಡಿಮೆಯಾಗಿದೆ ಎಂದು ತಿಳಿಸಿದೆ.