ಮುಂಬಯಿ, ಸೆ. 15: ನಗರದಲ್ಲಿ ಪ್ರತಿದಿನ 2,000ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಈ ಮಧ್ಯೆ ಆರ್ ಸೆಂಟ್ರಲ್ ವಾರ್ಡ್ ನಲ್ಲಿರುವ ಬೊರಿವಲಿ ಉಪನಗರವು 10,000 ಪ್ರಕರಣಗಳನ್ನು ದಾಟಿದ ನಗರದ ಮೊದಲ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮುಂಬಯಿಯ ಮಹಾನಗರ ಪ್ರದೇಶದಲ್ಲಿ, ಥಾಣೆ, ನವಿಮುಂಬಯಿ ಮತ್ತು ಕಲ್ಯಾಣ್ -ಡೊಂಬಿವಲಿಯಲ್ಲಿ ದಿನಂಪ್ರತಿ ತಲಾ 400ಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ರಾಜ್ಯದ ಚೇತರಿಕೆ ಪ್ರಮಾಣವು ಶೇ. 69.8ಕ್ಕೆ ಇಳಿದಿದ್ದು, ರಾಜ್ಯಾದ್ಯಂತ ಚೇತರಿಸಿಕೊಂಡ 11,549 ಸೋಂಕಿತರನ್ನು ಬಿಡು ಗಡೆ ಮಾಡಲಾಗಿದ್ದು, ಪೂರ್ಣ ಚೇತರಿಕೆಯ ಬಳಿಕ 902 ಮಂದಿಯನ್ನು ಮುಂಬಯಿಯಲ್ಲಿ ಬಿಡುಗಡೆ ಮಾಡಲಾಗಿದೆ. ಮುಂಬಯಿಯ ಚೇತರಿಕೆ ಪ್ರಮಾಣವು ಶೇ. 77ಕ್ಕೆ ಇಳಿದಿದ್ದರೆ, ದ್ವಿಗುಣವಾಗುವದರ 56 ದಿನಗಳಿಗೆ ಕುಸಿದಿದೆ.
ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರಲ್ಲಿ 77,000ಕ್ಕೂ ಅಧಿಕಮಂದಿ ಪುಣೆಯವರಾದರೆ, 29,531 ಮಂದಿ ಥಾಣೆ ಮತ್ತು 30,316 ಮಂದಿ ಮುಂಬಯಿ ಮೂಲದವರು. ರಾಜ್ಯದ ಮರಣ ಪ್ರಮಾಣವು ಶೇ. 2.79ಕ್ಕೆ ಇಳಿದಿದ್ದು, ಇಲ್ಲಿಯವರೆಗೆ ರಾಜ್ಯದಲ್ಲಿ 29,531 ಕೋವಿಡ್ ಸಂಬಂಧಿತ ಸಾವು ಸಂಭವಿಸಿವೆ. ಪ್ರಕರಣಗಳ ಹೆಚ್ಚಳದೊಂದಿಗೆ, ನಗರದ ದೈನಂದಿನ ಬೆಳವಣಿಗೆಯ ದರವು ಶೇ. 1.24ಕ್ಕೆ ಏರಿದೆ. ನಗರದ ಹತ್ತು ವಾರ್ಡ್‌ಗಳಲ್ಲಿ ಸರಾಸರಿಗಿಂತ ಅಧಿಕ ಬೆಳವಣಿಗೆ ದರವನ್ನು ಹೊಂದಿದ್ದು, ಪ್ರತಿ 19 ವಾರ್ಡ್‌ಗಳು ಶೇ. 1ಕ್ಕಿಂತ ಅಧಿಕ ಬೆಳವಣಿಗೆ ದರವನ್ನು ಹೊಂದಿವೆ. ಆರ್ ಸೆಂಟ್ರಲ್ ವಾರ್ಡ್ ಶೇ. 1.69ರಷ್ಟು ಬೆಳವಣಿಗೆಯ ದರದಲ್ಲಿ ಮುನ್ನಡೆ ಸಾಧಿಸಿದ್ದು, ಆರ್ ನಾರ್ತ್ ಮತ್ತು ಪಿ ಸೌತ್ ವಾರ್ಡ್‌ಗಳು ನಂತರದ ಸ್ಥಾನದಲ್ಲಿವೆ.
ಆರ್ ಸೆಂಟ್ರಲ್ 1,900ಕ್ಕಿಂತ ಅಧಿಕ ಸಕ್ರಿಯ ಪ್ರಕರಣಗಳನ್ನು ಹೊಂದಿದ್ದರೆ, 11 ವಾರ್ಡ್‌ಗಳಲ್ಲಿ ತಲಾ 1,000ಕ್ಕೂಅಧಿಕ ಪ್ರಕರಣಗಳಿವೆ. ನಗರದ ಪ್ರಮುಖ ಐದು ವಾರ್ಡ್‌ಗಳಲ್ಲಿ ತಲಾ 800ಕ್ಕೂ ಅಧಿಕ ಸಕ್ರಿಯಪ್ರಕರಣಗಳಿವೆ. ಆಡಳಿತಾತ್ಮಕ ವಾರ್ಡ್ ಗಳಲ್ಲಿ, ಜಿ ನಾರ್ತ್ ಐದನೇ ಸ್ಥಾನದಲ್ಲಿದೆ ಮತ್ತು ಆರ್ ಸೆಂಟ್ರಲ್ ಈಗ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದೆ.