Advertisement
ಫೆ.8ರ ನಂತರ ಗುಣ ಮುಖರಾಗುವವರ ಸಂಖ್ಯೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ ಕಡಿಮೆ ಯಾಗುತ್ತಿದೆ. ಜನವರಿಯ ಮೊದಲ ವಾರದ ಪ್ರಾರಂಭದಲ್ಲಿ ಎರಡಂಕಿ ಬಂದ ಕೊರೊನಾ ನಂತರ ಮೂರಂಕಿ ಯಿಂದ ಸಾವಿರದ ಗಡಿದಾಟಿತ್ತು.ಇದರಿಂದ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿತ್ತು. ಜ.6ರಂದು ಶ್ರೀರಂಗಪಟ್ಟಣದ ಓಂಶಕ್ತಿ ದೇವಾಲಯದಲ್ಲಿ ಕಾಣಿಸಿಕೊಂಡ ಸೋಂಕು ಜಿಲ್ಲೆಗೆ ಹರಡುವ ಮೂಲಕ ಆತಂಕ ಹೆಚ್ಚುವಂತೆ ಮಾಡಿತ್ತು. ಅಲ್ಲದೆ, ಓಂ ಶಕ್ತಿ ದೇವಾಲಯಕ್ಕೆ ಬಸ್‌ಗಳಲ್ಲಿ ತೆರಳಿದ್ದವರಲ್ಲಿ ಸೋಂಕು ಪತ್ತೆಯಾಗಿತ್ತು.
Related Articles
Advertisement
ಸೋಂಕು ಇಳಿದಂತೆ ಗುಣಮುಖರಾಗುವವರ ಸಂಖ್ಯೆ ಹೆಚ್ಚಿದೆ. ಜನವರಿ ಕೊನೇ ವಾರ ದಿಂದಲೂಸಂಪೂರ್ಣವಾಗಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಮಂದಿ ಗುಣಮುಖರಾಗುತ್ತಿದ್ದರು. ಜ.28ರಂದು 1500ಕ್ಕೂ ಹೆಚ್ಚು ಮಂದಿ, ಫೆ.1ರಂದು 1609, 3ರಂದು 1156ಮಂದಿ ಗುಣಮುಖರಾಗಿ ದ್ದರು. ಅದರಂತೆ ಪ್ರಸ್ತುತಸೋಂಕಿನ ಪ್ರಕರಣಗಳಿಗಿಂತ ಗುಣಮುಖರಾಗುವವರ ಸಂಖ್ಯೆಯೇ ಹೆಚ್ಚಿದೆ.
ಮಾಸ್ಕ್ ಇಲ್ಲದೇ ಸಂಚಾರ: ಪ್ರಸ್ತುತ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದರಿಂದ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜನರು ಯಾವುದೇ ಸೋಂಕಿನ ಭಯವಿಲ್ಲದೆ ಓಡಾಡುತ್ತಿದ್ದಾರೆ. ಹೆಚ್ಚು ಮಂದಿ ಮಾಸ್ಕ್ಧರಿಸುತ್ತಲೇ ಇಲ್ಲ. ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲೂ ಮಾಸ್ಕ್ ಇಲ್ಲದೆ ನಿರ್ಭೀತಿಯಿಂದ ಜನರುಓಡಾಡುವಂತಾಗಿದೆ. ಆದರೂ ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಪೂರ್ವ ಸಿದ್ಧತೆಯಿಂದ ಸೋಂಕು ನಿಯಂತ್ರಣ :ಮೂರನೇ ಅಲೆಯಲ್ಲಿ ಕೊರೊನಾ ಸೋಂಕು ಹೆಚ್ಚು ಕಂಡುಬಂದರೂ ಇಡೀ ಜಿಲ್ಲಾಡಳಿತವೇ ಒಂದು ತಂಡವಾಗಿ ಕೆಲಸಮಾಡಿದ್ದರಿಂದ ಸೋಂಕು ನಿಯಂತ್ರಿಸಲು ಸಾಧ್ಯವಾಯಿತು.ಜತೆಗೆ ಜಿಲ್ಲಾದ್ಯಂತ ಅರ್ಹ ಎಲ್ಲರಿಗೂ ಲಸಿಕೆ ನೀಡಲಾಗಿದೆ.ಮೊದಲ ಡೋಸ್ ಶೇ.100ರಷ್ಟು ಮಾಡಿದೆವು. ಎರಡನೇ ಡೋಸ್ ಸಹ ಶೇ.94ರಷ್ಟಾಗಿದೆ. ಇದರಿಂದ ಸೋಂಕು ಹೆಚ್ಚು ಪರಿಣಾಮ ಬೀರಲಿಲ್ಲ. ಅಲ್ಲದೆ, ಜನರಲ್ಲಿ ಭಯ, ಆತಂಕ ಹುಟ್ಟಿಸದೆ ಧೈರ್ಯ ತುಂಬಿದ್ದರಿಂದ ಜನರು ಸಹ ಸಹಕರಿಸಿದರು. ಇದೆಲ್ಲವೂ ಸೋಂಕು ಕಡಿಮೆಯಾಗಲು ಕಾರಣವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್. ಧನಂಜಯ “ಉದಯವಾಣಿ’ಗೆ ತಿಳಿಸಿದರು.
ಐಸೋಲೇಷನ್‌ಗೆ ಒತ್ತು :
ಪ್ರಕರಣಗಳು ಹೆಚ್ಚಾದಾಗಿಂದಲೂ ಸೋಂಕಿತರಿಗೆ ಹೋಂ ಐಸೋಲೇಷನ್‌ಗೆ ಒತ್ತು ನೀಡಲಾಗಿತ್ತು. ಅಲ್ಲದೆ, ಆರೋಗ್ಯಸಿಬ್ಬಂದಿಗಳ ಆರೈಕೆಯಿಂದ ಹೋಂಐಸೋಲೇಷನ್ ಇದ್ದವರು ಬೇಗ ಗುಣಮುಖರಾಗುತ್ತಿದ್ದಾರೆ.
1 ಲಕ್ಷ ಪ್ರಕರಣ :
ಜಿಲ್ಲೆಯಲ್ಲಿ ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.ಮೊದಲ, ಎರಡನೇ ಹಾಗೂ ಮೂರನೇಅಲೆಯಿಂದ 10,1029 ಪ್ರಕರಣಗಳುದಾಖಲಾಗಿವೆ. ಅದರಂತೆ 16 ಲಕ್ಷ ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ.