ಕುರುಗೋಡು: ಕೊರೊನಾ ಹಟ್ಟಹಾಸಕ್ಕೆ ಇಡೀ ದೇಶದ ಜನತೆ ಆತಂಕಕ್ಕೆ ಒಳ್ಳಗಾಗಿದ್ದು, ಗ್ರಾಮೀಣ ಪ್ರದೇಶದ ಶಾಲೆ ಮಕ್ಕಳಿಗೂ ಸೋಂಕು ತಗುಲಿದ್ದು ಮಕ್ಕಳ ಪೋಷಕರಲ್ಲಿ ಆತಂಕದ ಮನೆ ಮಾಡಿದೆ.
ಇದರ ಪರಿಣಾಮ ಸಮೀಪದ ಪಟ್ಟಣ ಶೇರುಗು ಗ್ರಾಮದ ವಿದ್ಯಾರ್ಥಿನಿ ಗುತ್ತಿಗೆನೂರು ಗ್ರಾಮದ ಸರಕಾರಿ ಪ್ರೌಢ ಶಾಲೆ ಯಲ್ಲಿ ಎಸ್. ಎಸ್. ಎಲ್. ಸಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಗೆ ಕೊರೊನಾ ಸೋಂಕು ಇರುವುದು ಸೋಮವಾರ ದೃಢವಾಗಿದೆ.
ಕಳೆದ ನಾಲ್ಕು ಐದು ದಿನಗಳ ಹಿಂದೆ ವಿದ್ಯಾರ್ಥಿನಿ ಕೊರೊನಾ ಲಸಿಕೆ ಪಡೆದಿದ್ದಳು, ನಂತರ ಎರಡು ದಿನ ಮೇಲ್ಪಟ್ಟು ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡಿವೆ ಇದರಿಂದ ಒರ್ವಾಯಿ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಚಿಕಿತ್ಸೆ ಪಡೆಯಲು ತೆರಳಿದ್ದಾರೆ. ಅಧಿಕಾರಿಗಳು ವಿದ್ಯಾರ್ಥಿನಿಗೆ ಕೊರೊನಾ ಪರೀಕ್ಷೆ ಮಾಡಿ ಹೆಚ್ಚುವರಿ ವರದಿಗೆ ವಿಮ್ಸ್ ಆಸ್ಪತ್ರೆಗೆ ಕಳಿಸಿದ್ದಾರೆ. ನಂತರ ಪಾಸಿಟಿವ್ ಇರುವುದು ದೃಢ ವಾಗಿದೆ.
ವಿದ್ಯಾರ್ಥಿ ಜ.12 ರಿಂದ ಶಾಲೆಗೆ ಇಲ್ಲಿವರೆಗೆ ಶಾಲೆಗೆ ಬಂದಿಲ್ಲ. ವಿದ್ಯಾರ್ಥಿ ಗೆ ಕೊರೊನಾ ಸೋಂಕು ದೃಢವಾದ ಹಿನ್ನಲೆ ಶಾಲೆಯ ಸುತ್ತಮುತ್ತ ಹಾಗೂ ಕೊಠಡಿಗಳಲ್ಲಿ ಸ್ಯಾನಿಟೈಜಾರ್ ಸಿಂಪರಣೆ ಮಾಡಿದ್ದಾರೆ.
ವಿದ್ಯಾರ್ಥಿ ಮನೆಯಲ್ಲೇ ಹೋಮ್ ಕ್ವಾರಂಟೈನ್ ಆಗಿದ್ದಾಳೆ. ಅಲ್ಲದೆ 9ನೇ ತರಗತಿ ಹಾಗೂ 10ನೇ ತರಗತಿ ಒಟ್ಟು 149 ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ವಿದ್ಯಾರ್ಥಿಗಳ ಕೊರೊನಾ ವರದಿ ಬರುವ ತನಕ ಶಾಲೆಗೆ ಬರದಂತೆ ತಿಳಿಸಿದ್ದಾರೆ. ಹಾಗೂ ವಿದ್ಯಾರ್ಥಿನಿ ಕುಟುಂಬಸ್ಥರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.
ಕುರುಗೋಡು ಸೇರಿದಂತೆ ಬೈಲೂರ್, ಸಿದ್ದಮ್ಮನಹಳ್ಳಿ, ಸೋಮಲಾಪುರ, ಸೋಮಸಮುದ್ರ, ಎರಂಗಳ್ಳಿ, ಎಮ್ಮಿಗನೂರು, ತಿಮ್ಮಲಾಪುರ, ಸೇರಿದಂತೆ ಒಟ್ಟು 17 ಕೊರೊನಾ ಪ್ರಕರಣಗಳು ಕಂಡುಬಂದಿವೆ.