Advertisement

ನಿಯಮ ಪಾಲಿಸದ ಕೇರಳ

11:52 PM Aug 04, 2021 | Team Udayavani |

ಹೊಸದಿಲ್ಲಿ: ಕೇರಳ ಸರಕಾರ ಹೋಂ ಐಸೊಲೇಶನ್‌ನಲ್ಲಿ ಇರುವವರ ಬಗ್ಗೆ, ಸೋಂಕಿತರಿಂದ ಸಂಪರ್ಕಕ್ಕೆ ಬಂದ ವರನ್ನು ತಪಾಸಣೆಗೆ ಒಳಪಡಿಸುವ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದೆ ಎಂದು  ಪರಿಣತರ ವಿಶೇಷ ಸಮಿತಿ ಕೇಂದ್ರಕ್ಕೆ ಸಲ್ಲಿಸಿರುವ ವರದಿಯಲ್ಲಿ ಆರೋಪಿಸಿದೆ.

Advertisement

ದೇಶದ ಒಟ್ಟು ಸೋಂಕು ಸಂಖ್ಯೆಯಲ್ಲಿ ಶೇ.50 ಕೇರಳ ರಾಜ್ಯದಲ್ಲಿಯೇ ದೃಢಪಟ್ಟದ್ದರಿಂದ ಕಳೆದ ವಾರ 6 ಸದಸ್ಯರ ಸಮಿತಿಯನ್ನು ಕಳುಹಿಸಲಾಗಿತ್ತು. ಶೇ.90 ಮಂದಿ ಸೋಂಕಿತರು ಹೋಂ ಐಸೊಲೇಶನ್‌ನಲ್ಲಿ ಇದ್ದಾರೆ. ಆದರೆ, ಅಲ್ಲಿ ನಿಯಮಗಳ ಅನುಷ್ಠಾನ ಗೌಣವೇ ಆಗಿದೆ ಎಂದು ಅಭಿಪ್ರಾಯ ಪಟ್ಟಿದೆ. ಶೇ.80ರಷ್ಟು ಸೋಂಕು ಪತ್ತೆಯನ್ನು ರ್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ ಮೂಲಕವೇ ನಡೆಸ ಲಾಗುತ್ತದೆ  ಎಂದು ಅದು ದೂರಿದೆ.

 108 ಮಂದಿ ಸಾವು: ಕೇರಳದಲ್ಲಿ ಬುಧವಾರ 22,414 ಹೊಸ ಪ್ರಕರಣ ದೃಢಪಟ್ಟಿದ್ದರೆ,  ಎಲ್‌ಡಿಎಫ್ ಸರಕಾರ ಕೊರೊನಾ ನಿಯಮಗಳನ್ನು ಸಡಿಲಿಕೆ ಮಾಡಿದೆ. ರವಿವಾರ ಮಾತ್ರ ವೀಕೆಂಡ್‌ ಲಾಕ್‌ಡೌನ್‌ ಇರಲಿದೆ.

ಶೀಘ್ರ ಪ್ರಯೋಗ?: ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಮಕ್ಕಳಿಗಾಗಿ ಅಭಿವೃದ್ಧಿ ಪಡಿಸುತ್ತಿರುವ ಕೊವೊವಾಕ್ಸ್‌ ಲಸಿಕೆ ಪ್ರಯೋಗ ಶೀಘ್ರ ದಲ್ಲಿಯೇ ಶುರುವಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next